ಸಾಮಾನ್ಯವಾಗಿ ಜನರು ಟೈಂ ಪಾಸ್ ಮಾಡೋದಕ್ಕೆ ಸ್ನೇಹಿತರ ಜೊತೆ ಔಟಿಂಗ್ ಹೋಗ್ತಾರೆ. ಅಥವಾ ಫ್ಯಾಮಿಲಿ ಜೊತೆಗೆ ಟ್ರಿಪ್ ಹೋಗಿ ಎಂಜಾಯ್ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಭೂಪ ಮೊಸಳೆಯ ಜೊತೆಗೆ ಸಮಯ ಕಳೆಯುದಿದ್ದು, ಅದನ್ನ ಎಂಜಾಯ್ ಮಾಡಿದ್ದಾರೆ. ಅಬ್ಬಾ ಕೇಳಿದ್ರೇನೆ ಮೈ ಝುಮ್ಮೆನ್ನುತ್ತೆ. ಆದ್ರೆ ಈ ವ್ಯಕ್ತಿ ಯಾವುದೇ ಹೆದರಿಕೆ ಇಲ್ಲದೇ ಸರಾಗವಾಗಿ ಮೊಸಳೆಯ ಮೂತಿ ಹಿಡಿದು, ಅದರ ಜೊತೆಗೆ ಕಾಲ ಕಳೆದಿದ್ದು, ಈ ವಿಡಿಯೋಗೆ ನೆಟ್ಟಿಗರು ಶಾಕ್ ಆಗಿದ್ದಾರೆ.
ಇನ್ನೂ ಕೆಲವರು ಇದ್ರಲ್ಲಿ ವಿಶೇಷ ಏನಿದೆ. ಈ ರೀತಿ ಸಾಕಷ್ಟು ದೃಶ್ಯಗಳನ್ನ ನಾವು ನೋಡಿದ್ದೇವೆ. ಸಾಕು ಪ್ರಾಣಿಗಳಾಗಲಿ, ಅಥವಾ ಕಾಡು ಪ್ರಾಣಿಗಳನ್ನ ಅದರ ಟ್ರೈನರ್ ಗಳು ಆರೀತಿ ಪಳಗಿಸಿರುತ್ತಾರೆ. ಆಗ ಪ್ರಾಣಿಗಳು ಮಾತು ಕೇಳೋದು ಸಹಜ ಅಂತ ಅಂದ್ಕೋಬೇಡಿ. ಯಾಕಂದ್ರೆ ಈ ವ್ಯಕ್ತಿ ಮೊಸಳೆಗಳ ಟ್ರೈನರ್ ಅಲ್ಲ.. ಬದಲಾಗಿ ಅಪರಿಚಿತರು. 
ಹೌದು ಕೆಲವೊಮ್ಮೆ ಸಾಕಿದವರೇ ಟ್ರೈನರ್ ಗಳ ಮೇಲೆ ಪ್ರಾಣಿಗಳು ಎರಗಿ ಬಿದ್ದಿರುವುದು , ತಮ್ಮ ಟ್ರೈನರ್ ಗಳ ಜೀವ ಬಲಿಪಡೆದ ಪ್ರಕರಣಗಳನ್ನ ನಾವು ನೋಡಿದ್ದೇವೆ. ಹೀಗಿರೋವಾಗ. ಅಪರಿಚಿತರು ಆ ಮೊಸಳೆ ಜೊತೆಗೆ ಇಷ್ಟು ಸರಾಗವಾಗಿ ಕಾಲ ಕಳೆದಿರುವುದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ.
ಎಸ್ ಆಸ್ಟ್ರೇಲಿಯಾ ಮೂಲದ ಮ್ಯಾಟ್ ರೈಟ್ ಎಂಬಾತ ಆತನ ಗೆಳೆಯ ನಾರ್ತನ್ ಜೊತೆಗೆ ಕಾಡಿಗೆ ತೆರಳಿದ್ದರು. ಟೆರರಿಟೆರಿಯಲ್ಲಿನ ಝರಿಯೊಂದರಲ್ಲಿ ಇಬ್ಬರೂ ಕಟ್ಟಿಗೆಯನ್ ನ ಎಳೆತರುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಮೊಸಳೆ ಬಂದಿದೆ. ಆದ್ರೆ ಮ್ಯಾಟ್ ಮೊಸಳೆ ನೋಡಿ ಹೆದರದೇ ಅದರ ಜೊತೆಗೆ ಸಂಯಮದಿಂದ ವರ್ತಿಸಿದ್ದಾರೆ. ಮೊಸಳೆಯ ಕೂಡ ಪ್ರತಿದಾಳಿ ನಡೆಸದೇ ಆತನನ್ನ ಹಿಂಬಾಲಿಸಿದೆ. ಎಷ್ಟರ ಮಟ್ಟಿಗೆಂದರೆ ಮ್ಯಾಟ್ ಹಾಗೂ ಆತನ ಗೆಳೆಯ ಗೋ ಅವೇ ಹೊರಟು ಹೋಗು ಎಂದರೂ ಅವರನ್ನು ಹಿಂಬಾಲಿಸಿದೆ.. ಸದ್ಯ ಈ ವಿಡಿಯೋ ಸೋಷಿಯ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವನ್ಯ ಜೀವಿಗಳು ಹಾಗೂ ಮನುಷ್ಯರ ನಡುವಿನ ಅಪರೂಪದ ಬಾಂಧವ್ಯಕ್ಕೆ ನೆಟಿಜನ್ಸ್ ಫಿದಾ ಆಗಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
https://www.instagram.com/tv/CFIUdwvnbnF/?utm_source=ig_web_button_share_sheet








