ತಮ್ಮ ಆರೋಗ್ಯದ ಗುಟ್ಟನ್ನು ಬಹಿರಂಗ ಪಡಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಸೆಪ್ಟೆಂಬರ್25: ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಫಿಟ್ನೆಸ್ ಪ್ರಭಾವಿಗಳು, ಗಣ್ಯರು ಮತ್ತು ನಾಗರಿಕರೊಂದಿಗೆ ರಾಷ್ಟ್ರವ್ಯಾಪಿ ಆನ್ಲೈನ್ ಫಿಟ್ ಇಂಡಿಯಾ ಸಂವಾದ ಕಾರ್ಯಕ್ರಮ ನಡೆಸಿದರು.
ಫಿಟ್ನೆಸ್ ಕಿ ಡೋಸ್, ಆಧಾ ಘಂಟಾ ರೋಜ್ ಎಂಬ ಹೊಸ ಘೋಷಣೆಯನ್ನು ಪಿಎಂ ಮೋದಿ ಪರಿಚಯಿಸಿದರು. ನಾಗರಿಕರನ್ನು ದಿನದಲ್ಲಿ ಕನಿಷ್ಠ ಅರ್ಧ ಘಂಟೆ ವ್ಯಾಯಾಮ ಮಾಡಲು ಪ್ರೋತ್ಸಾಹಿಸಿದರು.
ಪೌಷ್ಠಿಕಾಂಶ ತಜ್ಞ ರುಜುಟಾ ದಿವೇಕರ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಮಾಡೆಲ್-ನಟ ಮತ್ತು ಓಟಗಾರ ಮಿಲಿಂದ್ ಸೋಮನ್ ಮುಂತಾದ ಪ್ರಮುಖರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇಂದಿನಿಂದ ಮಂಗಳೂರಿನಿಂದ ಮುಂಬೈಗೆ ಬಸ್ ಸಂಚಾರ ಪ್ರಾರಂಭ
ಸಂವಾದ ಕಾರ್ಯಕ್ರಮದಲ್ಲಿ, ಪ್ರಧಾನಿ ತಮ್ಮ ಫಿಟ್ನೆಸ್ ಮಂತ್ರವನ್ನು ಬಹಿರಂಗಪಡಿಸಿದರು. ಜೊತೆಗೆ ಅವರ ವಿಶೇಷ ಪಾಕವಿಧಾನವನ್ನು ಪ್ರಸ್ತಾಪಿಸಿದರು. ಪ್ಯಾಕೆಟ್ ಆಹಾರದ ಬದಲು, ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಕಾರಣ, ಮನೆಯಲ್ಲಿ ತಯಾರಿಸುವ ಸಾಮಾನ್ಯ ಆಹಾರವನ್ನು ಸೇವಿಸಿ ಸದೃಢವಾಗಿರಬಹುದು ಎಂದು ಅವರು ಹೇಳಿದರು.
ಕೊರೋನವೈರಸ್ ಸಮಯದಲ್ಲಿ ಫಿಟ್ನೆಸ್ಗೆ ಹೊಸ ವ್ಯಾಖ್ಯಾನ ಸಿಕ್ಕಿದೆ ಮತ್ತು ಇದು ಜನರ ಚಳುವಳಿಯಾಗಿ ಮಾರ್ಪಟ್ಟಿದೆ. ಇದು ಪ್ರತಿ ವಯಸ್ಸಿನವರಿಗೂ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಮೊಬೈಲ್ ಅನ್ನು ಮೊಬೈಲ್ ಸೇವಾ ಕೇಂದ್ರದಲ್ಲಿ ಬಿಡುವ ಮೊದಲು ಈ ವಿಷಯಗಳನ್ನು ಗಮನಿಸಿ
ಆರೋಗ್ಯಕರ ಆಹಾರದ ಬಗ್ಗೆ ಮಾತನಾಡುತ್ತಾ , ನನಗೂ ಒಂದು ಪಾಕವಿಧಾನವಿದೆ ಎಂದು ಪ್ರಧಾನಿ ಹೇಳಿದರು. ನುಗ್ಗೆಕಾಯಿಯ ಪರೋಟಾ (ಡ್ರಮ್ ಸ್ಟಿಕ್ ಫ್ಲಾಟ್ ಬ್ರೆಡ್/ ಮೊರಿಂಗಾ ಪರಾಥಾ) ಎಂಬ ಆರೋಗ್ಯಕರ ಆಹಾರವನ್ನು ತಾನು ಸೇವಿಸುವುದಾಗಿ ಅವರು ಹೇಳಿದರು.
ತಮ್ಮ ವಿಶೇಷ ಪಾಕವಿಧಾನವನ್ನು ಸಾರ್ವಜನಿಕರಿಗೆ ತಿಳಿಸಿಕೊಡುವುದಾಗಿ ಪ್ರಧಾನಿ ಹೇಳಿದರು. ನನಗೂ ಒಂದು ಪಾಕವಿಧಾನವಿದೆ..ಇದು ನುಗ್ಗೆಕಾಯಿಯ ಪರೋಟಾ (ಮೊರಿಂಗಾ ಪರಾಥಾ) … ಇದು ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿದೆ … ಅದನ್ನು ವಾರಕ್ಕೊಮ್ಮೆ ತಯಾರಿಸಲು ಮತ್ತು ಸೇವಿಸಲು ಬಯಸುತ್ತೇನೆ. ಇದನ್ನು ತಯಾರಿಸುವ ವಿಧಾನವನ್ನು ನಾನು ಸಾರ್ವಜನಿಕರಿಗೆ ನೀಡುತ್ತೇನೆ ಎಂದು ತಮ್ಮ ಆರೋಗ್ಯದ ಗುಟ್ಟನ್ನು ಬಹಿರಂಗ ಪಡಿಸಿದರು.
https://twitter.com/narendramodi/status/1309018659243855873?s=19
ಫಿಟ್ನೆಸ್ನ ಪ್ರಾಮುಖ್ಯತೆ ಮತ್ತು ಆರೋಗ್ಯಕರ ಆಹಾರದ ಬಗ್ಗೆ ಮಾತನಾಡುವಾಗ, ಅವರು ಹಳದಿ (ಅರಿಶಿನ) ಹಾಲಿನ ಬಗ್ಗೆ ವಿವರಿಸಿದರು.
ಕೋವಿಡ್-19 ರ ಕಠಿಣ ಸಮಯದಲ್ಲಿ, ನಾನು ವಾರಕ್ಕೆ ಎರಡು ಅಥವಾ ಮೂರು ಬಾರಿ ತಮ್ಮ ತಾಯಿಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇನೆ.ಅವರು ಪ್ರತಿ ಬಾರಿಯೂ ಹಲ್ಡಿ ಹಾಲನ್ನು ತೆಗೆದುಕೊಳ್ಳುವೇನೆ ಅಥವಾ ಇಲ್ಲವೇ ಎಂದು ವಿಚಾರಿಸುತ್ತಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಅರಿಶಿನವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ ಮತ್ತು ಇತರ ಆರೋಗ್ಯ ಪ್ರಯೋಜನಗಳು ಅದರಲ್ಲಿದೆ ಎಂದು ಪ್ರಧಾನಿ ಹೇಳಿದರು.








