ಶಿವಮೊಗ್ಗ: ಶಿರಾ ಹಾಗೂ ಆರ್ ಆರ್ ನಗರ ಬೈ ಎಲೆಕ್ಷನ್ ಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದೇ ಗೆಲ್ಲುತ್ತೆ, ಇದನ್ನು ಬರೆದಿಟ್ಟುಕೊಳ್ಳಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಉಪಚುನಾವಣೆಗಳ ಬಗ್ಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮನ್ನು ಬಿಟ್ಟು ಗೆಲ್ಲುವವರು ಯಾರಿದ್ದಾರೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಡಿದಾಡುತ್ತಿದ್ದಾರೆ. ಜೆಡಿಎಸ್ ನ ಕುಮಾರಸ್ವಾಮಿ ನಮ್ಮದು ಒಂದು ಪಕ್ಷ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಿಎಂ ಸ್ಥಾನವನ್ನು ಕಳೆದುಕೊಂಡ್ರು ಹಾಗೂ ಸರ್ಕಾರವನ್ನು ಕಳೆದುಕೊಂಡರು. ಲೋಕಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಅಧಿಕಾರ ಪಡೆಯಲ್ಲ ಎಂದರು.
ಸ್ಯಾಂಪಲ್ ಗೆ ಇರಲಿ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೂಂದು ಸ್ಥಾನ ಪಡೆದುಕೊಂಡರು.
ಇದನ್ನೂ ಓದಿ : ಬಾಬ್ರಿ ಮಸೀದಿ ಮಹಾ ತೀರ್ಪು; ಅಡ್ವಾಣಿ ಸೇರಿ ಎಲ್ಲಾ 32 ಆರೋಪಿಗಳು ಖುಲಾಸೆ
ವಿಧಾನಸಭೆ ಚುನಾವಣೆಯಲ್ಲಿ ಸಹ ಬಿಜೆಪಿ ಗೆಲುವು ಸಾಧಿಸಿತು. ಗೆಲುವು ಅಂದ್ರೆ, ಭಾರತೀಯ ಜನತಾ ಪಾರ್ಟಿದು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ದೇಶದ ಹಾಗೂ ರಾಜ್ಯದ ಜನತೆ ಚುನಾವಣೆ ಅಂದ್ರೆ ಮೋದಿ, ಯಡಿಯೂರಪ್ಪ ಅಂತ ಗೊತ್ತಾಗಿದೆ.
ಇದರಿಂದ ಎರಡು ಉಪಚುನಾವಣೆಯಲ್ಲೂ ಸಹ ಬಿಜೆಪಿ ಗೆಲ್ಲುತ್ತದೆ. ಬಿಜೆಪಿಯಲ್ಲೂ ಸಹ ಸಾಕಷ್ಟು ಆಕಾಂಕ್ಷಿಗಳಿದ್ದಾರೆ ಎಂದರು.








