ಬೆಂಗಳೂರು : ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನಡೆ ಕುರಿತ ಗೀತೆಗಳುಳ್ಳ ಆಡಿಯೋ-ವಿಡಿಯೋ ಸಿಡಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುರುವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ(BJP) ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಅತಿ ದೊಡ್ಡ ಬಹುಮತ ಇರುವ ಸರ್ಕಾರ ಇದೆ. ಇದು ಜನರು ಕೊಟ್ಟ ತೀರ್ಪು. ನಾವು ಅದರ ಬಗ್ಗೆ ಮಾತನಾಡುವುದಿಲ್ಲ.
ಇದನ್ನೂ ಓದಿ : ತಪ್ಪು ಮಾಡಿದ್ದರೇ ಒಪ್ಪಿಕೊಳ್ಳಲಿ, ತತ್ವ ಜ್ಞಾನಿಯಂತೆ ಮಾತಾಡೋದು ಬೇಡ : ಡಿಕೆಶಿಗೆ ಸಿ.ಟಿ ರವಿ ಟಾಂಗ್
ಆದರೆ ಈ ಸರ್ಕಾರ ನುಡಿದಂತೆ ನಡೆಯಿತಾ? ಕೊಟ್ಟ ಮಾತು ಉಳಿಸಿಕೊಂಡಿತಾ? ಈ ದೇಶಕ್ಕೆ ಆದ ಲಾಭ ಏನು? ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಆರು ವರ್ಷ ಆಗಿದೆ. ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ ಎಂದು ಗುಡುಗಿದ ಡಿಕೆಶಿ, ಜನರಿಗೆ ಮೋದಿ ಉದ್ಯೋಗ ಕೊಟ್ಟಿದ್ದಾರಾ? ಕಪ್ಪು ಹಣ ತರ್ತಿನಿ ಅಂದ್ರು ತಂದ್ರಾ?
ಇದನ್ನೂ ಓದಿ : ಆರ್.ಆರ್.ನಗರ ಬೈ ಎಲೆಕ್ಷನ್ ; ಫೈನಲ್ ಆಗದ ಬಿಜೆಪಿ ಅಭ್ಯರ್ಥಿ
ರಾಜ್ಯದಲ್ಲಿ ಶಾಂತಿ ಕಾಪಾಡಿದ್ರಾ? ದೇಶದ ಗಡಿ ಉಳಿಸಿಕೊಂಡರಾ? ದೇಶದ ಐಕ್ಯತೆ, ಸಮಗ್ರತೆ,ಶಾಂತಿ ಉಳಿಸಿಕೊಂಡ್ರಾ? ರೈತ ಕಾರ್ಮಿಕರು ಉಳಿದ್ರಾ? ಇದರ ಬಗ್ಗೆ ಬಿಜೆಪಿ ಸ್ನೇಹಿತರು ಉತ್ತರಿಸಬೇಕು ಎಂದು ಒತ್ತಾಯಿಸಿದರು.








