ಯಾದಗಿರಿ: ಮಹಾರಾಷ್ಟ್ರ ದೇಶದಲ್ಲಿ ಅತಿ ಹೆಚ್ಚು ಹೆಮ್ಮಾರಿ ಕೊರೊನಾ ಸೋಂಕಿತರಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಿಂದ(Mumbai based) ಬರುವ ಪ್ರತಿಯೊಬ್ಬರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ರಾಜ್ಯ ಸರ್ಕಾರದ ಆದೇಶವಿದೆ.
ಆದರೆ, ಮಹಾರಾಷ್ಟ್ರದಿಂದ ರೈಲಿನ ಮೂಲಕ ಬಂದ ಪ್ರಯಾಣಿಕನೊಬ್ಬ(passenger) ಕೊರೊನಾ ಸೇರಿ ಯಾವ ಟೆಸ್ಟ್ ಮಾಡಿಸಿಕೊಳ್ಳುವುದಿಲ್ಲ, ಏನು ಮಾಡುತ್ತೀರಿ ಮಾಡಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿಗೆ ಅವಾಜ್ ಹಾಕಿರುವ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೂಪೇಶ್ ಎಂಬ ಪ್ರಯಾಣಿಕ(passenger) ಮುಂಬೈನಿಂದ ಉದ್ಯಾನ್ ಎಕ್ಸ್ಪ್ರೆಸ್ ರೈಲಿನ ಮೂಲಕ ಯಾದಗಿರಿಗೆ ಬಂದಿದ್ದಾನೆ. ರೂಪೇಶ್ ಮತ್ತು ಆತನ ಕುಟುಂಬಸ್ಥರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳದೆ ಆರೋಗ್ಯ ಸಿಬ್ಬಂದಿ ಧಮ್ಕಿ ಹಾಕಿದ್ದಾರೆ. ಇದೇ ಸಂದರ್ಭ ಬಳಸಿಕೊಂಡ ನೂರಾರು ಪ್ರಯಾಣಿಕರು ಕೊರೊನಾ ತಪಾಸಣೆ ಮಾಡಿಸಿಕೊಳ್ಳದೆ ಯಾದಗಿರಿ ನಗರಕ್ಕೆ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಯಾದಗಿರಿಗೆ ಮುಂಬೈ ಕಂಟಕದಿಂದಾಗಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ.








