(Kangana Ranouth)
ಬಹುನಿರೀಕ್ಷಿತ ತಲೈವಿ ಚಿತ್ರದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟಿ ಜೆ.ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿರುವ ಕಂಗನಾ ರಣೌತ್ (Kangana Ranouth) ಅವರ ಕೆಲ ಫೋಟೋಗಳು ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ.
ಎ.ಎಲ್ ವಿಜಯ್ ನಿರ್ದೇಶನದ ತಲೈವಿ ಚಿತ್ರದಲ್ಲಿ ಟೈಟಲರ್ ಪಾತ್ರದಲ್ಲಿ ಅಭಿನಯಿಸಲು ಕಂಗನಾ ಸಜ್ಜಾಗಿದ್ದಾರೆ.
ತಲೈವಿ ಚಿತ್ರದ ಇತ್ತೀಚಿನ ಶೂಟಿಂಗ್ ಶೆಡ್ಯೂಲ್ ಅನ್ನು ಮುಗಿಸಿಕೊಂಡಿರುವ ಕಂಗನಾ ಸೆಟ್ ನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
ಚಿತ್ರದಲ್ಲಿ ಕಂಗನಾ ಅವರು ಥೇಟ್ ಜಯಲಲಿತಾ ಅವರನ್ನೇ ಹೋಲುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇನ್ನೂ ತಮ್ಮ ಪೋಸ್ಟ್ ಗೆ ಅಡಿಬರಹ ಕೊಟ್ಟಿರುವ ಡೇರಿಂಗ್ ನಟಿ ಕಂಗನಾ ‘ಜಯ ಮಾ ಅವರ ಆಶೀರ್ವಾದದಿಂದ ನಾವು ಕ್ರಾಂತಿಕಾರಿ ನಾಯಕಿ ತಲೈವಿಯ ಇನ್ನೊಂದು ಶೆಡ್ಯೂಲ್ ಅನ್ನು ಮುಗಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








