ಮಾಜಿ ಮೇಯರ್ ಸಂಪತ್‍ರಾಜ್ ಗಲಭೆಯ ಮಾಸ್ಟರ್ ಮೈಂಡ್..!
ಸಿಸಿಬಿ ಪೊಲೀಸರು ಕೋರ್ಟ್‍ಗೆ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖ
ಬೆಂಗಳೂರು: ರಾಜಧಾನಿ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಆಗಸ್ಟ್11ರ ರಾತ್ರಿ ನಡೆದಿದ್ದ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸ್ಫೋಟಕ ತಿರುವು ಬಂದಿದೆ.

ಗಲಭೆಗೆ ಕಾಂಗ್ರೆಸ್ ಮುಖಂಡರ ನಡುವಿನ ಒಳಜಗಳವೇ ಕಾರಣ. ಪುಲಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಅಖಂಡ ಶ್ರೀನಿವಾಸ ಮೂರ್ತಿ ಏಳಿಗೆ ಸಹಿಸದೇ ಅವರನ್ನು ಮಟ್ಟಹಾಕಲು ಕಾಂಗ್ರೆಸ್‍ನವರೇ ಆದ ಮಾಜಿ ಮೇಯರ್ ಆರ್.ಸಂಪತ್ ರಾಜ್ ಸ್ಕೆಚ್ ರೂಪಿಸಿದ್ದರು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಸಜೀವವಾಗಿ ಹತ್ಯೆ(akhanda Murder plan) ಮಾಡಲು ಅವರ ಮನೆಗೆ ಬೆಂಕಿ ಹಚ್ಚಲಾಗಿತ್ತು ಎಂದು ಸಿಸಿಬಿ ಪೊಲೀಸರು ಕೋರ್ಟ್‍ಗೆ ಸಲ್ಲಿಸಿದ 852 ಪುಟಗಳ ಪ್ರಾಥಮಿಕ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆ ಪ್ರಕರಣದ ಮೊದಲ ಆರೋಪಿಯೇ ಮಾಜಿ ಮೇಯರ್ ಸಂಪತ್ ರಾಜ್. ಗಲಭೆ ಸಂಬಂಧ ಸಂಪತ್‍ರಾಜ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ವಾಪಸ್ ಕಳಿಸಿದ್ದರು. ಆದರೆ, ಮತ್ತೊಮ್ಮೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರೂ ಸಂಪತ್ ರಾಜ್ ಅನಾರೋಗ್ಯ ಕೊರೊನಾ ಕಾರಣ ನೀಡಿ ವಿಚಾರಣೆ ಹಾಜರಾಗಿಲ್ಲ. ಸಂಪತ್ ರಾಜ್ ಗುಣಮುಖರಾಗುತ್ತಿದ್ದಂತೆ ಅರೆಸ್ಟ್ ಮಾಡಿ ಮತ್ತೊಂದು ಚಾರ್ಜ್‍ಶೀಟ್ ಸಲ್ಲಿಸಲಾಗುವುದು ಎಂದು ಕೋರ್ಟ್‍ಗೆ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಅರುಣ್‍ರಾಜ್, ಎಸ್‍ಡಿಪಿಐನ ಮುಜಾಮಿಲ್ ಪಾಷಾ ಮೂಲಕ ಗಲಭೆ..!
ಆಗಸ್ಟ್ 11ರಂದು ನಡೆದ ಗಲಭೆಗೆ ವರ್ಷದ ಮೊದಲೇ ಸ್ಕೆಚ್ ಸಿದ್ದವಾಗಿತ್ತು. ಮುಸ್ಲಿಂ ಸಮುದಾಯದ ಮತದಾರರಿಗೆ ತೀರಾ ಆಪ್ತರಾಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ರಾಜಕೀಯವಾಗಿ ಮುಗಿಸಲು ಮಾಜಿ ಮೇಯರ್ ಸಂಪತ್ ಬಹಳ ದಿನಗಳಿಂದ ಸಂಚು ರೂಪಿಸಿದ್ದರು. ಆದರೆ, ಈ ಸಂಚು ಹಲವು ಬಾರಿ ವಿಫಲವಾಗಿತ್ತು. ಸಿಎಎ, ಎನ್‍ಆರ್‍ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆಯೂ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಟಾರ್ಗೆಟ್ ಮಾಡಲು ಪ್ಲ್ಯಾನ್ ಮಾಡಿದ್ದರು. ಆದರೆ, ಅಖಂಡ ಶ್ರೀನಿವಾಸ ಮೂರ್ತಿ ಅವರೇ ಮುಸ್ಲಿಮರ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಪ್ಲ್ಯಾನ್ ಠುಸ್ ಎಂದಿತ್ತು.
ಹೀಗಾಗಿ ಬಹಳ ದಿನಗಳಿಂದ ಕತ್ತಿ ಮಸೆಯುತ್ತಿದ್ದ ಸಂಪತ್‍ರಾಜ್, ತಮ್ಮ ಆಪ್ತ ಅರುಣ್‍ರಾಜ್, ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಷಾರನ್ನು ಗಲಭೆ ನಡೆಸಲು ಮುಂದೆ ಬಿಟ್ಟಿದ್ದರಂತೆ.
ಇವರ ಪ್ಲ್ಯಾನ್ ವರ್ಕ್ ಔಟ್ ಮಾಡಲು ಬಹಳ ದಿನದಿಂದ ಕಾಯುತ್ತಿದ್ದವರಿಗೆ ಅಖಂಡ ಶ್ರೀನಿವಾಸಮೂರ್ತಿ ಆಪ್ತ ನವೀನ್ ಹಾಕಿದ ಪೋಸ್ಟ್ ಅಸ್ತ್ರವಾಗಿ ಸಿಕ್ಕಿತ್ತು. ಇದೇ ಸಂದರ್ಭ ಎಂದು ಅರಿತು ಗಲಭೆ ನಡೆದ ಆಗಸ್ಟ್11ರ ಇಡೀ ದಿನ ಸ್ಕೆಚ್ ಹಾಕಿ ಮುಸ್ಲಿಂ ಸಮುದಾಯದವರನ್ನು ಎತ್ತಿಕಟ್ಟಿದ್ದಾರೆ.
ಒಂದು ಗುಂಪು ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲು ಪ್ಲಾನ್ ಮಾಡಿದ್ದರೆ, ಮತ್ತೆರಡು ತಂಡ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಪೊಲೀಸ್ ಠಾಣೆ ಬಳಿ ಗಲಭೆ ನಡೆಸಲು ಸೂಚಿಸಿಲಾಗಿತ್ತು. ಅಂದುಕೊಂಡಂತೆ ಮೊದಲು ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಅವರನ್ನು ಸಜೀವವಾಗಿ ದಹನ(akhanda Murder plan) ಮಾಡಲು ಪ್ಲ್ಯಾನ್ ಮಾಡಲಾಗಿತ್ತಂತೆ.
ಆದರೆ, ದೇವಸ್ಥಾನಕ್ಕೆ ಹೋಗಿ ಬಂದ ಅಖಂಡ ಶ್ರೀನಿವಾಸಮೂರ್ತಿ ಇನ್ನೊಂದು ಮನೆಯಲ್ಲಿದ್ದ ಕಾರಣ ಅವರು ಹತ್ಯೆ ಸಾಧ್ಯವಾಲಿಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಬೆಂಕಿ ಹಚ್ಚಿ ಭಸ್ಮ ಮಾಡಿದ್ದರು. ಹೀಗಾಗಿ ಅಖಂಡ ಶ್ರೀನಿವಾಸಮೂರ್ತಿ ಪ್ರಾಣಾಪಾಯದಿಂದ ಪಾರಾದರು.
90 ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್..!
ಖಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ, ಅಕ್ಕಪಕ್ಕದ ಮನೆಗಳ ಮೇಲೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಧಿಸಿದಂತೆ ಮಾತ್ರ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ಆದರೆ, ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಠಾಣೆಯಗಳ ಮೇಲೆ ನಡೆದ ದಾಳಿಯ ದೋಷಾರೋಪಪಟ್ಟಿ ಇನ್ನೂ ಸಲ್ಲಿಸಿಲ್ಲ. ತನಿಖೆ ಇನ್ನೂ ಮುಂದುವರೆದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮುಖಂಡರಾದ ಆರ್.ಸಂಪತ್ ರಾಜ್, ಅವರ ಆಪ್ತ ಅರುಣ್‍ರಾಜ್, ಕಾರು ಚಾಲಕ ಸಂತೊಷ್, ಅಬ್ದುಲ್ ಜಾಕೀರ್, ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಷಾ ಸೇರಿದಂತೆ 90 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








