ಮುಂಬೈ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಡೀನ್ ಜೋನ್ಸ್ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಸ್ಟಾರ್ ಸ್ಪೋಟ್ರ್ಸ್ ಕಾಮೆಂಟರಿ ತಂಡದ ಭಾಗವಾಗಿದ್ದ ಜೋನ್ಸ್, ಮುಂಬೈನ ಸೆವೆನ್ ಸ್ಟಾರ್ ಹೋಟೆಲ್ ನಲ್ಲಿ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಏಷ್ಯಾ ಕ್ರಿಕೆಟ್ ನೊಂದಿಗೆ ಸಂಬಂಧ ಹೊಂದಿದ್ದ ಮಹಾನ್ ರಾಯಭಾರಿಗಳಲ್ಲಿ ಡೀನ್ ಜೋನ್ಸ್ ಒಬ್ಬರು.
ಡೀನ್ ಜೋನ್ಸ್ ಆಸೀಸ್ ಪರ 52 ಟೆಸ್ಟ್ ಮತ್ತು 164 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ನಲ್ಲಿ ಜೋನ್ಸ್ 3631 ರನ್ ಬಾರಿಸಿದ್ದು, 11 ಶತಕ, 14 ಅರ್ಧಶತಕಗಳಿವೆ.
ಏಕದಿನ ಮಾದರಿಯಲ್ಲಿ 6068 ರನ್ ಗಳಿಸಿದ್ದು, ಇದರಲ್ಲಿ 7 ಶತಕಗಳು, 46 ಅರ್ಧಶತಕಗಳಿವೆ.








