KGF -2
ಇಡೀ ಭಾರತೀಯ ಸಿನಿಮಾರಂಗವೇ ಜಾತಕಪಕ್ಷಿಯಂತೆ ಕಾದು ಕುಳಿತಿರುವ ಕೆಜಿಎಫ್-2 (KGF -2) ಚಿತ್ರದ ಚಿತ್ರೀಕರಣ ಬಿರುಸಿನಿಮದ ನಡೆಯುತ್ತಿದೆ.
ಉಡುಪಿಯ ಕಡಲ ತೀರದಲ್ಲಿ ಚಿತ್ರೀಕರಣ ನಡೆಯುತ್ತಿರುವ ಕೆಲ ಫೊಟೋಗಳು ವಿಡೀಯೋಗಳು ಜಾಲತಾಣದಲ್ಲಿ ವೈರಲ್ ಆಗ್ತಿವೆ.
ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಸಂತಸ ನೀಡುವಂತಹ ಸುದ್ದಿಯೊಂದು ಕೆಲ ಮೂಲಗಳಿಂದ ಹೊರಬಿದ್ದಿದೆ.
ಅದೇನೆಂದ್ರೆ ಕೆಜಿಎಫ್-2 ಸಿನಿಮಾದ ರಿಲೀಸ್ ಡೇಟ್ ಫಿಕ್ಸ ಆಗಿದೆಯಂತೆ.

ಹೌದು, ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಬೆಳ್ಳಿತೆರೆಗಪ್ಪಳಿಸಲಿದೆಯಂತೆ ಕೆಜಿಎಫ್ 2…
ಜನವರಿ – 14 – 2021ಕ್ಕೆ ಕೆಜಿಎಫ್-2 ಸಿನಿಮಾದ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
ಇನ್ನೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈ ದಸರಾಗೆ ರಿಲೀಸ್ ಬಿಡುಗಡೆಯಾಗಬೇಕಿತ್ತು.

ಆದರೆ ಕೊರೊನಾ ಹಾವಳಿಯಿಂದಾಗಿ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿತ್ತು.
ಇದೀಗ ಮತ್ತೊಂದು ಡೇಟ್ ಫಿಕ್ಸ್ ಆಗಿದೆ ಎನ್ನಲಾಗಿರುವ ಸುದ್ದಿ ಅಭಿಮಾನಿಗಳಗೆ ಸಂತಸ ತಂದಿದೆ.
ಒಂದು ವೇಳೆ ಸಂಕ್ರಾತಿಗೆ ಕೆಜಿಎಫ್ -2 ರಿಲೀಸ್ ಆಗಿದ್ದೇ ಆದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬಕ್ಕೆ ಭರ್ಜರಿ ಗಿಫ್ಟ್ ಸಿಗೋದ್ರಲ್ಲಿ ಅನುಮಾನವೇ ಇಲ್ಲ.








