ಟೀಸರ್ ಹಾಗೂ ಪೋಸ್ಟರ್ ನಿಂದಲೇ ಭಾರೀ ನಿರೀಕ್ಷೆ ಹುಟ್ಟು ಹಾಕುತ್ತಿರುವ ಸ್ಯಾಂಡಲ್ ವುಡ್ ನ ಹೊಸ ಚಿತ್ರವಾದ ಅನಾಮಿಕಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ರಿಲೀಸ್ ಗೆ ರೆಡಿಯಾಗಿದೆ.
ಪಕ್ಕಾ ಹಾರರ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಟೀಸರ್ ನೋಡಿದ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಚಿತ್ರ ತೆರೆಗಪ್ಪಳಿಸುವುದಕ್ಕೆ ಸಿನಿಪ್ರಿಯರು ಕಾಯುತ್ತಿದ್ದಾರೆ. ಇತ್ತ ಟೀಸರ್ ಸಿನಿಪ್ರಿಯರ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಸಸ್ಪೆನ್ಸ್ ಕ್ರಿಯೇಟ್ ಮಾಡಿರುವ ಟೀಸರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮತ್ತೊಂದೆಡೆ ಚಿತ್ರದ ಟೀಸರ್ ನೋಡಿದ ಪ್ರೇಕ್ಷಕರೆಲ್ಲಾ ಚಿತ್ರತಂಡಕ್ಕೆ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಇನ್ನೂ ಪೋಸ್ಟರ್ ಅಂಡ್ ಟೈಟಲ್ ಕೂಡ ವಿಭಿನ್ನವಾಗಿದ್ದು, ವಿಭಿನ್ನ ಕಥೆ ಹೊಂದಿದ್ದು ಸಿನಿರಸಿಕರಿಗೆ ಈ ಚಿತ್ರ ಮನರಂಜನೆಯ ರಸದೌತಣ ನೀಡುವುದರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ : ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ..! ಮಾಟಮಂತ್ರ ಮಾಡಿ ಹುಳಿ ಹಿಂಡಿದ್ರಂತೆ..?
ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸೆನ್ಸಾರ್ ಮಂಡಳಿಂದಲೂ ಯುಎ ಸರ್ಟಿಫಿಕೇಟ್ ಪಡೆದುಕೊಂಡಿದೆ.
ತ್ರಿನೇತ್ರಾ ಬ್ಯಾನರ್ ನ ಅಡಿ ಮೂಡಿಬರುತ್ತಿರುವ ಚಿತ್ರಕ್ಕೆ ಖಂಡು, ಶಿವು, ವಿಜಯ ಅವರು ಬಂಡವಾಳ ಹೂಡಿದ್ದಾರೆ.
ಚಿತ್ರದಲ್ಲಿ ವಿಜಯಪ್ರಸಾದ , ಪ್ರೇಕ್ಷಾ, ಹರ್ಷಾ, ವಿಶ್ , ಅಭಯ್ ಸೇರಿದಂತೆ ಅನೇಕರ ತಾರಾಬಳಗವೇ ಇದೆ. ಪ್ರವೀಣ್ ಸುತಾರಾ ಅವರು ‘ಅನಾಮಿಕಾ’ಗೆ ಆಕ್ಷನ್ ಕಟ್ ಹೇಳಿದ್ದು, ಚಿತ್ರಕಥೆ, ಕಥೆ , ಸಂಭಾಷಣೆಯನ್ನೂ ಮಾಡಿದ್ದಾರೆ.
ಕುಮಾರ ಎಸ್ ಗೌಡ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಪ್ರಸನ್ನ ಭೋಜಶೆಟ್ಟಿ ಅವರ ಸಂಗೀತ ಚಿತ್ರಕ್ಕಿದೆ.










