ತಮ್ಮ ಹಾಡುಗಳ ಮೂಲಕ ನಮ್ಮನ್ನೆಲ್ಲ ರಂಚಿಸಿದ್ದ ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಹ್ಮಣ್ಯಂ ಇಂದು ಕೊನೆಯುಸಿರೆಳೆದಿದ್ದಾರೆ. ಎಸ್ ಪಿಬಿ ಮತ್ತೆ ಹಾಡುವಂತೆ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದ ಕೋಟ್ಯಾಂತರ ಅಭಿಮಾನಿಗಳಿಗೆ ಬಾಲು ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ.
ಸಂಗೀತವನ್ನೇ ಜೀವನ, ಜೀವವಾಗಿಸಿಕೊಂಡಿದ್ದ ಬಾಲಸುಬ್ರಹ್ಮಣಂ ನಿಧನ ಸಂಗೀತ ಲೋಕವನ್ನು ಅನಾಥವಾಗಿಸಿದೆ. ಇನ್ನು ಎಸ್ ಪಿಬಿ ಅವರನ್ನು ಬದುಕಿಸಿಕೊಳ್ಳಬೇಕು ಎಂದು ಪಣತೊಟ್ಟಿದ್ದ ವೈದ್ಯರು ಆಸ್ಪತ್ರೆಯಲ್ಲಿ ಸಂಗೀತ ಥೆರಪಿ ನಡೆಸಿದ್ದರು.
ನಾಳೆ ಬೆಳಿಗ್ಗೆ 11 ಗಂಟೆಗೆ ‘ಎಸ್.ಪಿ.ಬಾಲಸುಬ್ರಹ್ಮಣ್ಯಂ’ ಅಂತ್ಯಕ್ರಿಯೆ
ಹೌದು..! ಕೊರೊನಾ ಸೋಂಕಿಗೆ ತುತ್ತಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತ ಸಾಗಿತ್ತು. ನುರಿತ ವೈದ್ಯರಿಂದ ಚಿಕಿತ್ಸೆ ಮುಂದುವರಿದರೂ ಕೂಡ ಬಾಲು ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಬಳಿಕ ಚಿಕಿತ್ಸೆಗೆ ಸ್ಪಂದಿಸಿದ ಎಸ್ ಪಿಬಿ ಕೊರೊನಾದಿಂದ ಚೇತರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಸಂಗೀತ ಕೇಳುವ ಬಯಕೆಯನ್ನು ವ್ಯಕ್ತಪಸಿದ್ದರು. ಹೀಗಾಗಿ ಅವರಿದ್ದ ಎಂಜಿಎಂ ಆಸ್ಪತ್ರೆಯ ಮೂರನೇ ಮಹಡಿಯ ವಿಶೇಷ ಕೊಠಡಿಯಲ್ಲಿ ಸ್ಪೀಕರ್ ಗಳನ್ನು ಅಳವಡಿಸಿ, ಅವರೇ ಹಾಡಿರುವ ಹಾಡುಗಳನ್ನು ಕೇಳಿಸಲಾಗುತ್ತಿತ್ತು.
ಅವರು ಹಾಡಿರುವ ಭಕ್ತಿಗೀತೆ, ಭಾವಗೀತೆ, ಸಿನಿಮಾ ಗೀತೆ ಎಲ್ಲವನ್ನೂ ಅಲ್ಲಿಯೇ ಕೇಳಿಸಿದ್ದರು. ಅದೇ ಅವರನ್ನು ಕಾಪಾಡಲಿ ಎನ್ನುವುದು ವೈದ್ಯರ ಉದ್ದೇಶವಾಗಿತ್ತು. ಇದಕ್ಕೆ ಸ್ಪಂದಿಸುತ್ತಿದ್ದ ಎಸ್ ಪಿಬಿ ಕೂಡ ಆ ಹಾಡುಗಳನ್ನು ಕೇಳುತ್ತಾ ನಗು ಮುಖ ತಂದುಕೊಂಡಿದ್ದರು. ಆದರೆ ಮತ್ತೆ ಸ್ಥಿತಿ ಗಂಭೀರವಾಗುತ್ತಾ ಹೋಯಿತು. ಆದರೂ ಅವರು ಕೊನೆಯುಸಿರೆಳೆಯುವ ವರೆಗೂ ಅವರಿದ್ದ ಕೊಠಡಿಯಲ್ಲಿ ಸಂಗೀತ ಕೇಳಿಸುತ್ತಲೇ ಇತ್ತು.
ಸಂಗೀತವನ್ನೇ ಜೀವನ, ಜೀವವಾಗಿಸಿಕೊಂಡಿದ್ದ ಎಸ್ ಪಿಬಿ ಕೊನೆಗೆ ಸಂಗೀತ ಕೇಳುತ್ತಲೇ ಜೀವ ಬಿಟ್ಟಿದ್ದಾರೆ.








