ಬಳ್ಳಾರಿ : ಬಳ್ಳಾರಿಯ ಶಾಲಾ ಆವರಣದಲ್ಲಿ ಇನ್ಮುಂದೆ ತೋಟಗಾರಿಕಾ ಬೆಳೆಗಳು ನಳನಳಿಸಲಿವೆ. ಬಳ್ಳಾರಿ ಶಿಕ್ಷಣ ಇಲಾಖೆಯ ವಿನೂತನ ಪ್ರಯೋಗ ‘ ಕಿಚನ್ ಗಾರ್ಡನ್ ‘ ಗೆ ಜಿಲ್ಲಾ ಪಂಚಾಯತ್ ಸದ್ಯ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಕೈಹಾಕಿರುವ ಬಳ್ಲಾರಿ ಶಿಕ್ಷಣ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಇನ್ಮುಂದೆ ಶಾಲಾ ಆವರಣದಲ್ಲಿ ಬೆಳೆದ ತರಕಾರಿಳನ್ನೇ ಬಳಸುವ ಯೋಜನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಬಳ್ಳಾರಿಯ 356 ಶಾಲೆಗಳಲ್ಲಿ ಕಿಚನ್ ಗಾರ್ಡನ್ ಪ್ರಯೋಗಕ್ಕೆ ತಯಾರಿ ನಡೆಸಿಕೊಳ್ಳಲಾಗ್ತಿದೆ.
ಗ್ರಾಮ ಪಂಚಾಯತ್ ನರೇಗಾ ಯೋಜನೆ ಅಡಿ ಶಾಲಾ ಆವರಣದಲ್ಲಿ ತೋಟ ನಿರ್ಮಾಣ
ಬಿಸಿಯೂಟಕ್ಕೆ ಇನ್ಮುಂದೆ ಶಾಲಾ ಆವರಣದಲ್ಲೇ ಸಿಗಲಿವೆ ತಾಜಾ ತರಕಾರಿಗಳು
ಮಕ್ಕಳಲ್ಲಿ ಪರಿಸರ ಮತ್ತು ಕೃಷಿ ಪ್ರಜ್ಞೆ ಜಾಗೃತಿಗೊಳಿಸುವ ಪ್ರಯೋಗ ಇದಾಗಿದೆ.
ಈ ಕಿಚನ್ ಗಾರ್ಡನ್ ಪ್ರಯೋಗದಂತೆ ಶಾಲಾ ಆವರಣದಲ್ಲಿ ನುಗ್ಗೆ, ಕರಿಬೇವು, ಹಾಗೂ ಇನ್ನಿತರ ತೋಟಗಾರಿಕ ಬೆಳೆ ಬೆಳೆಯಲು ನಿರ್ಧಾರ ಮಾಡಲಾಗಿದೆ.








