ದುಬೈ : ಐಪಿಎಲ್ ದಂಗಲ್ ನ ನಾಲ್ಕನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ – ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿವೆ. ಈ ಹೈ ವೋಲ್ಟೇಜ್ ಮ್ಯಾಚ್ ಗೆ ಶಾರ್ಜಾ ಅಂಗಳ ಸಜ್ಜಾಗಿದೆ.
ಈಗಾಗಲೇ ಮೊದಲ ಪಂದ್ಯ ಗೆದ್ದಿರುವ ಧೋನಿ ಪಡೆ, ಇಂದಿನ ಪಂದ್ಯವೂ ಗೆದ್ದು ವಿಜಯಯಾತ್ರೆ ಮುಂದುವರಿಸುವ ಕಾತರದಲ್ಲಿದ್ದಾರೆ.
ಇತ್ತ ಟೂರ್ನಿಯಲ್ಲಿ ಮೊದಲ ಮ್ಯಾಚ್ ಆಡುತ್ತಿರುವ ರಾಜಸ್ಥಾನ ರಾಯಲ್ಸ್ ಇಂದಿನ ಪಂದ್ಯ ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದ್ದಾರೆ.
ತಂಡಗಳ ಬಲಾಬಲ
ಚೆನ್ನೈ ಸೂಪರ್ ಕಿಂಗ್ಸ್
ಸಂಘಟಿತ ಹೋರಾಟವೇ ಸಿಎಸ್ ಕೆ ಗೆಲುವಿನ ಗುಟ್ಟು.
ಎಂತಹದ್ದೆ ಸಂದರ್ಭ ಇದ್ದರೂ ಗೆಲುವಿನ ವಿಶ್ವಾಸ ಕಳೆದುಕೊಳ್ಳದೇ ಮುನ್ನುಗ್ಗುವುದು ಚೆನ್ನೈನ ಬಲ.
ಬ್ಯಾಟಿಂಗ್ ನಲ್ಲಿ ಶೇನ್ ವಾಟ್ಸಾನ್, ರಾಯುಡು, ಡುಪ್ಲಸಿಸ್, ಧೋನಿ ಪ್ರಮುಖ ಅಸ್ತ್ರಗಳಾದರೇ, ದೀಪಕ್ ಚಹರ್, ಸ್ಯಾಟ್ನರ್, ತಾಹಿರ್ ಬೌಲಿಂಗ್ ವೆಪನ್ ಗಳು.
ಇನ್ನು ಆಲ್ ರೌಂಡರ್ ಗಳಾದ ಬ್ರಾವೋ, ಜಡೇಜಾ, ಜಾಧವ್ ಯಾವುದೇ ಸಂದರ್ಭದಲ್ಲಾದರೂ ಪಂದ್ಯದ ಗತಿಯನ್ನು ಬದಲಿಸಬಲ್ಲರು.
ರಾಜಸ್ಥಾನ್ ರಾಯಲ್ಸ್
ಇದು ರಾಯಲ್ಸ್ ನ ಮೊದಲ ಪಂದ್ಯವಾಗಿದ್ರೂ, ತಂಡದಲ್ಲಿ ಹಿರಿಯ ಕಿರಿಯ ಆಟಗಾರರ ಸಮ್ಮಿಲನವಿದೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ

ಬ್ಯಾಟಿಂಗ್ ನಲ್ಲಿ ಮಿಂಚು ಹರಿಸಬಲ್ಲ, ಸ್ಮಿತ್, ಉತ್ತಪ್ಪ, ಮಿಲ್ಲರ್, ಸ್ಯಾಮ್ಸನ್ ರಂತಹ ದಾಂಡಿಗರಿದ್ದಾರೆ.
ಇನ್ನು ಬೌಲಿಂಗ್ ನಲ್ಲಿ ವರೂಣ್ ಆರೋನ್, ಉನಾದ್ಕತ್, ಶ್ರೇಯಾಸ್ ಗೋಪಾಲ್ ಎದುರಾಳಿಗಳ ಮೇಲೆ ದಂಡಯಾತ್ರೆ ಮಾಡಬಲ್ಲರು.
ಆದ್ರೆ ಇವರು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಆಡಬೇಕಿದೆ. ಎಕ್ಸಪೀರಿಯನ್ಸ್ ಬೌಲಿಂಗ್ ಲೈನಪ್ ಇಲ್ಲದೇ ಇರೋದು ತಂಡದ ಹಿನ್ನೆಡೆಗೆ ಕಾರಣವಾಗಬಹುದು.
ರಾಯಲ್ಸ್ ವಿರುದ್ಧ ಚೆನ್ನೈ ಮೇಲು ಗೈ
ಐಪಿಎಲ್ ನ ಇತಿಹಾಸ ನೋಡಿದರೇ ರಾಯಲ್ ವಿರುದ್ಧ ಚೆನ್ನೈ ಸವಾರಿ ಮಾಡಿದೆ.
ಇದುವರೆಗೂ 21 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಚೆನ್ನೈ 14 ಪಂದ್ಯಗಳಲ್ಲಿ ಜಯ ಪಡೆದಿದ್ದರೇ ರಾಜಸ್ಥಾನ 7 ಪಂದ್ಯಗಳಲ್ಲಿ ಜಯ ಪಡೆದಿದೆ.








