ಐಪಿಎಲ್ 2020 – 24ನೇ ಪಂದ್ಯದಲ್ಲಿ ಕೆಕೆಆರ್ – ಕಿಂಗ್ಸ್ ಇಲೆವೆನ್ ಹಣಾಹಣಿ..!
2020ರ ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ.
ಈಗಾಗಲೇ ಸಾಲು ಸಾಲು ಐದು ಪಂದ್ಯಗಳಲ್ಲಿ ಸೋಲು ಕಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪೆಟ್ಟು ತಿಂದ ಹುಲಿಯಂತಾಗಿದೆ.
ಕ್ರಿಕೆಟ್ ಪಂಡಿತರ, ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಿರುವ ಕೆ.ಎಲ್. ರಾಹುಲ್ ಬಳಗ ಗೆಲುವಿನ ಹುಡುಕಾಟದಲ್ಲಿದೆ.
ಎಲ್ಲಿ ತಪ್ಪಾಗಿದೆ ? ಏನು ಎಡವಟ್ಟಾಗಿದೆ ಎಂಬುದು ಗೊತ್ತಿದ್ರೂ ತಂಡದಿಂದ ಪದೇ ಪದೇ ತಪ್ಪುಗಳು ನಡೆಯುತ್ತನೇ ಇದೆ.
ಮುಖ್ಯವಾಗಿ ಕಿಂಗ್ಸ್ ಇಲೆವೆನ್ ತಂಡಕ್ಕೆ ಮಧ್ಯಮ ಕ್ರಮಾಂಕದ ಮತ್ತು ಬೌಲರ್ ಗಳು ಕೈಕೊಡುತ್ತಿದ್ದಾರೆ.
ಬ್ಯಾಟಿಂಗ್ ನಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ನಿಕೊಲಾಸ್ ಪೂರನ್ ಮಾತ್ರ ಶೈನ್ ಆಗುತ್ತಿದ್ದಾರೆ.
ಈ ನಡುವೆ ಸತತ ವೈಫಲ್ ಅನುಭವಿಸುತ್ತಿರುವ ಗ್ಲೇನ್ ಮ್ಯಾಕ್ಸ್ ವೆಲ್ ಬದಲು ಇಂದಿನ ಪಂದ್ಯಕ್ಕೆ ಕ್ರಿಸ್ ಗೇಲ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ.
ಒಂದು ವೇಳೆ ಕ್ರಿಸ್ ಗೇಲ್ 11ರ ಬಳಗದಲ್ಲಿ ಕಾಣಿಸಿಕೊಂಡ್ರೆ, ಮಯಾಂಕ್ ಜೊತೆ ಇನಿಂಗ್ಸ್ ಆರಂಭಿಸಬಹುದು.
ಹೀಗಾಗಿ ಕೆ.ಎಲ್. ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.
ಇನ್ನು ಸೋಲಿನಿಂದ ಹೊರಬಂದಿರುವ ಕೆಕೆಆರ್ ಗೆಲುವಿನ ಲಯದಲ್ಲಿದೆ.
ತಂಡದ ಯುವ ಆಟಗಾರರು ನೀಡುತ್ತಿರುವ ಪ್ರದರ್ಶನದಿಂದ ಕೆಕೆಆರ್ ಜಯದ ಹಾದಿಯಲ್ಲಿ ಸಾಗುತ್ತಿದೆ.
ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕೆಕೆಆರ್ ಸ್ಥಿರ ಪ್ರದರ್ಶನ ನೀಡಬೇಕಿದೆ. ಮುಖ್ಯವಾಗಿ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಬೇಕಿದೆ.
ಆದ್ರೆ ಕೆಕೆಆರ್ ಬೌಲರ್ ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಕಿಂಗ್ಸ್ ಪಂಜಾಬ್ ಸಂಭವನೀಯ ತಂಡ
ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್‍ವಾಲ್, ನಿಕೊಲಾಸ್ ಪೂರನ್, ಪ್ರಭಾಸಿಮ್ರಾನ್ ಸಿಂಗ್, ಮನ್‍ದೀಪ್ ಸಿಂಗ್,
ಮುಜೀಬ್ ಉರ್ ರಹಮಾನ್, ಆರ್ಶ್‍ದೀಪ್ ಸಿಂಗ್ /ಎಮ್. ಅಶ್ವಿನ್, ರವಿ ಬಿಸ್ನೋಯ್, ಶೆಲ್ಡನ್ ಕಾಟ್ರೆಲ್, ಮಹಮ್ಮದ್ ಶಮಿ.
ಕೊಲ್ಕತ್ತಾ ನೈಟ್ ರೈಡರ್ಸ್ ಸಂಭವನೀಯ ತಂಡ
ದಿನೇಶ್ ಕಾರ್ತಿಕ್ (ನಾಯಕ) ರಾಹುಲ್ ತ್ರಿಪಾಠಿ, ಶುಬ್ಮನ್ ಗಿಲ್, ನಿತೇಶ್ ರಾಣಾ, ಇಯಾನ್ ಮೊರ್ಗಾನ್, ಆಂಡ್ರೆ ರಸೆಲ್,
ಸುನೀಲ್ ನರೇನ್, ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರ್ಕೋಟಿ, ಶಿವಮ್ ಮಾವಿ, ವರುಣ್ ಚಕ್ರವರ್ತಿ.








