ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆ ಸಮುದ್ರದಲ್ಲಿ ಈಜುತ್ತಾ ಪತ್ತೆ
ಕೊಲಂಬಿಯಾ, ಅಕ್ಟೋಬರ್02: ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ನಂಬಲಸಾಧ್ಯವಾದ ಘಟನೆ ನಡೆದಿದೆ. ವಾಸ್ತವವಾಗಿ ಕಳೆದ ಎರಡು ವರ್ಷಗಳಿಂದ ಒಬ್ಬ ಮಹಿಳೆ ಕಾಣೆಯಾಗಿದ್ದಳು. ಆ ನಂತರ ಆಕೆಗೆ ತನ್ನ ಕುಟುಂಬದೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ಪತಿಯ ಹಿಂಸಾತ್ಮಕ ನಡವಳಿಕೆಯಿಂದ ಅಸಮಾಧಾನಗೊಂಡಿದ್ದ ಆಕೆ ಎರಡು ವರ್ಷಗಳ ಹಿಂದೆ ಮನೆ ತೊರೆದಿದ್ದಳು. ಈಗ ಎರಡು ವರ್ಷಗಳ ನಂತರ, ನಂಬಲಸಾಧ್ಯವಾದ ಘಟನೆ ನಡೆದಿದ್ದು, ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಆಕೆ ಸಮುದ್ರದಲ್ಲಿ ಈಜುತ್ತಾ ಜೀವಂತವಾಗಿ ಪತ್ತೆಯಾಗಿದ್ದಾಳೆ. ಮಹಿಳೆ ತಾನು ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ದೇವರು ನನ್ನನ್ನು ರಕ್ಷಿಸಿದ ಎಂದು ಹೇಳಿದ್ದಾಳೆ.
ಮಹಿಳೆ ಎಲ್ಲಿದ್ದಾಳೆ ಮತ್ತು ಅವಳು ಹೇಗಿದ್ದಾಳೆ ಎಂದು ಕುಟುಂಬಕ್ಕೆ ತಿಳಿದಿರಲಿಲ್ಲ.
ಹಳ್ಳ ದಾಟಲು ಹೆಗಲ ಮೇಲೆ ಪತ್ನಿ ಹೊತ್ತ ಪತಿರಾಯ, ವಿಡಿಯೋ ವೈರಲ್
ಸೆಪ್ಟೆಂಬರ್ 26 ರಂದು ಪೋರ್ಟೊ ಕೊಲಂಬಿಯಾದ ಕಡಲತೀರದಿಂದ ಒಂದು ಮೈಲಿ ದೂರದಲ್ಲಿರುವ ಅಟ್ಲಾಂಟಿಕೊದಲ್ಲಿ ಮಹಿಳೆ ತೇಲುತ್ತಿರುವಂತೆ ಕಂಡುಬಂದಿದೆ. ಮಹಿಳೆಯನ್ನು ಏಂಜೆಲಿಕಾ ಗೇಟನ್ ಎಂದು ಗುರುತಿಸಲಾಗಿದೆ. ರೊನಾಲ್ಡೊ ವಿಸ್ಬಾಲ್ ಎಂಬ ಮೀನುಗಾರ 46 ವರ್ಷದ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಸಮುದ್ರದಲ್ಲಿ ತೇಲಿ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ದಡಕ್ಕೆ ತಂದು ಆರೈಕೆ ಮಾಡಿದ್ದಾರೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








