ಐಪಿಎಲ್ 2020- ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಪಂಜಾಬ್ ಜಟಾಪಟಿ
2020ರ ಐಪಿಎಲ್ ಟೂರ್ನಿಯ 9ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ.
ಈಗಾಗಲೇ ಗೆಲುವಿನ ಉನ್ಮಾದದಲ್ಲಿರುವ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ. ಕಿಂಗ್ಸ್ ಇಲೆವೆನ್ ತಂಡ ನಾಯಕ ಕೆ.ಎಲ್. ರಾಹುಲ್ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಸಿಎಸ್‍ಕೆ ವಿರುದ್ಧ ಅಜೇಯ ಶತಕ ದಾಖಲಿಸಿದ್ದು ಅತ್ಯುತ್ತಮ ಮಟ್ಟದ ಫಾರ್ಮ್ ನಲ್ಲಿದ್ದಾರೆ. ಅದೇ ರೀತಿ ಮಯಾಂಕ್ ಅಗರ್‍ವಾಲ್, ಗ್ಲೇನ್ ಮ್ಯಾಕ್ಸ್ ವೆಲ್, ನಿಕೊಲಾಸ್ ಪೂರನ್, ಕರುಣ್ ನಾಯರ್ ಸಫ್ರಾಝ್ ಖಾನ್ ಬ್ಯಾಟಿಂಗ್ ನಲ್ಲಿ ಆಧಾರವಾದ್ರೆ, ಬೌಲಿಂಗ್ ನಲ್ಲಿ ಜೇಮ್ಸ್ ನಿಶಾಮ್, ಮುರುಗನ್ ಅಶ್ವಿನ್, ರವಿ ಬಿಸ್ನೋಯ್, ಮಹಮ್ಮದ್ ಸಮಿ ಹಾಗೂ ಶೆಲ್ಡನ್ ಕಾಟ್ರೆಲ್ ಬೌಲಿಂಗ್ ಆಸ್ತ್ರಗಳು.
ಇನ್ನು ರಾಜಸ್ತಾನ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಅಂತಿಮ 11 ರ ಬಳಗದಲ್ಲಿ ಕಾಣಿಸಿಕೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹಾಗೇ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಲಯ ಕಂಡುಕೊಳ್ಳಬೇಕಿದೆ. ಸಂಜು ಸಾಮ್ಸನ್ ಅವರು ಸಿಎಸ್‍ಕೆ ವಿರುದ್ದ ಅಮೋಘ ಆಟವನ್ನಾಡಿದ್ದರೆ. ಅದೇ ಆಟವನ್ನು ಮುಂದುರಿಸುವ ವಿಶ್ವಾಸದಲ್ಲಿದ್ದಾರೆ. ಇನ್ನೊಂದೆಡೆ ನಾಯಕ ಸ್ಟೀವನ್ ಸ್ಮಿತ್ ಅವರ ಜವಾಬ್ದಾರಿಯುತ ಆಟ ತಂಡಕ್ಕೆ ಸ್ಪೂರ್ತಿಯಾಗಲಿದೆ. ಹಾಗೇ ರಾಬಿನ್ ಉತ್ತಪ್ಪ ಫಾರ್ಮ್ ಕಂಡುಕೊಳ್ಳಬೇಕಿದೆ. ಇನ್ನು ರಾಹುಲ್ ಟೆವಾಟಿಯಾ, ರಿಯಾನ್ ಪರಾಗ್ ಟಾಮ್ ಕುರನ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್ ಮತ್ತು ಜಯದೇವ್ ಉನಾದಕಟ್ ಅವರು ರಾಯಲ್ಸ್ ತಂಡದ ಪ್ರಮುಖ ಬೌಲರ್ ಗಳಾಗಿದ್ದಾರೆ.
ಸಂಭವನೀಯ ತಂಡ
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್‍ವಾಲ್, ನಿಕೊಲಾಸ್ ಪೂರನ್, ಗ್ಲೇನ್ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಸಫ್ರಾಝ್ ಖಾನ್, ಜೇಮ್ಸ್ ನೀಶಾಮ್, ಮುರುಗನ್ ಅಶ್ವಿನ್, ರವಿ ಬಿಸ್ನೋಯ್, ಮಹಮ್ಮದ್ ಸಮಿ, ಶೆಲ್ಡನ್ ಕಾಟ್ರೆಲ್.
ರಾಜಸ್ತಾನ ರಾಯಲ್ಸ್ ತಂಡ
ಸ್ಟೀವನ್ ಸ್ಮಿತ್ (ನಾಯಕ) ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸಾಮ್ಸನ್, ರಾಬಿನ್ ಉತ್ತಪ್ಪ, ರಾಹುಲ್ ಟೆವಾಟಿಯಾ, ರಿಯಾನ್ ಪರಾಗ್, ಟಾಮ್ ಕುರನ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕಟ್








