ADVERTISEMENT
Friday, May 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಅಣ್ಣಾವ್ರ ನೆನಪಲ್ಲಿ ಕನ್ನಡಿಗರು: ರಾಜ್ ಕುಮಾರ್ ಜನ್ಮದಿನದ ಸ್ಮರಣೆ

dr rajkumar birth anniversary

Shwetha by Shwetha
April 24, 2025
in ರಾಜ್ಯ, Cinema, Newsbeat, State, ಮನರಂಜನೆ
Share on FacebookShare on TwitterShare on WhatsappShare on Telegram

ಕನ್ನಡ ನಾಡಿಗೆ ಪ್ರತಿ ವರ್ಷ ಏಪ್ರಿಲ್ 24 ಬಂದರೇ, ಒಂದು ಸ್ಮರಣೆ ತಲೆ ಎತ್ತಿ ನಿಲ್ಲುತ್ತದೆ – ಅಣ್ಣಾವ್ರ ಜನ್ಮದಿನ ಅಂತ..

ಹೌದು, ಅವರಿಲ್ಲಿ ಹುಟ್ಟಿದ್ದು, ನಟಿಸಿದ್ದು, ಹಂಚಿಕೊಂಡಿದ್ದು, ಹಾಡಿದ್ದು ಎಲ್ಲವೂ ಕನ್ನಡದ ಹೆಮ್ಮೆ. 1929ರಲ್ಲಿ ಮಂಡ್ಯದ ದೊಡ್ಡಗಾಜನೂರಿನಲ್ಲಿ ಜನಿಸಿದ ಪುಟ್ಟಸ್ವಾಮಿ ಮುತ್ತುರಾಜ್, ಮುಂದೆ ರಾಜ್‌ಕುಮಾರ್ ಅನ್ನೋ ಹೆಸರಿನಲ್ಲಿ ಕನ್ನಡ ಚಿತ್ರರಂಗದ ದೈವವಾಗಿ ರೂಪಾಂತರವಾದರು. ಏಪ್ರಿಲ್ ತಿಂಗಳಲ್ಲೇ ಅವರು ವಿದಾಯ ಕೂಡ ಹೇಳಿದ್ರು ಮತ್ತು ಅಂದು ನಾಡು ಮೌನವಾಗಿದ್ದು ಇಂದಿಗೂ ಮರೆಯಲಾಗದು.

Related posts

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

May 15, 2026
ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

May 15, 2026

ಇವರ ಬಾಲ್ಯ ಹಳ್ಳಿಯ ಜಾನಪದದ ನಡುವೆ, ಭಕ್ತಿಯ ಭಾವನೆಗಳ ನಡುವೆ ಕಳೆದಿತ್ತು.

ಅಣ್ಣಾವ್ರ ನಟನೆಗೆ ಮೊದಲ ಹೆಜ್ಜೆ – ಬೇಡರ ಕಣ್ಣಪ್ಪ (1954). ಈ ಚಿತ್ರದ ಮೂಲಕ ರಾಜ್ ಕುಮಾರ್ ಕೇವಲ ನಾಯಕನಾಗಿ ಅಲ್ಲ, ಭಕ್ತನಾಗಿ, ಸಾಹಸಿಯಾಗಿ, ಸಂಗೀತಸಜ್ಜನನಾಗಿ ಎಲ್ಲರ ಹೃದಯ ಗೆದ್ದರು.

ಈ ಸಿನಿಮಾ ಏನು ಮಾಮೂಲಿ ಅಲ್ಲ. ಇದು ಕನ್ನಡ ಸಿನಿಮಾರಂಗದಲ್ಲಿ ಹೊಸಯುಗದ ಆರಂಭ.

‘ಬಭ್ರುವಾಹನ’, ‘ಮಯೂರ’, ‘ಭಕ್ತ ಪ್ರಹ್ಲಾದ’, ‘ಬಂಗಾರದ ಮನಸು’, ‘ಕಸ್ತೂರಿ ನಿವಾಸ’, ‘ಹೂವು ಹಣ್ಣು’, ‘ಶ್ರವಣ ಬೇಳಗೊಳ’, ‘ಶಂಕರ ಗುರು’, ‘ಮುತ್ತಿನ ಹಾರ’, ‘ಅಕಸ್ಮಿಕ’, ‘ಜೀವನಚೈತ್ರ’… ಹೀಗೆ ಈ ಎಲ್ಲ ಸಿನಿಮಾಗಳಲ್ಲಿ ಅವರು ತೋರಿಸಿದ ಪಾತ್ರಗಳು ಕೇವಲ ಅಭಿನಯ ಅಲ್ಲ. ಅದು ನೈತಿಕ ಮೌಲ್ಯಗಳ ಪಾಠ.

ರಾಜ್‌ಕುಮಾರ್ ಯಾವುದೇ ಪಾತ್ರ ಮಾಡಿದ್ದರೂ, ಆ ಪಾತ್ರ ನಿಜ ಬದುಕಿನಂತೆ ಭಾಸವಾಗುತ್ತಿತ್ತು. ಅವರ ನಟನೆ ಎಷ್ಟು ನಿಜವಾಗಿತ್ತೋ, ಅವರ ಚಿತ್ರಗಳು ನಿಜಕ್ಕೂ ಜೀವಂತ ಪಾಠ ತರಹವಿತ್ತು.

ಪೌರಾಣಿಕ ಪಾತ್ರಗಳಲ್ಲಿ ರಾಜ್‌ಕುಮಾರ್ ಅವರ ಶ್ರದ್ಧೆ ಮತ್ತು ಶಿಸ್ತು ಅಪಾರ. ವಿಶೇಷವಾಗಿ 1966ರ ಮಂತ್ರಾಲಯ ಮಹಾತ್ಮೆ – ಇದು ಅವರ ಮನಸ್ಸಿಗೆ ಹತ್ತಿರದ ಚಿತ್ರ. ಈ ಚಿತ್ರದಲ್ಲಿ ಅವರು ಶ್ರೀರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡಿದ್ದರು.

ಅವರ ಮುಖಭಾವ, ಧ್ವನಿ, ಶ್ರದ್ಧೆ ತುಂಬಿದ ನಟನೆಯಿಂದ ರಾಜ್ ಕುಮಾರ್ ದೇವರಂತೆ ಕಾಣಿಸುತ್ತಿದ್ದರು ಅಂತ ಅಭಿಮಾನಿಗಳು ಹೇಳುತ್ತಾರೆ

ಅವರು ಹಾಡಿದ ಹಳೆ ಹಾಡುಗಳು – “ಜೋಗದ ಸಿರಿವೇಣು”, “ನಾದ ಭ್ರಾಮರ”, “ಮತ್ತೊಮ್ಮೆ ಬಾ ಹೃದಯದೊಳಗೆ”, “ಕಣ್ಮನಸು ಕೊಟ್ಟೆ ನಿನ್ನ” – ಇವತ್ತಿಗೂ ಎಲ್ಲರ ಮನದಲ್ಲಿ ಹಸಿರಾಗಿ ಉಳಿದಿವೆ.

ಈಗಲೂ ಈ ಹಾಡುಗಳು ಕನ್ನಡಿಗರ ಪ್ಲೇ ಲಿಸ್ಟ್’ನ ಟಾಪ್-5ರಲ್ಲಿ ಇರುತ್ತದೆ.

ಅವರು ಬೇರೆ ಯಾವುದೇ ಭಾಷೆಯಲ್ಲಿ ನಟಿಸಿಲ್ಲ, ಹಾಡಿಲ್ಲ, ದುಡಿಮೆಯೂ ಮಾಡಿಲ್ಲ. ಅವರು ತಾವು ಹುಟ್ಟಿದ ನಾಡಿಗೆ ಮಾತ್ರ ನಿಷ್ಠರಾಗಿ ಇದ್ದರು.

ಅವರು ನಮ್ಮ ನಟ ಮಾತ್ರವಲ್ಲ. ಅವರು ನಮ್ಮ ಮನೆಯ ಸದಸ್ಯ. ಅವರ ಹಾಡುಗಳೇ ನಮಗೆ ಲಾಲಿ ಹಾಡು. ಅವರ ಮಾತುಗಳು ನಮಗೆ ಜೀವನ ಪಾಠ.

2006ರ ಏಪ್ರಿಲ್ 12ರಂದು ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಮ್ಮಿಂದ ದೂರವಾದರು.

ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನರು ಬಂದಿದ್ದರು. ಕಣ್ಣೀರು, ಶೋಕ, ನೆನೆಪು… ಇವತ್ತಿಗೂ ಅದು ಮರೆಯಲಾಗದ ದಿನ.

‘ಅಣ್ಣಾವ್ರು’ ಅಂದ್ರೆ ಅದೊಂದು ಭಾವನೆ. ಅವರ ಜೀವನವೆಂದರೆ ನಮ್ಮ ಜೀವನದ ಪ್ರೇರಣೆ. ಅವರು ಕಲಿಸಿದ ನಡವಳಿಕೆ, ಶಿಸ್ತು, ಧೈರ್ಯ, ನಿಷ್ಠೆ – ಇವತ್ತಿನ ಯುವಕರಿಗೆ ಕನ್ನಡಿ.

ಅವರು ಪ್ರತಿದಿನ ಯೋಗ ಮಾಡುತ್ತಿದ್ದರು. ಕುಸ್ತಿ, ಜಿಮ್ನಾಸ್ಟಿಕ್ಸ್‌ನಲ್ಲಿ ಆಸಕ್ತರಾಗಿದ್ದವರು.

ಡಾ. ರಾಜ್ ಕುಮಾರ್ ಅಂದ್ರೆ ಕನ್ನಡದ ಹೆಮ್ಮೆ. ಇವತ್ತು ಅವರ ಹುಟ್ಟುಹಬ್ಬ. ಅವರಿಗೆ ನಮ್ಮ ನಮನ.

ಅವರ ಬದುಕು, ಅವರ ಕಥೆಗಳು, ಅವರ ಹಾಡುಗಳನ್ನು ಇವತ್ತು ಮತ್ತೆ ಕೇಳೋಣ, ನೆನಪಿಸಿಕೊಳ್ಳೊಣ.

ShareTweetSendShare
Join us on:

Related Posts

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

by Shwetha
May 15, 2026
0

ರಾಜ್ಯ ರಾಜಕಾರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಶಾಸಕ ಕೆ.ಎನ್. ರಾಜಣ್ಣ ಅವರು ನೀಡಿರುವ ಹೇಳಿಕೆಯೊಂದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ದೇಶ ಕಂಡ ದಿವಂಗತ...

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

by Shwetha
May 15, 2026
0

ಉಪ ಚುನಾವಣೆಯಲ್ಲಿ ಜಯಗಳಿಸಿದ ನಾಯಕರು ಗುರುವಾರ ಅಧಿಕೃತವಾಗಿ ಶಾಸಕರಾಗಿ ಪದಗ್ರಹಣ ಮಾಡಿದರು. ಉಮೇಶ್ ಮೇಟಿ ಹಾಗೂ ಸಮರ್ಥ್ ಶಾಮನೂರು ಅವರು ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ...

ರಾಜಕೀಯಕ್ಕಾಗಿ ದೇಶದ ಗೌರವವನ್ನು ಅಡ ಇಡುವುದಿಲ್ಲ, ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಮಾತು

ಕೋರ್ಟ್ ಆದೇಶದಂತೆ GBA ಚುನಾವಣೆ..! ಡಿಕೆ ಶಿವಕುಮಾರ್ ಸ್ಪಷ್ಟನೆ

by Shwetha
May 15, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಪಾಲಿಕೆ ಚುನಾವಣೆಯನ್ನು ಮುಂದೂಡಲಾಗುತ್ತದೆಯೇ ಎಂಬ ಚರ್ಚೆಗಳ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಕೋರ್ಟ್ ನಿರ್ದೇಶನದಂತೆ GBA...

ಫೆಬ್ರವರಿ 16ಕ್ಕೆ ಮತ್ತೊಂದು ‘ಸಿದ್ದರಾಮೋತ್ಸವ’? ಕಾಂಗ್ರೆಸ್ ಒಳರಾಜಕಾರಣಕ್ಕೆ ಮತ್ತೆ ವೇದಿಕೆ

ಹಿಜಾಬ್ ಗೆ ಗ್ರೀನ್ ಸಿಗ್ನಲ್ ಕೇಸರಿ ಶಾಲಿಗೆ ನೋ ಸಿಎಂ ಸಿದ್ದರಾಮಯ್ಯ ಬಿಗ್ ಸ್ಟೇಟ್ ಮೆಂಟ್

by Shwetha
May 15, 2026
0

ರಾಜ್ಯದಲ್ಲಿ ಮತ್ತೆ ಹಿಜಾಬ್ ಮತ್ತು ಸಮವಸ್ತ್ರ ಸಮರ ಮುನ್ನೆಲೆಗೆ ಬಂದಿದೆ. 2022ರ ಹಿಂದಿನ ಸರ್ಕಾರದ ಆದೇಶವನ್ನು ರದ್ದುಗೊಳಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಹೊಸ ಆದೇಶ...

ಸಿದ್ದರಾಮಯ್ಯ ಅವರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು

ಸಿದ್ದರಾಮಯ್ಯ ಅವರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು

by Shwetha
May 15, 2026
0

ರಾಜ್ಯ ರಾಜಕೀಯದ ಇಬ್ಬರು ಬದ್ಧ ಎದುರಾಳಿಗಳಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವಿನ ವಾಗ್ಯುದ್ಧ ಈಗ ಮತ್ತೊಂದು ಹಂತಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram