(Robert)
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇನ್ನೇನು ತೆರೆಗಪ್ಪಳಿಸಲು ಸಜ್ಜಾಗಿದೆ. ಸದ್ಯ ಥಿಯೇಟರ್ ಗಳ ತೆರೆಯಲು ಸರ್ಕಾರದಿಂದ ಗ್ರರೀನ್ ಸಿಗ್ನಲ್ ಸಿಕ್ಕಿದ್ದು, ಸಿನೆಮಾ ರಿಲೀಸ್ ಡೇಟ್ ಅನೌನ್ಸ್ ಆಗಬಹುದೆಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ ಡಿ ಬಾಸ್ ಭಕ್ತರು.
ಇನ್ನೂ ಈಗಾಗಲೇ ಹಾಡುಗಳ ಮೂಲಕ ಬಹಳ ಹೈಪ್ ಕ್ರಿಯೇಟ್ ಮಾಡಿರುವ (Robert) ರಾಬರ್ಟ್ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ನೀಡಿದೆ. ಹೌದು ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈ ಬಗ್ಗೆ ಅಕ್ಟೋಬರ್ 8ರಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಇವತ್ತು 10 ಗಂಟೆಗೆ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಕುತೂಹಲ ಮೂಡಿಸುವ ಪೋಸ್ಟರ್ ನಲ್ಲಿ ದರ್ಶನ್ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಅವತಾರವೆತ್ತಿರುವ ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿಸಿದೆ.
ದರ್ಶನ್ ಅವರು ಈ ಪೋಸ್ಟರ್ ಅನ್ನ ತಮ್ಮ ಟ್ವಿಟ್ಟ ರ್ ನಲ್ಲಿ ಶೇರ್ ಮಾಡಿ “A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ ತರುಣ್ ಸುಧೀರ್, ನಿಮ್ಮ ದಾಸ ದರ್ಶನ್” ಎಂದು ವಿಶ್ ಮಾಡಿದ್ದಾರೆ. ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ.
ಇನ್ನೂ ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆಲುಗು ನಟ ಜಗಪತಿ ಬಾಬು ವಿಲನ್ ಆಗಿ ಅಭಿನಯಿಸಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.
ಇನ್ನೂ ರಾಬರ್ಟ್ ನ ಟೀಸರ್ ಈಗಾಗಲೇ 5 ಮಿಲಿಯನ್ ಗೂ ಅಧಿಕ ವೀವ್ಸ್ ಗಿಟ್ಟಿಸಿಕೊಂಡಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ಹೀಗಾಗಿ ದರ್ಶನ್ ಅವರು ಇತ್ತೀಚೆಗೆ ಟ್ವೀಟ್ ಮೂಲಕ 5 ಮಿಲಿಯನ್ ವೀವ್ಸ್ ಗಳಿಸಿಕೊಟ್ಟ ಅಭಿಮಾನಿಗಳಿಗೆ ತುಂಬ ಹೃದಯದ ಧನ್ಯವಾದಗಳನ್ನ ಅರ್ಪಿಸಿದ್ದರು.

ಕೆ ಜಿಎಫ್ ಶೂಟಿಂಗ್ ಅಖಾಡಕ್ಕೆ ಮತ್ತೆ ‘ರಾಕಿ ಭಾಯ್’ ಎಂಟ್ರಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








