ನವದೆಹಲಿ : ಭಾರತದಲ್ಲಿ ಕೊರೊನಾ ಕಾಟ ಮುಂದುವರಿದಿದೆ. ಹೆಮ್ಮಾರಿ ಸೋಂಕು ಪ್ರತಿದಿನ ಮರಣ ಮೃದಂಗ ಬಾರಿಸುತ್ತ ಸಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 940 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, 75,829 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ.
ಇದನ್ನೂ ಓದಿ : 2 ಗಂಟೆಗಳಲ್ಲಿ ಕೋವಿಡ್ -19 ಸೋಂಕನ್ನು ಪತ್ತೆ ಹಚ್ಚಲಿರುವ ರಿಲಯನ್ಸ್ ಲೈಫ್ ಸೈನ್ಸಸ್ ನ ಕಿಟ್
ಈ ಮೂಲಕ ಭಾರತದಲ್ಲಿ ಇದುವರೆಗೂ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 65,49,374ಕ್ಕೆ ಮೃತಪಟ್ಟವರ ಸಂಖ್ಯೆ 1,01,782ಕ್ಕೆ ಏರಿದೆ
ಇನ್ನು ಒಟ್ಟು 65,49,374 ಕೊರೊನಾ ಸೋಂಕಿತರ ಪೈಕಿ ಸದ್ಯ 9,37,625 ಜನರು ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟಾರೆ 55,09,967 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.








