ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು ( Hathras gang rape )
ಲಕ್ನೋ, ಅಕ್ಟೋಬರ್08: ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ಇನ್ನೊಂದು ತಿರುವು ಪಡೆದುಕೊಂಡಿದೆ. ( Hathras gang rape )
ಪ್ರಮುಖ ಆರೋಪಿ ಸಂದೀಪ್ ಠಾಕೂರ್ ಯುಪಿ ಪೊಲೀಸರಿಗೆ ಪತ್ರ ಬರೆದಿದ್ದು, ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರರು ಹಿಂಸಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.

ಹತ್ರಾಸ್ ಎಸ್‌ಪಿಗೆ ಬುಧವಾರ ಉದ್ದೇಶಿಸಿ ಬರೆದ ಪತ್ರದಲ್ಲಿ, ಬಂಧನಕ್ಕೊಳಗಾದ ನಾಲ್ವರು ಶಂಕಿತ ಆರೋಪಿಗಳಲ್ಲಿ, ಪ್ರಮುಖ ಆರೋಪಿ ಸಂದೀಪ್ ಯುವತಿಯ ತಾಯಿ ಮತ್ತು ಸಹೋದರರ ಮೇಲೆ ಆರೋಪವನ್ನು ಮಾಡಿದ್ದಾನೆ.
ಭಾರತದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ವರದಿಯಾಗದ ಏಕೈಕ ಪ್ರದೇಶದಲ್ಲಿ ಶಾಲೆಗಳು ಪುನರಾರಂಭ
ಅವನು ನಿನ್ನೆ (ಬುಧವಾರ) ಸಂಜೆ ಹತ್ರಾಸ್‌ನ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಕಳುಹಿಸಿದ್ದಾನೆ. ಕಾನೂನಿನ ಪ್ರಕಾರ ನಾವು ಅದನ್ನು ಎಸ್‌ಪಿಗೆ ಕಳುಹಿಸಿದ್ದೇವೆ. ಈಗ ತನಿಖಾ ಸಂಸ್ಥೆಗಳು ಇದನ್ನು ಪರಿಶೀಲಿಸಲಿವೆ ಎಂದು ಅಲಿಗಢ್ ಜೈಲಿನ ಹಿರಿಯ ಅಧೀಕ್ಷಕ ಅಲೋಕ್ ಸಿಂಗ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಸಂದೀಪ್ ತಾನು ಮತ್ತು ಯುವತಿ ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ಹೇಳಿಕೊಂಡಿದ್ದಾನೆ. ನಾವು ಭೇಟಿಯಾಗುವುದನ್ನು ಹೊರತುಪಡಿಸಿ ಫೋನ್‌ನಲ್ಲಿ ಕೂಡ ಸಂಪರ್ಕದಲ್ಲಿ ಇದ್ದೇವು. ಆದರೆ, ಯುವತಿಯ ಕುಟುಂಬವು ನಮ್ಮ ಸ್ನೇಹವನ್ನು ಇಷ್ಟಪಡಲಿಲ್ಲ ಎಂದು ಸಂದೀಪ್ ಪತ್ರದಲ್ಲಿ ಬರೆದಿದ್ದಾನೆ.
ಸಂದೀಪ್ ಮಾಡಿರುವ ಎಲ್ಲಾ ಆರೋಪಗಳನ್ನು ಯುವತಿಯ ಕುಟುಂಬ ನಿರಾಕರಿಸಿದೆ. ಸೆಪ್ಟೆಂಬರ್ 14 ರಂದು ಯುವತಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು ಮತ್ತು ಎರಡು ವಾರಗಳ ನಂತರ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಪೋಷಕರೇ ಎಚ್ಚರ – ಕರ್ನಾಟಕ ಸೇರಿದಂತೆ ದೇಶದಲ್ಲಿದೆ 24 ನಕಲಿ ವಿಶ್ವವಿದ್ಯಾಲಯಗಳು
ಸಂದೀಪ್ ನನ್ನು ಸೆಪ್ಟೆಂಬರ್ 14 ರಂದು ಬಂಧಿಸಲಾಯಿತು.
ಉಳಿದ ಆರೋಪಿಗಳಾದ ಅವನ ಚಿಕ್ಕಪ್ಪ ರವಿ ಸಿಂಗ್, ಲುವ್ಕುಶ್ ಠಾಕೂರ್ ಮತ್ತು ರಾಮ್ ಕುಮಾರ್ ಅವರನ್ನು ನಂತರ ಬಂಧಿಸಲಾಯಿತು.
ಈ ನಾಲ್ವರ ಮೇಲೂ ಅತ್ಯಾಚಾರ, ಕೊಲೆ, ಮತ್ತು ಎಸ್‌ಸಿ / ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಐಪಿಸಿ ವಿಭಾಗಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಯುವತಿ, ಪೊಲೀಸರಿಗೆ ನೀಡಿದ ಕೊನೆಯ ಹೇಳಿಕೆಯಲ್ಲಿ, ನಾಲ್ಕು ಪುರುಷರನ್ನು ಹೆಸರಿಸಿದ್ದು, ಅವರ ಮೇಲೆ ಅತ್ಯಾಚಾರ ಮತ್ತು ಕತ್ತು ಹಿಸುಕಿದ ಆರೋಪವಿದೆ.

ಪೊಲೀಸರ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಿಂದ ಮಾರ್ಚ್ ವರೆಗೆ ಯುವತಿಯ ಸಹೋದರ ಮತ್ತು ಸಂದೀಪ್ ನಡುವೆ 104 ಕರೆಗಳನ್ನು ಮಾಡಲಾಗಿದೆ.
ಘಟನೆ ನಡೆದಾಗ ಸಂದೀಪ್ ಅವರ ಕುಟುಂಬ ಸಂದೀಪ್ ಹಸುಗಳಿಗೆ ನೀರು ಒದಗಿಸುತ್ತಿರುವುದಾಗಿ ಹೇಳಿಕೊಂಡಿದ್ದರೆ, ರಾಮ್ ಆ ದಿನ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಗೆ ಹೋಗಿದ್ದ ಎಂದು ಇತರ ಗ್ರಾಮಸ್ಥರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








