ಸಂಗೀತ ನಿರ್ದೇಶಕ ಗುರುಕಿರಣ್
ಸಂಗೀತ ಲೋಕದ ದಿಗ್ಗಜ ಎಸ್ ಪಿಬಿ ಅವರ ಅಗಲಿಕೆಯಿಂದಾಗಿ ಸಂಗೀತ ಲೋಕದಲ್ಲಿ ನೀರವ ಮೌನ ಆವರಿಸಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮಹಾನ್ ಸಂಗೀತ ನಾಯಕ ಎಸ್ ಪಿಬಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
“ ನನ್ನ ಪ್ರಕಾರ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನದಿಂದ ಒಂದು ಯುಗಾಂತ್ಯವಾಗಿದೆ. ಎಸ್‌ಪಿಬಿ ಇಲ್ಲದ ಭಾರತೀಯ ಚಿತ್ರರಂಗವನ್ನ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗವನ್ನ ಕಲ್ಪಿಸಿಕೊಳ್ಳುವುದೂ ಕಷ್ಟ.
ಒಂದು ತಲೆಮಾರು ಸಿನಿಮಾ ಸಂಗೀತದಲ್ಲಿ ಅನಭಿಷಕ್ತ ದೊರೆಯಾಗಿ ಬದುಕಿದ್ದವರು ಎಸ್‌ಪಿಬಿಯವರು.
ನನ್ನ ಸಂಗೀತ ನಿರ್ದೇಶನದ ಮೊದಲ ಸಿನಿಮಾ ‘ಎ’ ದಲ್ಲಿ ‘ಮಾರಿಕಣ್ಣು ಹೋರಿ ಮ್ಯಾಗೆ’ ಹಾಡನ್ನು ಎಸ್‌ಪಿಬಿ ಹಾಡಿದ್ದರು. ಆ ಹಾಡು ರಾತ್ರೋರಾತ್ರಿ ಸೂಪರ್ ಹಿಟ್ ಆಯ್ತು.
ಬಳಿಕ ನನ್ನ ಅವರ ನಡುವಿನ ಸಂಬಂಧ ಗಾಢವಾಯ್ತು. ಆನಂತರ ನಾನು ಸಂಗೀತ ನೀಡಿದ ಅನೇಕ ಹಾಡುಗಳಿಗೆ ಎಸ್‌ಪಿಬಿ ಧ್ವನಿಯಾದರು. ಕಲೆಗೆ ಕೊಡುತ್ತಿದ್ದ ಗೌರವ, ಸಿಂಪ್ಲಿಸಿಟಿ ವಿಷಯದಲ್ಲಿ ಎಸ್ ಪಿಬಿ ಇಂದಿನ ಅದೆಷ್ಟೋ ಕಲಾವಿದರಿಗೆ ಮಾದರಿ” ಎಂದಿದ್ದಾರೆ.