ಬೆಂಗಳೂರು : ನದಿ ಮೂಲ, ಋಷಿ ಮೂಲ, ಹೆಣ್ಣಿನ ಮೂಲ ಹುಡುಕಬಾರದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಲಹೆ ನೀಡಿದ್ದಾರೆ.
ನಿರೂಪಕಿ ಅನುಶ್ರೀ ಅವರು ಮಾಜಿ ಮುಖ್ಯಮಂತ್ರಿವೊಬ್ಬರಿಗೆ ಕರೆ ಮಾಡಿ ರಕ್ಷಣೆಗೆ ನೆರವು ಕೋರಿದ್ದರು ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್.ಡಿ. ಕುಮಾರಸ್ವಾಮಿ, ಯಾರು ಆ ಮಾಜಿ ಸಿಎಂ’ ಎಂದು ಬಹಿರಂಗ ಪಡಿಸಲಿ ಎಂದು ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಇಂತಹ ವಿಷಯಗಳಿಗೆ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ.
ಅನಧಿಕೃತ ಸುದ್ದಿಗಳಿಗೆ ಪ್ರಕ್ರಿಯೆ ನೀಡಬೇಕು ಎನ್ನುವ ನಿಯಮವೇನಿಲ್ಲ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡದೇ ಇದ್ದಿದ್ದರೆ ಈ ಸುದ್ದಿಗೆ ವ್ಯಾಪಕತೆಯೇ ಸಿಗುತ್ತಿರಲಿಲ್ಲ.
ರಾಜಕೀಯ ಹಿನ್ನೆಲೆ ಇರುವವರು ಇಂತಹ ಅನಧಿಕೃತ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳಬೇಕಿರಲಿಲ್ಲ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಶಿರಾ ಉಪಚುನಾವಣೆ : ಅಖಾಡಕ್ಕೆ ಬಿಗ್ ಬಾಸ್ ದಿವಾಕರ್ ಎಂಟ್ರಿ
ಇದೇ ವೇಳೆ ಉಪಚುನಾವಣೆಗಳ ಬಗ್ಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ತಾತ್ವಿಕವಾಗಿ ವಿರೋಧವಾಗಿದೆ.
ಅವರು ಏನೇ ಮಾಡಿದರೂ ಇಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.








