ವಿದೇಶಗಳಲ್ಲಿ ಗಮನ ಸೆಳೆದಿರುವ ಶಾರದಾ ಆಯುರ್ವೇದ ಚಿಕಿತ್ಸಾಲಯದ ರೋಗನಿರೋಧಕ ಔಷಧಿಗಳು
ಬೆಂಗಳೂರು, ಅಕ್ಟೋಬರ್01: ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿದೇಶಗಳಲ್ಲಿ ಕೂಡ ಭಾರತದ ಆಯುರ್ವೇದ ಪದ್ಧತಿ, ಔಷಧಗಳು ಬಹಳ ಗಮನ ಸೆಳೆದಿದೆ. ವಿದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ಆಯುರ್ವೇದ ಔಷಧಗಳ ಪೈಕಿ ಬೆಂಗಳೂರಿನ ಶಾರದಾ ಆಯುರ್ವೇದ ಚಿಕಿತ್ಸಾಲಯ ಸಿದ್ಧಪಡಿಸಿರುವ ರೋಗನಿರೋಧಕ ಕಷಾಯ, ಮಾತ್ರೆಗಳು ಕೂಡ ಒಂದು.
ವೀಳ್ಯದೆಲೆಗಳ 6 ಬೆರಗುಗೊಳಿಸುವ ಆರೋಗ್ಯ ಪ್ರಯೋಜನಗಳು
ಮೊದಲ ಬಾರಿಗೆ ಜಗಿದು ನುಂಗಬಹುದಾದ ಕಷಾಯದ ಅಂಶಗಳನ್ನು ಹೊಂದಿರುವ ಕ್ಯಾಶ್ಚೀವ್ (Kashchew) ಎಂಬ ಮಾತ್ರೆಗಳನ್ನು ಶಾರದಾ ಆಯುರ್ವೇದಿಕ್ ಕ್ಲಿನಿಕ್ ಪರಿಚಯಿಸಿದೆ. ಅಷ್ಟೇ ಅಲ್ಲ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೂರವಿರಲು ಅಮೃತ ಸಂಜೀವಿನಿ, ಜೀವನೀಯಮ ಕಷಾಯ, ಮಾತ್ರೆಗಳನ್ನು ಅಭಿವೃದ್ಧಿಪಡಿಸಿದ್ದು, ಇದು ಯಾವುದೇ ತರಹದ ವೈರಸ್ ಗಳನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿ ಎಂಬುವುದಾಗಿ ತಿಳಿಸಿದೆ.
ಪೆರು ರಾಯಭಾರಿ ವಿಕ್ರಮ್ ವಿಶ್ವನಾಥ್ ಅವರ ಮೂಲಕ ಈ ಆಯುರ್ವೇದ ಔಷಧಗಳು ವಿದೇಶಿ ಮಾರುಕಟ್ಟೆಗೆ ಪರಿಚಯಗೊಂಡಿದ್ದು, ವಿದೇಶಗಳಲ್ಲಿ ಗಮನ ಸೆಳೆದಿದೆ.
ಐಐಟಿ ದೆಹಲಿಯ ಸಂಶೋಧಕರ ಗುಂಪು, ಜಪಾನ್‌ನ ವೈಜ್ಞಾನಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸಿಒವಿಐಡಿ -19 ವಿರುದ್ಧ ಲಸಿಕೆ ತಯಾರಿಕೆಯಲ್ಲಿ ಅಶ್ವಗಂಧದ ಬಳಕೆಯನ್ನು ಅಧ್ಯಯನ ಮಾಡುತ್ತಿದೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








