ಬಾಲಿವುಡ್ ಡೇರಿಂಗ್ ನಟಿ ಎಂದೇ ಕರೆಸಿಕೊಳ್ಳುವ ಕಂಗನಾ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿರುವ ನಟಿ..
ಇದೀಗ ಕಂಗನಾ ಅತ್ಯಾಚಾರಿಗಳ ವಿರುದ್ಧ ಸಿಡಿದೆದಿದ್ದಾರೆ.
ಉತ್ತರ ಪ್ರದೇಶದ ಹಸ್ರಾತ್ ನಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಅತ್ಯಾಚರಕ್ಕೊಳಗಾಗಿದ್ದ 19 ವರ್ಷದ ಮಹಿಳೆ ಇಂದು ಮೃತಪಟ್ಟಿದ್ದಾರೆ.
ಈ ಪ್ರಕರಣವನ್ನ ಕಂಗನಾ ತೀವ್ರವಾಗಿ ಖಂಡಿಸಿದ್ದಾರೆ.
”ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗುಂಡಕ್ಕಿ ಕೊಲ್ಲಬೇಕು” ಎಂದು ಕಂಗಾನಾ ಅತ್ಯಾಚಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ನಟಿ ಪಾಯಲ್ ಘೋಷ್ ಸಹ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು,
“ ‘ಕೇವಲ 19 ವರ್ಷ ವಯಸ್ಸಿನ ಪುಟ್ಟ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಮತ್ತು ಆಕೆ ಸಾವನ್ನಪ್ಪಿರುವುದು ಎನ್ನುವುದು ದುಃಖಕರ ಸಂಗತಿ.
ಆರೋಪಿಗಳು ಬಂಧನದಲ್ಲಿದ್ದಾರೆ. ತಕ್ಷಣ ಮೃತ ಸಂತ್ರಸ್ತ ಯುವತಿಗೆ ನ್ಯಾಯ ಸಿಗಬೇಕು” ಎಂದು ಟ್ವೀಟ್ ಮಾಡಿದ್ದಾರೆ.









