(Helmet awareness)
ಬಳ್ಳಾರಿ: ಕೊರೊನಾ ಬಂದಾಗಿನಿಂದಲೂ ಹೆಮ್ಮೆಟ್ ಬಗ್ಗೆ ಮೊದಲಿನಂತೆ ಹೆಚ್ಚು ತಲೆಕೆಡಿಸಿಕೊಳ್ತಿಲ್ಲ..
ಪೊಲೀಸರು ಮಾಸ್ಕ್ ಗಳ ಧರಿಸದವರಿಗೆ ಬುದ್ದಿ ಹೇಳ್ತಾಯಿದ್ದು, ಮಾಸ್ಕ್ ಧಾರಣೆ ಬಗ್ಗೆಯೇ ಜಾಗೃತಿ ಮೂಡಿಸುತ್ತಿರೋದು ಹೆಚ್ಚು..
ಆದರೆ ರಸ್ತೆ ಸುರಕ್ಷೆ ಮತ್ತು ಹೆಲ್ಮೆಟ್ ಜಾಗೃತಿ (Helmet awareness) ಸಂಬಂಧಿಸಿ ಬಳ್ಳಾರಿಯ ಕೂಡ್ಲಿಗಿಯಲ್ಲಿ ಪೊಲೀಸರು ಜಾಥಾ ನಡೆಸಿದ್ದಾರೆ.
ಕೂಡ್ಲಿಗಿ ಪಟ್ಟಣದ ವಿವಿಧ ಬೀದಿಗಳಲ್ಲಿ ಬೈಕ್ ರ್ಯಾಲಿ ಮೂಲಕ ಪೊಲೀಸರು ಜಾಥಾ ನಡೆಸಿ ಗಮನಸೆಳೆದ್ರು..

ಇಂದು ಕೂಡ್ಲಿಗಿಯಲ್ಲಿ ಸಿಪಿಐ ಪಂಪಮಗೌಡ ನೇತೃತ್ವದಲ್ಲಿ ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಲಾಗಿದೆ.
ಇನ್ನೂ ರಸ್ತೆ ನಿಯಮಗಳು ಮತ್ತು ಮಾಸ್ಕ್ ಧರಿಸುವ ಕಡ್ಡಾಯ ನಿಯಮಗಳ ಕುರಿತು ಜನರಲ್ಲಿ ಮೈಕ್ ಮುಖಾಂತರ ಜಾಗೃತಿ ಮೂಡಿಸಿದ್ರು..
ಕಳೆದ ಹತ್ತು ದಿನಗಳ ಅವಧಿಯಲ್ಲಿ 3700 ಪ್ರಕರಣಗಳ ಮಾಸ್ಕ್ ಮತ್ತು ಹೆಲ್ಮೆಟ್ ಇಲ್ಲದ ಸಂಬಂಧ ದಾಖಲಾಗಿವೆ.
ಹೀಗಾಗಿ ಮಾಸ್ಕ್ ಹಾಗೂ ಹೆಲ್ಮೆಟ್ ಧಾರಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








