ADVERTISEMENT
Tuesday, June 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

admin by admin
June 16, 2026
in Newsbeat, Sports, ಕ್ರೀಡೆ
fifa world cup2026- spain vs capeverde

fifa world cup2026- spain vs capeverde

Share on FacebookShare on TwitterShare on WhatsappShare on Telegram

ಅಂಟ್ಲಾಟಿಕ್ ಮಹಾಸಾಗರವನ್ನು ದಾಟಿ ಬಂದ “ಬ್ಲೂ ಶಾರ್ಕ್ಸ್” ಮೀನುಗಳ ಫುಟ್‍ಬಾಲ್ ಪಯಣ..!

ಕೇಪ್ ವರ್ಡೆ…ನಿನ್ನೆ ಮೊನ್ನೆಯ ತನಕ
ಯಾರು ಕೂಡ ಕಣ್ಣೆತ್ತಿ ನೋಡದ ವಿಶ್ವ ಭೂಪಟದ ಒಂದು ಸಣ್ಣ ದೇಶ. ಸುಮಾರು ಐದಾರು ಲಕ್ಷ ಜನ ಸಂಖ್ಯೆ ಹೊಂದಿರುವ ಕೇಪ್‍ವರ್ಡೆ ದೇಶ ಇಂದು ಇಡೀ ಜಗತ್ತನ್ನೇ ತನ್ನತ್ತ ಬೆರಗಿನಿಂದ ನೋಡುವಂತೆ ಮಾಡಿದೆ. ಅದಕ್ಕೆ ಕಾರಣ 2026ರ ಫಿಫಾ ವಿಶ್ವಕಪ್‍ನಲ್ಲಿ ಸ್ಪೇನ್ ವಿರುದ್ಧ ಆಡಿದ ರೀತಿ. ಇಷ್ಟು ದಿನ ಅಪರಿಚಿತ ದೇಶವಾಗಿದ್ದ ಕೇಪ್‍ವರ್ಡೆ ರಾತ್ರೋ ರಾತ್ರಿ ಪರಿಚಿತ ದೇಶವಾಗಿ ಬದಲಾಗಿಬಿಟ್ಟಿದೆ.

Related posts

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

June 16, 2026
ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಹಣ ಪಡೆಯಲು ಹೊಸ ಅರ್ಜಿ; ದಾಖಲೆಗಳ ಪರಿಶೀಲನೆ ಕಡ್ಡಾಯ

June 16, 2026

ಹೌದು, ಕೇಪ್‍ವರ್ಡೆ ಎಂಬುದು ಆಫ್ರಿಕನ್ ಖಂಡದ ಸಣ್ಣ ದ್ವೀಪರಾಷ್ಟ್ರ. ಪ್ರಕೃತಿಯ ರಮನೀಯ ತಾಣ. ಪಶ್ಚಿಮ ಆಫ್ರಿಕಾದ ಕರಾವಳಿಯಿಂದ ಅಟ್ಲಾಂಟಿಕ್ ಮಹಾಸಾಗರದ ಮೂಲಕ ಸುಮಾರು 570 ಕಿಲೋ ಮೀಟರ್ ದೂರ ಕ್ರಮಿಸಿದ್ರೆ ಈ ಪುಟ್ಟ ದ್ವೀಪ ರಾಷ್ಟ್ರವನ್ನು ನೋಡಬಹುದು. ಒಟ್ಟು ಹತ್ತು ಜ್ವಾಲಾಮುಖಿ ದ್ವೀಪಗಳ ಸಮೂಹವಾಗಿರುವ ಕೇಪೆವರ್ಡೆ ದೇಶವನ್ನು ರಿಪಬ್ಲಿಕ್ ಆಫ್ ಕಬೊ ವರ್ಡೆ ಅಂತನೂ ಕರೆಯುತ್ತಾರೆ.

ಅಂದ ಹಾಗೇ, ಕೇಪ್‍ವರ್ಡೆ ದ್ವೀಪರಾಷ್ಟ್ರ ಸುದೀರ್ಘಕಾಲ ಪೋರ್ಚ್‍ಗಲ್‍ನ ಅಧೀನದಲ್ಲಿತ್ತು. ಹೀಗಾಗಿ ಕೇಪ್‍ವರ್ಡೆ ದೇಶದ ಫುಟ್‍ಬಾಲ್ ಆಟಗಾರರಿಗೆ ಪೋರ್ಚ್‍ಗಲ್ ಕ್ಲಬ್‍ನಲ್ಲಿ ಆಡುವ ಅವಕಾಶ ಸಿಗುತ್ತಿತ್ತು. ಪರಿಣಾಮ ಕೇಪ್‍ವರ್ಡೆ ಫುಟ್‍ಬಾಲ್ ತಂಡದಲ್ಲಿ ಗುಣಮಟ್ಟದ ಆಟಗಾರರ ಉದಯಕ್ಕೆ ಕಾರಣವಾಯ್ತು. ವಿಶ್ವ ಫುಟ್‍ಬಾಲ್‍ನ ಶ್ರೇಷ್ಠ ಆಟಗಾರರಾದ ಪೋರ್ಚ್‍ಗಲ್‍ನ ನಾನಿ, ಸ್ವೀಡನ್‍ದ ದಂತಕಥೆ ಹೆನ್ರಿಕ್ ಲಾರ್ಸನ್, ಫ್ರಾನ್ಸ್‍ನ ಪ್ಯಾಟ್ರಿಕ್ ವಿಬೆರಾ ಮೊದಲಾದ ಆಟಗಾರರ ಮೂಲ ಬೇರು ಇದೇ ಕೇಪೆವರ್ಡೆ ದೇಶದ್ದು.

ಕೇಪೆವರ್ಡೆ ಫುಟ್‍ಬಾಲ್ ತಂಡವನ್ನು ಅಕ್ಕರೆಯಿಂದ ಟುಬರೋಸ್ ಅಜುಯಿಸ್ ಎಂದು ಕರೆಯಲಾಗುತ್ತಿದೆ. ಅಂದ್ರೆ ಬ್ಲೂ ಶಾರ್ಕ್ಸ್ ಅಂತ. ಅಟ್ಲಾಂಟಿಕ್ ಮಹಾಸಾಗರ ಅಲೆಗಳನ್ನು ದಾಟಿ ಬಂದ ಶಾರ್ಕ್ ಮೀನುಗಳು ಇಂದು ಫುಟ್‍ಬಾಲ್ ಜಗತ್ತಿನಲ್ಲಿ ಸಂಚಲನವನ್ನುಂಟು ಮಾಡುತ್ತಿವೆ.

ನಿಜ, ಕೇಪ್‍ವರ್ಡೆ ತಂಡದ ಆಟಗಾರರು ಮೈದಾನಕ್ಕಿಳಿದ್ರೆ ಜ್ವಾಲಮುಖಿಯ ಲಾವರಸದಂತಹ ವೇಗವನ್ನು ಇವರ ಕಾಲಿನಲ್ಲಿ ಕಾಣಬಹುದು. ಶಾರ್ಕ್ ಮೀನಿನಂತೆ ತೀಕ್ಷ್ಣತೆಯನ್ನು ಇವರ ಕಣ್ಣುಗಳಲ್ಲಿ ನೊಡಬಹುದು. ತನ್ನ ದೇಶ ಸಣ್ಣ ದ್ವೀಪರಾಷ್ಟ್ರವಾದ್ರೂ ಬೆಟ್ಟದಷ್ಟು ಕನಸುಗಳು ಇವರ ಮನಸ್ಸಿನಲ್ಲಿವೆ. ಬ್ರೆಜಿಲ್‍ನ ದಂತಕಥೆ ಪೀಲೆ ಹೆಸರಿನ ಕ್ರೀಡಾಂಗಣದಲ್ಲಿ ಬೆವರು ಸುರಿಸಿರುವ ಇಲ್ಲಿನ ಆಟಗಾರರು ಪಳಗಿದ್ದು ಪೋರ್ಚ್‍ಗಲ್, ಸ್ಪೇನ್, ಫ್ರಾನ್ಸ್‍ನ ಫುಟ್‍ಬಾಲ್ ಕ್ಲಬ್‍ನ ರಣಾಂಗಣದಲ್ಲಿ. ಅಷ್ಟೇ ಅಲ್ಲ, ಈ ದೇಶದ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಯೂರೋಪ್, ಅಮೇರಿಕಾದಂತಹ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ಕ್ಲಬ್‍ಗಳಲ್ಲಿ ಫುಟ್‍ಬಾಲ್ ಆಟವನ್ನು ಕರಗತ ಮಾಡಿಕೊಂಡು ದೇಶದ ಪರ ಒಗ್ಗಟ್ಟಿನಿಂದ ಬಂದು ಆಡುತ್ತಿದ್ದಾರೆ. ಇದು ಈ ಪುಟಾಣಿ ದೇಶದ ಮಹಿಮೆ. ಅಪ್ಪಟ ದೇಶಭಕ್ತಿ.

ಫಿಫಾ ವಿಶ್ವಕಪ್‍ನ ಅರ್ಹತಾ ಸುತ್ತಿನಲ್ಲಿ ಬಲಿಷ್ಠ ಕ್ಯಾಮರೂನ್ ತಂಡವನ್ನು ಮಣಿಸಿ ಮೊದಲ ಬಾರಿ ಅರ್ಹತೆ ಪಡೆದುಕೊಂಡಾಗ ಇಡೀ ದ್ವೀಪರಾಷ್ಟ್ರವೇ ಆನಂದಬಾಷ್ಪ ಸುರಿಸಿತ್ತು. ಇನ್ನು ಫಿಫಾ ವಿಶ್ವಕಪ್‍ನ ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ದ ಗೋಲುರಹಿತವಾಗಿ ಡ್ರಾ ಮಾಡಿಕೊಂಡಾಗ ಇಡೀ ಫುಟ್‍ಬಾಲ್ ಜಗತ್ತೇ ನಿಬ್ಬೆರಗಾಗಿತ್ತು. ಅಷ್ಟೇ ಅಲ್ಲ, ಕೇಪ್‍ವರ್ಡೆ ಎಂಬ ದೇಶ ಎಲ್ಲಿದೆ ಎಂಬುದನ್ನು ಫುಟ್‍ಬಾಲ್ ಅಭಿಮಾನಿಗಳು ಗೂಗಲ್‍ನಲ್ಲಿ ಹುಡುಕುವಂತೆ ಮಾಡಿತ್ತು. (ನಾನು ಸಹ)

ಸ್ಪೇನ್ ವಿರುದ್ದ ಬ್ಲ್ಯೂ ಶಾಕ್ಸ್ ್ ತಂಡ ಆಡಿದ ಪರಿಯನ್ನು ಮೆಚ್ಚಲೇಬೇಕು. ಮಾಜಿ ವಿಶ್ವ ಚಾಂಪಿಯನ್, ಯೂರೋಪಿಯನ್‍ನ ಸಾಮ್ರಾಟ, ಕೋಟಿ ಕೋಟಿ ಬೆಲೆಬಾಳುವ ಸೂಪರ್ ಸ್ಟಾರ್ ಆಟಗಾರರು, ಗೂಳಿಯಂತೆ ನುಗ್ಗುವ ಸ್ಪೇನ್ ಆಟಗಾರರನ್ನು ಜ್ವಾಲಮುಖಿಯ ಬಂಡೆಗಳಂತೆ ತಡೆದು ನಿಲ್ಲಿಸಿದ್ರು. ಥೇಟ್ ಶಾರ್ಕ್ ಮೀನುಗಳಂತೆ ಮೈದಾನದಲ್ಲಿ ಮಿಂಚಿನ ಸಂಚಾರ ಮಾಡಿಕೊಂಡು ಸ್ಪೇನ್ ಗೂಳಿಗಳನ್ನು ತಬ್ಬಿಬ್ಬುಗೊಳಿಸಿದ್ರು.

ಅದರಲ್ಲೂ ಕೇಪ್‍ವರ್ಡೆ ತಂಡದ ಗೋಲ್ ಕೀಪರ್ 40ರ ಹರೆಯದ ವೋಜಿನ್ಹಾ ಫುಟ್‍ಬಾಲ್ ಪ್ರೇಮಿಗಳ ಕಣ್ಮನಿಯಾದ್ರು. ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ಗೋಲುಗಳನ್ನು ತಡೆದ ವೋಜಿನ್ಹಾ ಅವರು ರಾತ್ರೋರಾತ್ರಿ ಸೂಪರ್‍ಸ್ಟಾರ್ ಆಗಿ ಹೊರಹೊಮ್ಮಿದ್ರು. ಹಾಗೇ ಕೋಚ್ ಪೆಡ್ರೋ ಬುಬಿಸ್ಟಾ ಬ್ರಿಟೊ ಅವರು ಸ್ಪೇನ್ ತಂಡವನ್ನು ಕಟ್ಟಿ ಹಾಕಲು ರಚಿಸಿದ ರಣತಂತ್ರ ಮಾತ್ರ ಅದ್ಭುತವಾಗಿತ್ತು.

ಸ್ಪೇನ್‍ನ ಟಿಕಿ ಟಾಕಾ ಅಂದ್ರೆ ಶಾರ್ಟ್ ಪಾಸಿಂಗ್ ಶೈಲಿಯನ್ನು ಧೂಳಿಪಟ ಮಾಡಲು ಪೆಡ್ರೋ ಮೂರು ಅಸ್ತ್ರಗಳನ್ನು ಪ್ರಯೋಗಿಸಿದ್ರು. ಲೋ ಬ್ಲಾಕ್ ಡಿಫೆನ್ಸ್ ಮೂಲಕ ಸ್ಪೇನ್ ಆಟಗಾರರ ಆಕ್ರಮಣವನ್ನು ಕಟ್ಟಿಹಾಕುವುದು, ಡಬಲ್ ಟೀಮಿಂಗ್ ಮೂಲಕ ಸ್ಪೇನ್‍ನ ವಿಂಗರ್ಸ್ ಆಟಗಾರರ ಎದುರು ಇಬ್ಬಿಬ್ಬರು ಆಟಗಾರರು ಮುಗಿಬೀಳೋದು, ನಾಯಕ ರಯಾನ್ ಮೆಂಡಸ್ ಮತ್ತು ಫಾರ್ವರ್ಡ್ ಆಟಗಾರರು ಚೆಂಡು ಸಿಕ್ಕ ತಕ್ಷಣವೇ ಲಾಂಗ್ ಪಾಸ್‍ಗಳ ಮೂಲಕ ಕೌಂಟರ್ ಅಟ್ಯಾಕ್ ಮಾಡೋದು. ಈ ಮೂಲಕ ಸ್ಪೇನ್ ತಂಡಕ್ಕೆ ಒತ್ತಡ ಹೇರುವುದು ಪೆಡ್ರೋ ಅವರ ಮಾಸ್ಟರ್ ಪ್ಲ್ಯಾನ್ ಆಗಿತ್ತು. ಅದಕ್ಕೆ ತಕ್ಕಂತೆ ಕೇಪ್‍ವರ್ಡೆ ಆಟಗಾರರು ಕೋಚ್‍ನ ರಣತಂತ್ರಗಳನ್ನು ಅಳವಡಿಸಿಕೊಂಡು ಸ್ಪೇನ್ ಆಟಗಾರರ ಗರ್ವಭಂಗ ಮಾಡಿದ್ರು.

ಒಟ್ಟಿನಲ್ಲಿ ಕೇಪ್‍ವರ್ಡೆ ತಂಡ ಫುಟ್‍ಬಾಲ್ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಅಲ್ಲದೆ ಕೆಲವು ದಾಖಲೆಗಳು ಕೂಡ ಸದ್ದಿಲ್ಲದೆ ಅಂಟಿಕೊಂಡಿವೆ. ಒಂದಂತೂ ನಿಜ, ಫಿಫಾ ವಿಶ್ವಕಪ್‍ನಲ್ಲಿ ಆಡಲು ಕೋಟಿ ಕೋಟಿ ಹಣ ಬೇಡ.. ಕೋಟಿ ಕೋಟಿ ಜನಸಂಖ್ಯೆ ಬೇಡ. ಪ್ರತಿಭೆ, ಸಾಮಥ್ರ್ಯ, ಬದ್ದತೆ, ಪರಿಶ್ರಮ, ಒಗ್ಗಟ್ಟು, ದೇಶಪ್ರೇಮವಿದ್ರ್ರೆ ಸಾಕು, ಎಂಥ ಸಣ್ಣರಾಷ್ಟ್ರವಾದ್ರೂ ಆಡಬಹುದು ಎಂಬುದಕ್ಕೆ ಕೇಪ್‍ವರ್ಡೆ ದೇಶ ಅತ್ಯುತ್ತಮ ನಿದರ್ಶನ. ಕೊನೆಯದಾಗಿ ನಮ್ಮ ಭಾರತ ಫಿಫಾ ವಿಶ್ವಕಪ್‍ನಲ್ಲಿ ಯಾವಾಗ ಆಡುತ್ತೆ..? ಸದ್ಯಕ್ಕೆ ಗೊತ್ತಿಲ್ಲ.

ಸನತ್ ರೈ

Tags: #(Ryan Mendes#Cape Verde Footbal#Coach Pedro Bubista#Goalkeeper Vozinha#Spain vs Cape Verde#The Blue Sharks Football
ShareTweetSendShare
Join us on:

Related Posts

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

by Shwetha
June 16, 2026
0

ಪಶ್ಚಿಮ ಬಂಗಾಳದ ರಾಜಕೀಯ ಬಂಡಾಯದ ಕಿಡಿ ಈಗ ಉತ್ತರ ಪ್ರದೇಶದ ಚುನಾವಣಾ ಅಖಾಡದಲ್ಲಿ ಭಾರೀ ಸಂಚಲನ ಮೂಡಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ರೆಬೆಲ್ ಸಂಸದರು ದೆಹಲಿಯಲ್ಲಿ ಎನ್‌ಡಿಎ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಹಣ ಪಡೆಯಲು ಹೊಸ ಅರ್ಜಿ; ದಾಖಲೆಗಳ ಪರಿಶೀಲನೆ ಕಡ್ಡಾಯ

by Shwetha
June 16, 2026
0

ರಾಜ್ಯದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಹಾಗೂ ಅನರ್ಹ ಫಲಾನುಭವಿಗಳನ್ನು ಹೊರಗಿಡಲು ಹೊಸ ಅರ್ಜಿ ಮತ್ತು ದಾಖಲೆ...

ಆರ್ ಎಸ್ ಎಸ್ ಲೆಕ್ಕ ಕೇಳಿದ ಪ್ರಿಯಾಂಕ್ ಖರ್ಗೆಗೆ ಸಂಸದ ತೇಜಸ್ವಿ ಸೂರ್ಯ ಖಡಕ್ ತಿರುಗೇಟು: ಐಟಿ ಬಿಟಿ ಬಿಟ್ಟು ಇಲ್ಲಿ ಸಂಶೋಧನೆ ಮಾಡಬೇಡಿ ಎಂದು ವ್ಯಂಗ್ಯ

ಆರ್ ಎಸ್ ಎಸ್ ಲೆಕ್ಕ ಕೇಳಿದ ಪ್ರಿಯಾಂಕ್ ಖರ್ಗೆಗೆ ಸಂಸದ ತೇಜಸ್ವಿ ಸೂರ್ಯ ಖಡಕ್ ತಿರುಗೇಟು: ಐಟಿ ಬಿಟಿ ಬಿಟ್ಟು ಇಲ್ಲಿ ಸಂಶೋಧನೆ ಮಾಡಬೇಡಿ ಎಂದು ವ್ಯಂಗ್ಯ

by Shwetha
June 16, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನೋಂದಣಿ, ಆದಾಯ ಹಾಗೂ ಆಸ್ತಿಪಾಸ್ತಿಗಳ ವಿವರ ಕೋರಿ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರು...

LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಎಚ್ಚರಿಕೆ; ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿ ಬಂದ್ ಸಾಧ್ಯತೆ

LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಎಚ್ಚರಿಕೆ; ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿ ಬಂದ್ ಸಾಧ್ಯತೆ

by Shwetha
June 16, 2026
0

ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಹೊಸ ನಿಯಮಗಳ ಪ್ರಕಾರ, ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರಿಗೆ ಜುಲೈ 1, 2026ರಿಂದ ಗ್ಯಾಸ್...

ಪ್ರಿಯಾಂಕ್ ಖರ್ಗೆ ಪತ್ರ ಕೇವಲ ರಾಜಕೀಯ ಗಿಮಿಕ್ ಎಂದ ಮೋಹನ್ ಭಾಗವತ್: ನಾವು ಬ್ರಿಟಿಷರ ಕಾಲದಲ್ಲೂ ಇದ್ದೆವು ಈಗಲೂ ಇದ್ದೇವೆ: ಖರ್ಗೆ ಕೇಳಿದ ನೋಂದಣಿ ಪ್ರಶ್ನೆಗೆ ಮೋಹನ್ ಭಾಗವತ್ ಕೊಟ್ಟ ಪವರ್ ಫುಲ್ ಉತ್ತರ ಇದು

ಪ್ರಿಯಾಂಕ್ ಖರ್ಗೆ ಪತ್ರ ಕೇವಲ ರಾಜಕೀಯ ಗಿಮಿಕ್ ಎಂದ ಮೋಹನ್ ಭಾಗವತ್: ನಾವು ಬ್ರಿಟಿಷರ ಕಾಲದಲ್ಲೂ ಇದ್ದೆವು ಈಗಲೂ ಇದ್ದೇವೆ: ಖರ್ಗೆ ಕೇಳಿದ ನೋಂದಣಿ ಪ್ರಶ್ನೆಗೆ ಮೋಹನ್ ಭಾಗವತ್ ಕೊಟ್ಟ ಪವರ್ ಫುಲ್ ಉತ್ತರ ಇದು

by Shwetha
June 16, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನೋಂದಣಿ, ಆಸ್ತಿ ಮತ್ತು ಆದಾಯದ ಬಗ್ಗೆ ವಿವರ ಕೇಳಿ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಪತ್ರಕ್ಕೆ ಸಂಘದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram