Seethavallabha
ಇತ್ತೀಚೆಗೆ ಕಿರುತೆರೆ ಲೋಕದಲ್ಲಿ ಸಕ್ಸಸ್ ಕಂಡು ಮನೆಮಾತಾಗಿರುವ ನಾಯಕಿಯರು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿದೆ.
ಕೆಲವೇ ದಿನಗಳ ಹಿಂದೆ ಜೊತೆಜೊತೆಯಲಿ ಅನು ಖ್ಯಾತಿಯ ಮೇಘಾ ಗಣೇಶ್ ಜೊತೆಗೆ ನಾಯಕಿಯಾಗಿ ಕಾಣಿಸಿಕೊಳ್ತಿರುವ ವಿಚಾರ ಬಹಿರಂಗವಾಗಿತ್ತು.
ತ್ರಿಬಲ್ ರೈಡ್ ಸಿನಿಮಾದಲ್ಲಿ ಗಣಿಗೆ ಮೇಘನಾ ನಾಯಕಿಯಾಗಿ ಮಿಂಚಲಿದ್ದಾರೆ.

ಇದೀಗ ಮತ್ತೋರ್ವ ಖ್ಯಾತ ಕಿರುತೆರೆ ನಟಿ ಬಿಗ್ ಸ್ಕ್ರೀನ್ ಮೇಲೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಸೀತಾವಲ್ಲಭ (Seethavallabha) ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಮೈತಿಲಿ ಖ್ಯಾತಿಯ ನಟಿ ಸುಪ್ರಿತಾ ಈಗ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಿರ್ದೇಶಕ ಶ್ರೀರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಲಾಂಗ್ ಡ್ರೈವ್ ಸಿನಿಮಾದಲ್ಲಿ ಸುಪ್ರಿತಾ ನಾಯಕಿಯಾಗಿ ಮಿಂಚುತ್ತಿದ್ದಾರೆ.
ಅಂದ್ಹಾಗೆ ಈ ಚಿತ್ರದಲ್ಲಿ ಅರ್ಜುನ್ ಯೋಗಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಸುಪ್ರಿತಾ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಳ್ತಾಯಿದ್ದಾರೆ.

ಇನ್ನೂ ನೈಜ ಘಟನೆಗಳ ಆಧಾರದ ಚಿತ್ರ ಈ ಲಾಂಗ್ ಡ್ರೈವ್ ಎಂದು ಹೇಳಲಾಗ್ತಿದೆ.
ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣವಷ್ಟೇ ಬಾಕಿಯಿದೆ..








