ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ (Madagaja) ಸಿನಿಮಾ ಬಿರುಸಿನಿಂದ ಚಿತ್ರೀಕರಣ ಮಾಡುತ್ತಿದೆ. ಲಾಕ್‌ಡೌನ್ ಬಳಿಕ ಎರಡನೇ ಹಂತದ ಶೂಟಿಂಗ್ ಆರಂಭಿಸಿದ್ದ ಮದಗಜ ಇದೀಗ, ಮೈಸೂರಿನಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದೆ. ಈ ಸುದ್ದಿಯನ್ನು ಖುದ್ದು ನಿರ್ದೇಶಕ ಮಹೇಶ್ ಗೌಡ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 19 ರಂದು ಶುರುವಾಗಿದ್ದ 2ನೇ ಹಂತದ ಶೂಟಿಂಗ್ ಸತತ 12 ದಿನಗಳ ಬಳಿಕ ಕಂಪ್ಲೀಟ್ ಆಗಿದೆ.
ಇನ್ನೂ ‘ಅಯೋಗ್ಯ’ ಚಿತ್ರದ ಯಶಸ್ಸಿನ ನಂತರ ಮಹೇಶ್ ಗೌಡ ಅವರು ಮದಗಜ ಪ್ರಾಜೆಕ್ಟ್ ಕೈಗೆತ್ತುಕೊಂಡಿದ್ದಾರೆ. ಅದ್ರಲ್ಲೂ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ಕುತೂಹಲ ಹೆಚ್ಚಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರೇ ಮದಗಜ (Madagaja) ಚಿತ್ರಕ್ಕೂ ಬಂಡವಾಳ ಹೂಡಿರೋದು ವಿಶೇಷ. ಸದ್ಯ ಈ ಚಿತ್ರದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.
ಇಲ್ಲಿದೆ ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಕುರಿತ ಕುತೂಹಲ ಮಾಹಿತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







