ಬಾಗಲಕೋಟೆಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ
ರಾಯಚೂರು: ನಿನ್ನೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ(heavy rain effects )ಅವಾಂತರವನ್ನೇ ಸೃಷ್ಟಿಸಿದೆ. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಸ್ಕಿಹಳ್ಳದ ನಡುಗಡ್ಡೆಯಲ್ಲಿ ಇಬ್ಬರು ಯುವಕರು ಸಿಲುಕಿರುವ ಘಟನೆ ನಡೆದಿದೆ.
ಮಸ್ಕಿ ಹಳ್ಳದ ನಡುಗಡ್ಡೆಯಲ್ಲಿ ಚನ್ನಬಸವ ಮಸ್ಕಿ, ಜಲೀಲ್ ಮಸ್ಕಿ ನಡುಗಡ್ಡೆಯಲ್ಲಿ ಸಿಲುಕಿ ರಕ್ಷಣೆಗೆ ಪರದಾಡುತ್ತಿದ್ದಾರೆ. ಮಸ್ಕಿ ಜಲಾಶಯದಿಂದ ಏಕಾಏಕಿ 1600 ಕ್ಯೂಸೆಕ್ ನೀರುಬಿಟ್ಟ ಹಿನ್ನೆಲೆಯಲ್ಲಿ ಮಸ್ಕಿ ನಾಲೆಯಲ್ಲಿ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ನಾಲೆಯ ನಡುಗಡ್ಡೆಯಲ್ಲಿ ಬಹಿರ್ದೆಸೆಗೆ ಹೋಗಿದ್ದ ಈ ಇಬ್ಬರೂ ಯುವಕರು ನೀರಿನ ಮಧ್ಯೆ ಲಾಕ್ ಆಗಿದ್ದಾರೆ.

ತಮ್ಮನ್ನು ರಕ್ಷಣೆ ಮಾಡುವಂತೆ ಯುವಕರು ಅಂಗಲಾಚುತ್ತಿದ್ದು, ಸ್ಥಳೀಯರು ಹಗ್ಗದಿಂದ ಯುವಕರ ರಕ್ಷಣೆ ಕಾರ್ಯ ಮಾಡುತ್ತಿದ್ದಾಋಎ. ಘಟನೆ ಅರಿತು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ
ಬಾಗಲಕೋಟೆ ಜಿಲ್ಲೆಯಲ್ಲಿ ಕೆಲವೆಡೆ ತಡರಾತ್ರಿ ಸುರಿದ ಮಳೆ ಭಾರಿ ಮಳೆಗೆ ಜನಜೀವನ(heavy rain effects)ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಬನಹಟ್ಟಿ ನಗರದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹೀಗಾಘಿ ನೀರನ್ನು ಹೊರಹಾಕಲು ಜನರು ರಾತ್ರಿಯಡಿ ಜಾಗರಣೆ ಮಾಡಿದ್ದಾರೆ.

ಬನಹಟ್ಟಿಯ ಲಕ್ಷ್ಮಿ ನಗರದಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳು ಜಲಾವೃತಗೊಂಡಿದ್ದು, ಅಗತ್ಯ ಧವಸ ಧಾನ್ಯಗಳು ಸೇರಿ ಅಪಾರ ಪ್ರಮಾಣದ ಹಾನಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








