ADVERTISEMENT
Monday, September 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಗೆಲುವಿನ ಲಯವನ್ನು ಕಳೆದುಕೊಳ್ಳುತ್ತಿದೆಯಾ ಚೆನ್ನೈ ಸೂಪರ್ ಕಿಂಗ್ಸ್

admin by admin
September 26, 2020
in IPL 2020, Newsbeat, Sports, Uncategorized, ಕ್ರೀಡೆ
Share on FacebookShare on TwitterShare on WhatsappShare on Telegram

ಗೆಲುವಿನ ಲಯವನ್ನು ಕಳೆದುಕೊಳ್ಳುತ್ತಿದೆಯಾ ಚೆನ್ನೈ ಸೂಪರ್ ಕಿಂಗ್ಸ್

2020ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರದ್ಧ ಜಯ ಸಾಧಿಸಿದ್ದ ನಂತರ ಸಿಎಸ್ ಕೆ ತಂಡ ಗೆಲುವಿನ ಹಿಡಿತವನ್ನು ಕಳೆದುಕೊಂಡಿದೆ.
ರಾಜಸ್ತಾನ ರಾಯಲ್ಸ್ ವಿರುದ್ಧ ಸೋತ ಬಳಿಕ ತನ್ನ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೋತಿದೆ. ಬಲಿಷ್ಠ ಹಾಗೂ ಅನುಭವಿ ತಂಡವಾಗಿರುವ ಸಿಎಸ್‍ಕೆ ತಂಡ ಯಾಕೆ ಎಡವಿ ಬೀಳುತ್ತಿದೆ ಎಂಬ ಪ್ರಶ್ನೆಗೆ ಕ್ರಿಕೆಟ್ ಪಂಡಿತರು ಮಹೇಂದ್ರ ಸಿಂಗ್ ಧೋನಿಯವರನ್ನು ಬೊಟ್ಟು ಮಾಡುತ್ತಿದ್ದಾರೆ.
ಹೌದು, ಧೋನಿಯ ನಿರ್ಧಾರದ ಬಗ್ಗೆ ಈಗ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಮುಖ್ಯವಾಗಿ ಕಳೆದ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದ್ದು. ಸವಾಲನ್ನು ಬೆನ್ನಟ್ಟುವ ತಾಕತ್ತೂ ಇದ್ರೂ ಕೂಡ ಸಿಎಸ್‍ಕೆಯ ಬ್ಯಾಟ್ಸ್ ಮೆನ್ ಗಳು ಒತ್ತಡಕ್ಕೆ ಸಿಲುಕುತ್ತಿದ್ದಾರೆ.
ಹಾಗೇ, ನಾಯಕ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ನಿರ್ಧಾರ. ಕಳೆದ ಎರಡು ಪಂದ್ಯಗಳಲ್ಲೂ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಧೋನಿ 16ನೇ ಓವರ್ ನಲ್ಲಿ ಕ್ರೀಸ್‍ಗೆ ಆಗಮಿಸಿದ್ದರು. ಆಗ ಸಿಎಸ್‍ಕೆ ತಂಡದ ಗೆಲುವಿಗೆ ಬೇಕಾಗಿದ್ದು 26 ಎಸೆತಗಳಲ್ಲಿ 78 ರನ್ ಗಳು ಬೇಕಾಗಿದ್ದವು. ಧೋನಿ 12 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಈ ನಡುವೆ, ಸಿಎಸ್‍ಕೆ ತಂಡಕ್ಕೆ ಸುರೇಶ್ ರೈನಾ ಅವರ ಅನುಪಸ್ಥಿತಿ ಕಾಡುತ್ತಿದೆ. ಸಿಎಸ್‍ಕೆ ಮಾಲೀಕ ಶ್ರೀನಿವಾಸನ್ ಪ್ರಕಾರ ಸುರೇಶ್ ರೈನಾ ಜಾಗವನ್ನು ಋತುರಾಜ್ ಗಾಯಕ್ವಾಡ್ ತುಂಬುತ್ತಾರೆ ಅಂತ ಹೇಳಿದ್ದರು. ಆದ್ರೆ ಋತುರಾಜ್ ಗಾಯಕ್ವಾಡ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಮೂರನೇ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುವ ಬ್ಯಾಟ್ಸ್ ಮೆನ್ ನ ಕೊರತೆಯನ್ನು ಸಿಎಸ್‍ಕೆ ಎದುರಿಸುತ್ತಿದೆ.
ಇನ್ನು ಲಾಕ್ ಡೌನ್ ಟೈಮ್ ನಲ್ಲಿ ಸಿಎಸ್‍ಕೆ ಆಟಗಾರರಿಗೆ ಸರಿಯಾದ ಅಭ್ಯಾಸ ಕೂಡ ಆಗಿಲ್ಲ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಸಿಎಸ್‍ಕೆ ಮತ್ತೆ ಗೆಲುವಿನ ಲಯಕ್ಕೆ ಮರಳಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.
ಒಟ್ಟಿನಲ್ಲಿ ಸುರೇಶ್ ರೈನಾ ತಂಡದಿಂದ ಹೊರ ನಡೆದಿದ್ದು, ಮತ್ತೊಂದೆಡೆ ಹರ್ಭಜನ್ ಸಿಂಗ್ ಹಿಂದೇಟು ಹಾಕಿದ್ದನ್ನೆಲ್ಲಾ ನೋಡುವಾಗ ಸಿಎಸ್ ಕೆ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

Related posts

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಮುಳುವಾಯಿತೇ?ಡಿಕೆಶಿ ಸರ್ಕಾರಕ್ಕೆ ಸಚಿವ ಬಾಲಕೃಷ್ಣ ಶಾಕ್: ಗ್ಯಾರಂಟಿ ಇಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎಂದು ಅಸಹಾಯಕತೆ

September 28, 2026

Tags: #m.sdhoni#murli vijayachennai super kingscskharbhajan singhIPLIPL 2020Suresh Rainauae ipl 2020
ShareTweetSendShare
Join us on:

Related Posts

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಗ್ಯಾರಂಟಿ ಯೋಜನೆಗಳೇ ಸರ್ಕಾರಕ್ಕೆ ಮುಳುವಾಯಿತೇ?ಡಿಕೆಶಿ ಸರ್ಕಾರಕ್ಕೆ ಸಚಿವ ಬಾಲಕೃಷ್ಣ ಶಾಕ್: ಗ್ಯಾರಂಟಿ ಇಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎಂದು ಅಸಹಾಯಕತೆ

by Shwetha
September 28, 2026
0

ರಾಮನಗರ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಈಗ ತನ್ನದೇ ಪಕ್ಷದ ಪ್ರಭಾವಿ ಸಚಿವರಿಂದ ದೊಡ್ಡ ಮುಜುಗರ ಎದುರಾಗಿದೆ. ಸರ್ಕಾರದ ಅತಿ ದೊಡ್ಡ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಬಗ್ಗೆ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

by Shwetha
September 28, 2026
0

ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ವರ್ಷದ ಕೊನೆಯ ಅಂಗಾರಕ ಸಂಕಷ್ಟಿ ಚತುರ್ಥಿ:ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ಗಣೇಶನಿಗೆ ಹೀಗೆ ಅರ್ಪಿಸಿ ಗರಿಕೆ

by Shwetha
September 28, 2026
0

ವಿನಾಯಕನ ಭಕ್ತರಿಗೆ ಇದು ಅತ್ಯಂತ ಪುಣ್ಯದಾಯಕ ಸಮಯ. ಭಾದ್ರಪದ ಮಾಸದ ಪವಿತ್ರ ದಿನಗಳಲ್ಲಿ ವಿಘ್ನರಾಜ ಸಂಕಷ್ಟಿ ಚತುರ್ಥಿಯು ಸನ್ನಿಹಿತವಾಗಿದ್ದು, ಈ ಬಾರಿ ಇದು ಮಂಗಳವಾರದಂದು ನಾಳೆ ಬಂದಿರುವುದು...

ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿಗೆ ಮಾಜಿ ಮತ್ತು ಹಾಲಿ ಸಿಎಂಗಳ ಸಲಾಂ ಮುಖ್ಯಮಂತ್ರಿ ನಾಟಕದ 900ನೇ ಪ್ರದರ್ಶನ ಯಶಸ್ವಿ:ಮುಖ್ಯಮಂತ್ರಿ ಚಂದ್ರು ಅಬ್ಬರಕ್ಕೆ ಸಾಕ್ಷಿಯಾದ ರಾಜಕೀಯ ಗಣ್ಯರು

ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿಗೆ ಮಾಜಿ ಮತ್ತು ಹಾಲಿ ಸಿಎಂಗಳ ಸಲಾಂ ಮುಖ್ಯಮಂತ್ರಿ ನಾಟಕದ 900ನೇ ಪ್ರದರ್ಶನ ಯಶಸ್ವಿ:ಮುಖ್ಯಮಂತ್ರಿ ಚಂದ್ರು ಅಬ್ಬರಕ್ಕೆ ಸಾಕ್ಷಿಯಾದ ರಾಜಕೀಯ ಗಣ್ಯರು

by Shwetha
September 28, 2026
0

ಬೆಂಗಳೂರು ರಂಗಭೂಮಿಯ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಕ್ಷರಗಳ ಪುಟ ತೆರೆದುಕೊಂಡಿತು. ದಶಕಗಳಿಂದ ಕನ್ನಡಿಗರ ಮನಗೆದ್ದಿರುವ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿನಯದ ಐತಿಹಾಸಿಕ ನಾಟಕ ಮುಖ್ಯಮಂತ್ರಿ ತನ್ನ...

ಹೀರೋ ಆಗದಿದ್ರೆ ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ನಾನಿ: ನಾನಿ ಅಣ್ಣಾ ಹೇಳೋದಕ್ಕೂ ಒಂದು ಲಾಜಿಕ್ ಇರಲಿ- ರಾಪಿಡೋ ಡ್ರೈವರ್ ಆಗ್ತಿದ್ದೆ ಎಂದ ಹೀರೋಗೆ ನೆಟ್ಟಿಗರ ವ್ಯಂಗ್ಯದ ಗುದ್ದು

ನೆಗೆದುಬಿದ್ದು ಹೋಗುತ್ತೆ ಈ ಸರ್ಕಾರ: 2028ರವರೆಗೆ ಇರ್ತಾರೋ ಇಲ್ವೋ ಗೊತ್ತಿಲ್ಲ ಎಂದು ಡಿಕೆಶಿಗೆ ಕುಮಾರಸ್ವಾಮಿ ಏಕವಚನದಲ್ಲೇ ಕ್ಲಾಸ್

by Shwetha
September 28, 2026
0

ಚನ್ನಪಟ್ಟಣ: ಬಿಡದಿ ಟೌನ್ ಶಿಪ್ ವಿಚಾರವಾಗಿ ರೈತರು ನಡೆಸುತ್ತಿರುವ ಹೋರಾಟ ಈಗ ಮಹಾ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram