ADVERTISEMENT
Wednesday, September 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- ಸೋತು ಗೆದ್ದ ಕೆಕೆಆರ್.. ಗೆದ್ದು ಸೋತ ಕಿಂಗ್ಸ್ ಇಲೆವೆನ್ ಪಂಜಾಬ್

Sanath Rai by Sanath Rai
October 11, 2020
in IPL 2020, Newsbeat, ಐಪಿಎಲ್ 2020
shubman gill kkr ipl 2020 saakshatv
Share on FacebookShare on TwitterShare on WhatsappShare on Telegram

ಐಪಿಎಲ್ 2020- ಸೋತು ಗೆದ್ದ ಕೆಕೆಆರ್.. ಗೆದ್ದು ಸೋತ ಕಿಂಗ್ಸ್ ಇಲೆವೆನ್ ಪಂಜಾಬ್

dinesh karthik kkr ipl 2020 saakshatvಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅದೃಷ್ಟವೇ ಸರಿ ಇಲ್ಲ ಅನ್ಸುತ್ತೆ.

Related posts

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

September 23, 2026
ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

September 23, 2026

ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಿಂಗ್ಸ್ ಇಲೆವೆನ್ ಎರಡು ರನ್ ಗಳಿಂದ ಸೋಲು ಅನುಭವಿಸಿತ್ತು.

ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ತಂಡ ನೀರಸ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಟೂರ್ನಿಯಲ್ಲಿ ಅಡಿರುವ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಕಿಂಗ್ಸ್ ತಂಡ ಸೋತಿದೆ.
ಇನ್ನು ಕೆಕೆಆರ್ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ.  ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

ಆದ್ರೆ ಕಿಂಗ್ಸ್ ಇಲೆವೆನ್ ತಂಡದ ಬೌಲರ್ ಗಳು ಆರಂಭದಲ್ಲಿ ಮೇಲುಗೈ ಸಾಧಿಸಿದ್ರು. ರಾಹುಲ್ ತ್ರಿಪಾಠಿ ನಾಲ್ಕು ರನ್ ಗೆ ಔಟಾದ್ರೆ, ನಿತೀಶ್ ರಾಣಾ 2ರನ್, ಇಯಾನ್ ಮೊರ್ಗಾನ್ 24 ರನ್ ಹಾಗೂ ಆಂಡ್ರೆ ರಸೇಲ್ 5 ರನ್ ಗಳಿಸಿ ನಿರಾಸೆ ಮೂಡಿಸಿದ್ರು.

ಆದ್ರೆ ಶುಬ್ಮನ್ ಗಿಲ್ ಆಕರ್ಷಕ 57 ರನ್ ಗಳಿಸಿ ಮಿಂಚು ಹರಿಸಿದ್ರು. ಇನ್ನು ನಾಯಕ ದಿನೇಶ್ ಕಾರ್ತೀಕ್ ಕೂಡ 58 ರನ್ ದಾಖಲಿಸಿ ಮತ್ತೆ ಬ್ಯಾಟಿಂಗ್ ಲಯ ಕಂಡುಕೊಂಡ್ರು.

ಅಂತಿಮವಾಗಿ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.

ಸವಾಲನ್ನು ಬೆನ್ನಟ್ಟಿದ್ದ ಕಿಂಗ್ಸ್ ತಂಡಕ್ಕೆ ಮಾಯಾಂಕ್ ಅಗರ್ ವಾಲ್ ಮತ್ತು ಕೆ.ಎಲ್. ರಾಹುಲ್ ಉತ್ತಮ ಆರಂಭ ನೀಡಿದ್ರು.

Kings XI Punjab  KL Rahul  Mayank Agarwal ipl 2020 saakshatvಅಲ್ಲದೆ ಮೊದಲ ವಿಕೆಟ್‍ಗೆ 115 ರನ್ ದಾಖಲಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.  ಆದ್ರೆ ಈ ಹಂತದಲ್ಲಿ ಮಯಾಂಕ್ 56 ರನ್ ಗಳಿಸಿ ಪೆವಿಲಿಯನ್ ಗೆ ಹಿಂತಿರುಗಿದ್ರು.
ನಂತರ ನಿಕೊಲಾಸ್ ಪೂರನ್ 16 ರನ್, ಸಿಮ್ರಾನ್ ಸಿಂಗ್ 4 ರನ್ ರನ್‍ಗೆ ಔಟಾದಾಗಲೂ ಕಿಂಗ್ಸ್ ಗೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು.

ಯಾಕಂದ್ರೆ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದರು. ಆದ್ರೆ 19ನೇ ಓವರ್ ನಲ್ಲಿ 74 ರನ್ ಗಳಿಸಿದ್ದ ರಾಹುಲ್ ಔಟಾಗುತ್ತಿದ್ದಂತೆ ಕೆಕೆಆರ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯಶಸ್ವಿಯಾಯ್ತು.

ಅಂತಿಮವಾಗಿ ಕಿಂಗ್ಸ್ ಇಲೆವೆನ್ ತಂಡ ಐದು ವಿಕೆಟ್ ಗೆ 162 ರನ್ ಗಳಿಸಿ ಎರಡು ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು.

29 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಗಳ ಸಹಾಯದಿಂದ 58 ರನ್ ಗಳಿಸಿದ್ದ ದಿನೇಶ್ ಕಾರ್ತೀಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Tags: # Indian Premier League match#dinesh karthik#saakshatvCricketIPLIPL 2020kkrKL RahuLKolkata Knight RidersLokesh RahulMayank Agarwal
ShareTweetSendShare
Join us on:

Related Posts

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

by Shwetha
September 23, 2026
0

ತುಮಕೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಹೊಸ ಪಿಂಚಣಿ ಪದ್ಧತಿಯನ್ನು (NPS) ರದ್ದುಗೊಳಿಸಿ, ಹಳೇ ಪಿಂಚಣಿ...

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

by Shwetha
September 23, 2026
0

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನ ಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ (ECI) ವೇಳಾಪಟ್ಟಿ ಪ್ರಕಟಿಸಿದೆ. ಬಿಹಾರ,...

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ರೆ ಬಿಡಲ್ಲ:ಭ್ರಷ್ಟ ಅಧಿಕಾರಿಗಳ ಅಟ್ಟಹಾಸಕ್ಕೆ ಬ್ರೇಕ್- ಕೆಪಿಎಸ್‌ಸಿ ಮುಚ್ಚುವ ಬಗ್ಗೆ DK ಸರ್ಕಾರದಿಂದ ಗಂಭೀರ  ಚಿಂತನೆ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ರೆ ಬಿಡಲ್ಲ:ಭ್ರಷ್ಟ ಅಧಿಕಾರಿಗಳ ಅಟ್ಟಹಾಸಕ್ಕೆ ಬ್ರೇಕ್- ಕೆಪಿಎಸ್‌ಸಿ ಮುಚ್ಚುವ ಬಗ್ಗೆ DK ಸರ್ಕಾರದಿಂದ ಗಂಭೀರ ಚಿಂತನೆ

by Shwetha
September 23, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಂದರೆ ಕೆಪಿಎಸ್‌ಸಿ ಪರೀಕ್ಷೆ ಮತ್ತು ನೇಮಕಾತಿಗಳಲ್ಲಿ ನಡೆಯುತ್ತಿರುವ ಸಾಲು ಸಾಲು ಹಗರಣಗಳು ರಾಜ್ಯ ಸರ್ಕಾರದ ನಿದ್ದೆಗೆಡಿಸಿವೆ. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ವಿಧಾನ ಪರಿಷತ್‌ನಲ್ಲಿ ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ಭಾರಿ ಗದ್ದಲ: ಬಿಜೆಪಿ-ಜೆಡಿಎಸ್ ಸದಸ್ಯರಿಂದ ಸಭಾತ್ಯಾಗ

by Shwetha
September 23, 2026
0

ವಿಧಾನ ಪರಿಷತ್‌ನ ಎರಡನೇ ದಿನದ ಅಧಿವೇಶನದಲ್ಲಿ ಸಾಲಮನ್ನಾ ಹಾಗೂ ಬರ ಪರಿಹಾರ ವಿಚಾರಗಳ ಚರ್ಚೆ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು....

ಯುಪಿಐ ಹೆಸರಲ್ಲಿ ಸಾಮಾನ್ಯರ ಜೇಬಿಗೆ ಕತ್ತರಿ: ಅಮೆರಿಕದ ಒತ್ತಡಕ್ಕೆ ಸಿಲುಕಿ ಭಾರತೀಯರ ಮೇಲೆ ಹೊರೆ- ಯುಪಿಐ ಶುಲ್ಕ ಏರಿಕೆಯ ಹಿಂದಿನ ರಹಸ್ಯ ಪ್ರಶ್ನಿಸಿದ ಖರ್ಗೆ

ಯುಪಿಐ ಹೆಸರಲ್ಲಿ ಸಾಮಾನ್ಯರ ಜೇಬಿಗೆ ಕತ್ತರಿ: ಅಮೆರಿಕದ ಒತ್ತಡಕ್ಕೆ ಸಿಲುಕಿ ಭಾರತೀಯರ ಮೇಲೆ ಹೊರೆ- ಯುಪಿಐ ಶುಲ್ಕ ಏರಿಕೆಯ ಹಿಂದಿನ ರಹಸ್ಯ ಪ್ರಶ್ನಿಸಿದ ಖರ್ಗೆ

by Shwetha
September 23, 2026
0

ಬೆಂಗಳೂರು: ವಿಶ್ವದಾದ್ಯಂತ ಭಾರತದ ಅತಿ ದೊಡ್ಡ ಡಿಜಿಟಲ್ ಕ್ರಾಂತಿ ಎಂದು ಬಿಂಬಿತವಾಗಿರುವ ಯುಪಿಐ ವ್ಯವಸ್ಥೆಯನ್ನು ಈಗ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram