ಚಿಕ್ಕಬಳ್ಳಾಪುರ: ಅಂಗಡಿ ಮುಂದೆ ಉಗುಳಿದ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನ ಕೊಲೆಮಾಡಲಾಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯ ಉಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂಗಡಿ ಮಾಲಿಕನ ಮಗ ಚೇತನ್ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕಾಫಿ ಪುಡಿ ತರಲು ಅಂಗಡಿಗೆ ಹೊಗಿದ್ದ ಮುನಿಕೃಷ್ಣ ಎಂಬಾತ ಅಂಗಡಿ ಎದುರು ಎಂಜಲು ಉಗಿದಿದ್ದಾನೆ.
ಇದರಿಂದ ಕುಪಿತಗೊಂಡ ಚೇತನ್ ಎಂಜಲು ಉಗಿಯಬೇಡ ಎಂದು ಬುದ್ದಿವಾದ ಹೇಳಿದ್ದಾನೆ.
ಈ ವೇಳೆಯಲ್ಲಿ ಇಬ್ಬರ ಮದ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿ ಸಾವಿನಲ್ಲಿ ಅಂತ್ಯವಾಗಿದೆ.
ಮುನಿಕೃಷ್ಣನ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚೇತನ್ ಚಾಕುವಿನಿಂದ ಮೂರು ಬಾರಿ ತಿವಿದಿದ್ದಾನೆ.
ಪರಿಣಾಮ ಮುನಿಕೃಷ್ಣನ ಸ್ಥಿತಿ ಗಂಭಿರವಾಗಿತ್ತು. ಗ್ರಾಮಸ್ಥರು ಗಾಯಾಳುಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕರೆದೊಯ್ಯುವ ವೇಳೆ ಮಾರರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.