ADVERTISEMENT
Wednesday, May 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ:ಕಲಬುರಗಿ ಡಿಸಿ

saaksha tv by saaksha tv
March 14, 2020
in Newsbeat, Samagra karnataka
Share on FacebookShare on TwitterShare on WhatsappShare on Telegram

ಅನಗತ್ಯವಾಗಿ ಮನೆಯಿಂದ ಯಾರೂ ಸುಮ್ಮನೆ ಹೊರಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಈಗಾಗಲೇ ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಂದ 76ರ ವೃದ್ಧ ಸಾವಿಗೀಡಾಗಿದ್ದು, 71ಮಂದಿಯನ್ನು ಕೊರೋನಾ ಶಂಕಿತರೆಂಬ ಹಿನ್ನೆಲೆಯಲ್ಲಿ ತೀವ್ರ ನಿಗಾದಲ್ಲಿ ಇಡಲಾಗಿದೆ.
ಇಂದು ಕಲಬುರಗಿಯ ವಾರ್ತಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿದ ಜಿಲ್ಲಾಧಿಕಾರಿ ಬಿ. ಶರತ್, ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ 71 ಜನರನ್ನು ನಿಗಾ ದಲ್ಲಿ ಇರಿಸಲಾಗಿದೆ . ಅದರಲ್ಲಿ ನಾಲ್ಕು ಜನರು ಕೊರೋನಾ ದಿಂದ ಸಾವನ್ನಪ್ಪಿದ ವ್ಯಕ್ತಿಯ ಜೊತೆ ನೇರ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಅವರಿಗೆ ಇಎಸ್ಐ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ನರ್ಸ್ ನನ್ನು ಸಹ ಚಿಕಿತ್ಸೆಗೆ ಒಳ ಪಡಿಸಲಾಗಿದೆ.  ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ 36 ಜನರು ಹೈ ರಿಸ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಮೃತ ವ್ಯಕ್ತಿಯ ಇಬ್ಬರು ಹೆಣ್ಣು ಮಕ್ಕಳು, ಮೃತ ವ್ಯಕ್ತಿಯ ಮೊಮ್ಮಗ ಸಹ ಸೇರಿದ್ದಾರೆ ಎಂದರು.

ಇದೇ ವೇಳೆ ಕೊರೊನಾ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿ ಮಗನನ್ನು ಸಂದರ್ಶನ ಮಾಡಿದ ಪತ್ರಕರ್ತರನ್ನು ಹೊರ ಹೋಗುವಂತೆ ಡಿಸಿ ಮನವಿ ಮಾಡಿದರು. ಖಾಸಗಿ ಚಾನಲ್ ವೊಂದರ ಓರ್ವ ಕ್ಯಾಮೆರಾಮನ್ ಹಾಗೂ ಇಬ್ಬರು ವರದಿಗಾರರನ್ನು ಚಿಕಿತ್ಸೆಗೆ ಒಳಪಡಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇಂತಹ ದುಸ್ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಡಿಸಿ ಮಾಧ್ಯಮದವರ ಬಳಿ ಮನವಿ ಮಾಡಿಕೊಂಡರು. ಮೃತ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಒಟ್ಟು 71 ಜನ ಭಾಗವಹಿಸಿದ್ದರು ಹಾಗೂ ಮೃತ ವೃದ್ಧನ ಮಗ ವಿಜಯಪುರಕ್ಕೆ ಹೋಗಿ ಬಂದಿರುವುದಾಗಿ ವರದಿ ಬಂದಿದ್ದು, ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಎಲ್ಲರ ಮೇಲೂ ನಿಗಾ ಇಡಲಾಗಿದೆ. ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಅನಿವಾರ್ಯ ಕಾರಣವಿಲ್ಲದೆ ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಎಂದು ಕಲಬುರಗಿ ನಗರದ ಜನರಲ್ಲಿ ಕೇಳಿಕೊಂಡರು.

Related posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

May 6, 2026
ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

May 6, 2026

ಮದುವೆ ಕಾರ್ಯಕ್ರಮ ನಿಗದಿಯಾಗಿದ್ದರೆ, ಮೊದಲು ನಮಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡಬೇಕು. ನಂತರ ನಾವು ಅನುಮತಿ ನೋಡಿ ಕೊಡುತ್ತೇವೆ ಎಂದರು. ಹೊರ ದೇಶಗಳಿಗೆ ಹೋಗಿ ಬಂದವರು ಸ್ವಯಂಪ್ರೇರಣೆಯಿಂದ ಬಂದು ಪರೀಕ್ಷೆಗೆ ಒಳಪಡಬೇಕು. ಕಾಲ್ ಸೆಂಟರ್ ಆರಂಭಿಸುತ್ತಿದ್ದು, ಜನರಿಗೆ ಏನಾದರೂ ಮಾಹಿತಿ ಬೇಕಿದ್ದರೆ, ಅಥವಾ ಆರೋಗ್ಯ ಹದಗೆಟ್ಟಿದ್ದರೆ, ಕಾಲ್ ಸೆಂಟರ್ ಅನ್ನು ಸಂಪರ್ಕಿಸಿ. ಈ ಮೂಲಕ ಕೊರೋನಾ ಕಾಯಿಲೆ ತಡೆಗಟ್ಟಲು ಸಹಾಯವಾಗಲಿದೆ. 2 ವಾರಗಳ ಕಾಲ ಯಾರು ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದರು. ಕಲಬುರಗಿಯಿಂದ ಈಶಾನ್ಯ ಸಾರಿಗೆ ಬಸ್ ಸೌಲಭ್ಯಗಳಲ್ಲೂ ಸ್ವಲ್ಪ ಕಡಿತ ಮಾಡಲಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಎಂಡಿ ಜೊತೆ ಚರ್ಚಿಸಿ ಮಾಹಿತಿ ಕೊಡುತ್ತೇವೆ ಎಂದು ಹೇಳಿದರು.

Advt
ಜಾಹಿರಾತು
Tags: coronaviruskalburagi
ShareTweetSendShare
Join us on:

Related Posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

by Shwetha
May 6, 2026
0

ದೇಶದ ರಾಜಕೀಯದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ. ಪ್ರಸ್ತುತ, ಬಿಜೆಪಿ ದೇಶಾದ್ಯಂತ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇರವಾಗಿ ಅಥವಾ...

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

by Shwetha
May 6, 2026
0

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಹಿನ್ನೆಲೆ, ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಟಿಎಂಸಿ ಯ ಸೋಲಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅವರು...

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

by Shwetha
May 6, 2026
0

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಕಿಚ್ಚು ಹಚ್ಚಿದೆ. ಮರುಎಣಿಕೆಯಲ್ಲಿ ಜೀವರಾಜ್ ಅಕ್ರಮ ಎಸಗಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ...

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

by Shwetha
May 6, 2026
0

ತಮಿಳುನಾಡಿನ ಜನಪ್ರಿಯ ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಘೋಷಿಸಿರುವ ಜನಪ್ರಿಯ ಕಲ್ಯಾಣ ಯೋಜನೆಗಳು ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿರುವುದು ನಿಜ....

ಅಮೆರಿಕದ ವಿಮಾನ ಮಿಸ್ಸಿಂಗ್!

ಅಮೆರಿಕದ ವಿಮಾನ ಮಿಸ್ಸಿಂಗ್!

by Shwetha
May 6, 2026
0

ಅಮೆರಿಕದ ಭಾರೀ ಸೈನಿಕ ವಿಮಾನವಾದ KC-135 ಸ್ಟ್ರಾಟೋಟ್ಯಾಂಕರ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಮಾನವು ಗಾಳಿಯಲ್ಲೇ ಇಂಧನ ತುಂಬುವ ಪ್ರಮುಖ ಕಾರ್ಯವನ್ನು ನಿರ್ವಹಿಸುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram