ರಾಕಿಂಗ್ ಸ್ಟಾರ್ ಯಶ್ ಅವರ ಬಾಲ್ಯದ ಗೆಳೆಯರಾಗಿರುವ ಅರ್ಜುನ್ ಕೃಷ್ಣ ಅವರು ಇದೀಗ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಯಶ್ ಸ್ನೇಹಿತರಾದ ಅರ್ಜುನ್ ಕೃಷ್ಣ ಅವರು ತಮ್ಮ ಚೊಚ್ಚಲ ಸಿನೆಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ರಾಧಿಕಾ , ಯಶ್ ಅರ್ಪಿಸುತ್ತಿರುವ AAA ಫಿಲ್ಮ್ಸ್ ಬ್ಯಾನರ್ ಅಡಿ ಮೂಡಿ ಬರುತ್ತಿರುವ ಕನ್ನಡದ ಹೊಸ ಸಿನೆಮಾಗೆ DAD ಎಂದು ಟೈಟಲ್ ಇಡಲಾಗಿದೆ.
DAD .. ಹೆಸರೇ ವಿಭಿನ್ನವಾಗಿದ್ದು, ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. DAD ಅಂದ್ರೆ ದೇವರಾಜ್ ಅಲಿಯಾಸ್ ಡೇವಿಡ್.
ಈಗಾಗಲೇ ಚಿತ್ರದ ಮೇಕರ್ಸ್ ಸಿನೆಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಪ್ರೇಕ್ಷರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.
ಚಿತ್ರದ ಶೂಟಿಂಗ್ ಭಾಗಶಃ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬಾಕಿ ಇದೆ. ಶೀಘ್ರದಲ್ಲೇ ಚಿತ್ರದ ರಿಲೀಸ್ ಡೇಟ್ ಸಹ ರಿವೀಲ್ ಆಗಲಿದೆ.
ಇನ್ನೂ ಚಿತ್ರದ ಪೋಸ್ಟರ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.

ಈ ಚಿತ್ರದಲ್ಲಿ ವಿಶಾಲ್ ನಾಯಕನಾಗಿದ್ರೆ, ಮಾಹಿಕಾ ಮಾಹಿ ಹಾಗೂ ನೃತ್ಯ ಬೋಪಣ್ಣ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಪೋಷಕನಟನಾಗಿ ಖ್ಯಾತ ನಟ ಸುಚೇಂದ್ರ ಪ್ರಸಾದ್ ಹಾಗೂ ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಂಜು ನಟಣ ಸೇರಿದಂತೆ ಹಲವರ ತಾರಾಬಳಗವಿದೆ.
ವಿಶೇಷ ಅಂದ್ರೆ ಚಿತ್ರಕ್ಕೆ ಅರ್ಜುನ್ ಕೃಷ್ಣ ಅವರೇ ಸ್ಕ್ರಿಪ್ಟ್ ಬರೆದಿದ್ದು, ಡೈರೆಕ್ಟ್ ಮಾಡುವ ಜೊತೆಗೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅನಿಲ್ ಕುಮಾರ್ ಛಾಯಾಗ್ರಹಣವಿದೆ.








