Parvathi
ಮಿಲನ ಖ್ಯಾತಿಯ ಮಲಯಾಳಂ ನಟಿ ಪಾರ್ವತಿ ತಿರುವೊತ್ತು (Parvathi) ಅವರು “AMMA” (ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್)ಗೆ ರಾಜಿನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಾರ್ವತಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ “AMMA” ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಡವೆಲಾ ಬಾಬು ಮಹಿಳಾ ಕಲಾವಿದೆಯ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ಧ ಆಕ್ರೋಶಗೊಂಡಿರುವ, ಪಾರ್ವತಿ ಈ ನಿರ್ಧಾರ ತೆಗೆದುಕೊಮಡಿದ್ದಾರೆ. ಸಂದರ್ಶನವೊಂದರಲ್ಲಿ AMMA ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಡವೆಲಾ ಬಾಬು ನಟಿ ಭಾವನಾ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಮಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.
ಸಂದರ್ಶನವೊಂದರಲ್ಲಿ “AMMA” ನಿರ್ಮಾಣ ಮಾಡುತ್ತಿರುವ ಟ್ವಂಟಿ:20 ಸಿನಿಮಾದ ಎರಡನೇ ಭಾಗದಲ್ಲಿ ಭಾವನಾ ಪಾತ್ರವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ್ದ ಬಾಬು ‘ಭಾವನಾ ಪ್ರಸ್ತುತ “AMMA” ದ ಭಾಗವಾಗಿಲ್ಲ ಎಂದು ನಾನು ಹೇಳಬಲ್ಲೆ. ಮೊದಲ ಭಾಗದಲ್ಲಿ ಉತ್ತಮ ಪಾತ್ರವನ್ನು ಮಾಡಿದ್ದಾರೆ. ಸತ್ತವರನ್ನು ಮರಳಿ ತರಲು ಸಾಧ್ಯವಿಲ್ಲ. “AMMA”ದ ಭಾಗವಾಗಿರುವ ಕಲಾವಿದರನ್ನು ಸೇರಿಸಿಕೊಳ್ಳಬಹುದು’ ಎಂದಿದ್ದರು. ಇದು ಬಾರೀ ವಿವಾದಕ್ಕೆ ಕಾರಣವಾಗಿತ್ತು.. ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಹೇಳಿಕೆ ಸಮರ್ಥಿಸಿಕೊಂಡಿದ್ದ ಬಾಬು ‘ಟ್ವೆಂಟಿ: 20 ಸಿನಿಮಾದ ಮೊದಲ ಭಾಗದಲ್ಲಿ ಭಾವನಾ ಪಾತ್ರ ಸತ್ತು ಹೋಗಿದೆ. ಮೊದಲ ಭಾಗದಲ್ಲಿ ಸತ್ತು ಹೋದ ಪಾತ್ರವನ್ನು ಎರಡನೇ ಭಾಗದಲ್ಲಿ ಕರೆತರಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಹೇಳಿರುವುದಾಗಿ ತಿಳಿಸಿದ್ದರು.
ಇದರ ಬೆನ್ನಲ್ಲೇ ನಟಿ ಪಾರ್ವತಿ AMMAಗೆ ರಾಜಿನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ‘2018ರಲ್ಲಿ ನನ್ನ ಸ್ನೇಹಿತರು ರಾಜಿನಾಮೆ ನೀಡಿದಾಗ, ಕನಿಷ್ಠ ಕೆಲವರಿಂದ ಆದರೂ ಈ ಹಾಳಾದ ವ್ಯವಸ್ಥೆಯನ್ನು ಸರಿ ಮಾಡಬಹುದು ಎಂದು ಯೋಚಿಸಿ ಮುಂದುವರೆದೆ. ಆದರೆ ಪ್ರಧಾನ ಕಾರ್ಯದರ್ಶಿ ಮಾತನಾಡಿರುವುದನ್ನು ನೋಡಿದ ಬಳಿಕ, ಇದ್ದ ಭರವಸೆ ಹೊರಟುಹೋಗಿದೆ. ಈ ಸಂಸ್ಥೆ ತೊರೆದ ಮಹಿಳಾ ಸದಸ್ಯರಿಗೆ ಸತ್ತೋಗಿದ್ದಾರೆ ಎಂದು ಹೇಳುವುದು ಮರಣದಂಡನೆ ಹೇಳಿಕೆಯ ತಿದ್ದುಪಡಿಗೂ ಮೀರಿದೆ’ ಎಂದು ಹೇಳಿದ್ದಾರೆ.
ಅಲ್ಲದೇ ನಟಿ ಪಾರ್ವತಿ ಎಡವೆಲಾ ಬಾಬು ರಾಜಿನಾಮೆಗೆ ಒತ್ತಾಯಿಸಿದ್ದಾರೆ.
ಸೌಂದರ್ಯ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








