ಬೆಂಗಳೂರು : ಸರ್ಕಾರದ ಇತ್ತೀಚಿನ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳನ್ನು( School ) ಆರಂಭಿಸಬೇಕು ಎಂಬ ನಿರ್ಧಾರ ಮಾಡಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ( HD Kumaraswamy) ಪ್ರತಿಕ್ರಿಸಿದ್ದು, ಈಗ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳನ್ನು ಈಗ ತೆರೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಪೋಷಕರು ಹೊಂದಿದ್ದಾರೆ.
ಆದ್ದರಿಂದ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ. ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಅಭಿಯಾನ ನಡೆಯುತ್ತಿದೆ. ಪೋಷಕರು ಕೂಡ ಶಾಲೆ ಪ್ರಾರಂಭ ಬೇಡ ಅಂತಿದ್ದಾರೆ ಎಂದರು.
ಇದನ್ನೂ ಓದಿ : ನಾಲಿಗೆ ಹರಿಬಿಟ್ಟ ಸಚಿವ ಈಶ್ವರಪ್ಪ
ಇದೇ ವೇಳೆ ವಿದ್ಯಾಗಮ ( Vidyagama ) ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ವಿದ್ಯಾಗಮ ಕಾರ್ಯಕ್ರಮ ತಂದಿದೆ. ಇದರಿಂದ ಈಗಾಗಲೇ 26 ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದೆ. ಪೋಷಕರ ಪರ ಶಾಲೆ ಆರಂಭಿಸುವುದು ಬೇಡ ಎಂದು ಸರ್ಕಾರಕ್ಕೆ ಒತ್ತಾಯ ಹಾಕುತ್ತಿದ್ದೇನೆ. ಯಾರೋ ಕೆಲವರ ಒತ್ತಡಕ್ಕೆ ಮಣಿದು ಸರ್ಕಾರ ಶಾಲೆ ಆರಂಭಿಸಲು ಮುಂದಾಗಬಾರದು.

ಯಾರೋ ನಾಲ್ಕು ಜನ ಹಣ ಸಂಪಾದನೆ ಮಾಡಬೇಕು ಎಂಬ ಕಾರಣಕ್ಕೆ ಪೋಷಕರು ಮತ್ತು ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು. ಕೂಡಲೇ ಸರ್ಕಾರ ವಿದ್ಯಾಗಮ ನಿಲ್ಲಿಸಬೇಕು. ಜೀವ ಇದ್ದರೇ ಜೀವನ ನಡೆಸಬಹುದು. ಮುಖ್ಯಮಂತ್ರಿಗಳಿಗೂ ಶಾಲೆ ಆರಂಭಿಸುವುದು ಬೇಡ ಎಂದರು.
ಇದನ್ನೂ ಓದಿ : ಶಾಲೆಗಿಂತ ಜೀವ ಮುಖ್ಯ: ಸುರೇಶ್‌ಕುಮಾರ್ ಗೆ ಪತ್ರ ಬರೆದ ಸಿದ್ದು..!








