ಕೊಚ್ಚಿ : ಕೇರಳದ ಕೊಚ್ಚಿಯಲ್ಲಿ ಗ್ಲೈಡರ್ ಪತನಗೊಂಡು ವಿಮಾನದಲ್ಲಿದ್ದ ಇಬ್ಬರು ಭಾರತೀಯ ನೌಕಾಪಡೆಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಲೆಫ್ಟಿನೆಂಟ್ ರಾಜೀವ್ ಮತ್ತು ಇನ್ನೊಬ್ಬ ಅಧಿಕಾರಿ ಸುನಿಲ್ ಕುಮಾರ್ ಮೃತರು.
ನೌಕಾಪಡೆಯ ಪವರ್ ಗ್ಲೈಡರ್ ಎಂದಿನ ತರಬೇತಿಗಾಗಿ ಇಂದು ಬೆಳಗ್ಗೆ ಐಎನ್ ಎಸ್ ಗರುಡಾ ನೌಕೆಯಿಂದ ಮೇಲೇರಿತು.
ಬೆಳಗ್ಗೆ 7 ಗಂಟೆಗೆ ಕೊಚ್ಚಿ ನೌಕಾ ನೆಲೆಗೆ ಸಮೀಪ ಇರುವ ತೋಪಂಪಡಿ ಸೇತುವ ಬಳಿ ಪತನಗೊಂಡಿದೆ.
ಇದನ್ನೂ ಓದಿ : ಕೊರೊನಾ ಅಪ್ ಡೇಟ್ : 75,829 ಮಂದಿಗೆ ಸೋಂಕು, 940 ಬಲಿ
ಸದರ್ನ್ ನೇವಲ್ ಕಮಾಂಡ್ ನ (ಎಸ್‍ಎನ್‍ಸಿ) ಗ್ಲೈಡರ್ ಇದಾಗಿದ್ದು, ಘಟನೆಯಲ್ಲಿ ರಾಜೀವ್ ಮತ್ತು ಸುನಿಲ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಐಎಚ್ ಎನ್ ಎಸ್ ಸಂಜೀವಿನಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರು ಮೃತಪಟ್ಟಿದ್ದಾರೆ.








