manya
ಕನ್ನಡ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟರ ಜೊತೆ ಮಿಂಚಿ ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ಮಾಯಾವಗಿದ್ದ “ಶಾಸ್ತ್ರಿ” ಚೆಲುವೆ ಮಾನ್ಯ ಈಗ ಹೇಗಿದ್ದಾರೆ, ಇಷ್ಟು ದಿನ ಏನ್ ಮಾಡ್ತಾಯಿದ್ರು.
ಇದ್ದಕ್ಕಿದ್ದ ಹಾಗೆ ಇಂಡಸ್ಟ್ರಿಯಿಂದ ದೂರಾಗಿದ್ದೇಕೆ. ಇದಾದ ಬಳಿಕ ಇಷ್ಟು ವರ್ಷ್ ಏನ್ ಮಾಡ್ತಾಯಿದ್ರು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ಆದ್ರೆ ನಟಿ ಮಾನ್ಯ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರ್ತಾರೆ.

ಇದೀಗ ಈ ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಜೀವನದ ಅನುಭವಗಳು, ತಾವು ಎದುರಿಸಿದ ಕಷ್ಟ ಕಾರ್ಪಣ್ಯಗಳು, ಕಹಿ ಘಟನೆಗಳು, ಎದುರಿದ ಸವಾಲುಗಳನ್ನ ಹಂಚಿಕೊಂಡಿದ್ದಾರೆ.
ಇದು ಮತ್ತೊಬ್ಬರಿಗೆ ಸ್ಫೂರ್ತಿ ಆಗಲಿ ಎಂದೂ ಸಹ ಬರೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ ಕನ್ನಡದಲ್ಲಿ ಸಿನಿಮಾ ಮಾಡುವುದಕ್ಕೂ ಮುಂಚೆ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಆಕ್ಟೀವ್ ಆಗಿದ್ದ ವರ್ಷ ಇಂಡಸ್ಟ್ರಿಯಲ್ಲಿ ಹೆಸರು ಸಂಪಾದಿಸಿ ಸಾಕಷ್ಟು ಹಣ ಗಳಿಸಿ ಅದಾದ ಬಳಿಕ ಬಣ್ಣದ ಜಗತ್ತಿನಿಂದ ದೂರ ಉಳಿದಿದ್ದರು.

ಇದೀಗ ತಮ್ಮ ಜೀವನದ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿರುವ ಮಾನ್ಯ ”ನಾನು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡೆ.
ನನ್ನ ಕುಟುಂಬವನ್ನು ನೋಡಿಕೊಳ್ಳಲು ನಾನು ಶಾಲೆ ಬಿಟ್ಟು ಕೆಲಸ ಮಾಡಲು ಆರಂಭಿಸಿದೆ.
ನಾನು ಶಾಲೆಯನ್ನು ಪ್ರೀತಿಸುತ್ತಿದ್ದೆ, ಆದರೆ ನನಗೆ ಹಸಿವು ಏನು ಎಂದು ತಿಳಿದಿತ್ತು. ಹಾಗಾಗಿ, ಓದುವುದನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಬಂತು.
ನಾನು ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಸುಮಾರು 41 ಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ನಟಿಸಿದ್ದೆ.
ಇದರಿಂದ ನಾನು ಗಳಿಸಿದ ಎಲ್ಲ ಹಣವನ್ನು ನನ್ನ ತಾಯಿಗೆ ನೀಡಿದೆ. ಆಮೇಲೆ ನಾನು ಓದಲು ಪ್ರಾರಂಭಿಸಿದೆ.

ಬಹಳ ಕಷ್ಟಪಟ್ಟು ಓದಿ ಸ್ಯಾಟ್ ಪರೀಕ್ಷೆ ಬರೆದೆ. ಅಲ್ಲದೇ ಐವಿ ಲೀಗ್ನಲ್ಲಿ ಓದುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ.
ಆ ಬಳಿಕ ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದುಕೊಂಡೆ” ಎಂದು ತಮ್ಮ ಹೇಳಿಕೊಂಡಿದ್ದಾರೆ.
ಇನ್ನೂ ”ಮೊದಲ ಬಾರಿಗೆ ಕ್ಯಾಂಪಸ್ ಪ್ರವೇಶಿಸಿದಾಗ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ.
ಬಾಲ್ಯದಲ್ಲಿ ನಾನು ಇಷ್ಟಪಟ್ಟಿದ ಶಿಕ್ಷಣವನ್ನು ಮತ್ತೆ ಮುಂದುವರಿಸಲು ಮತ್ತೆ ಸಾಧ್ಯವಾಗುತ್ತಿರುವ ಸಂತೋಷಕ್ಕೆ ಕಣ್ಣೀರು ಹಾಕಿದ್ದೆ.
ಪ್ರವೇಶ ಪಡೆಯುವುದು ಸುಲಭವಾಗಿತ್ತು, ಆದರೆ ಗಣಿತ-ಸಂಖ್ಯಾಶಾಸ್ತ್ರದಲ್ಲಿ 4 ವರ್ಷ ಪೂರೈಸಿ ಪದವಿ ಪಡೆದಿದ್ದು ಮತ್ತು ಪೂರ್ಣ ವಿದ್ಯಾರ್ಥಿವೇತನ ಗಳಿಸಿದ್ದು ನನ್ನ ಜೀವನದ ಅತ್ಯಂತ ಕಠಿಣ ಭಾಗವಾಗಿತ್ತು.”
ಎಂದು ಮಾನ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇನ್ನೂ ” ಕಷ್ಟಪಟ್ಟು , ಸಾವಾಲಿನ ಬದುಕಲ್ಲಿ ಪ್ರಯತ್ನಿಸಿ ಪ್ರಯತ್ನಿಸಿ ನಾನು ಆಯಾಸಗೊಂಡಿದ್ದೆ.

ಅನೇಕ ಬಾರಿ ನನ್ನ ಗುರಿ ಬಿಟ್ಟುಕೊಡಲು ಬಯಸಿದ್ದೆ. ಇದರ ನಡುವೆ ವೈಯಕ್ತಿಕ ಮತ್ತು ಆರೋಗ್ಯ ಸಮಸ್ಯೆಗಳೂ ನನ್ನಗುರಿ ತಲುಪುವ ಹಾದಿ ಮಧ್ಯ ಸವಾಲಾಗಿ ಪರಿಣಮಿಸಿದ್ದವು. ಆದರೆ ನಾನು ಧೃಢ ನಿರ್ಧಾರ ಮಾಡಿ ನನ್ನನ್ನ ನಾನು ಸಮಾಧಾನ ಪಡಿಸಿಕೊಂಡು ಮುಂದೆ ಸಾಗಿದೆ.
ನನಗೆ ದೇವರ ಮೇಲೆ ನಂಬಿಕೆ ಇತ್ತು. ಹಾಗಾಗಿ, ಅದನ್ನೆಲ್ಲ ಅವನಿಗೆ ಬಿಟ್ಟಿದ್ದೆ. ಶಿಕ್ಷಣವು ನಿಮಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ.
ನನ್ನ ಜ್ಞಾನವನ್ನು ಯಾರೂ ನನ್ನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಭಾವುಕ ಕ್ಷಣಗಳನ್ನ ಸ್ಮರಿಸಿಕೊಂಡಿದ್ದಾರೆ”.
ಇನ್ನೂ “ವಿಶ್ವದಲ್ಲಿ ನೀವು ಎಷ್ಟು ಚಿಕ್ಕವರಾಗಿದ್ದೀರಿ ಎಂದು ನೀವು ತಿಳಿದುಕೊಳ್ಳುವಾಗ ನೀವು ಹೆಚ್ಚು ಜ್ಞಾನವನ್ನು ಪಡೆಯುತ್ತೀರಿ, ಹೆಚ್ಚು ವಿನಮ್ರರಾಗುತ್ತೀರಿ.
ಅದನ್ನು ಯಾವಾಗಲೂ ನೆನಪಿಡಿ. ನನ್ನ ಈ ಪೋಸ್ಟ್ ಒಬ್ಬ ವ್ಯಕ್ತಿಯನ್ನಾದರೂ ಪ್ರೋತ್ಸಾಹಿಸುತ್ತದೆ ಎಂದು ಭಾವಿಸಿದ್ದೇನೆ.
ಲವ್ ಯೂ ಆಲ್” ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆ ಸಿನಿಮಾರಂಗದಲ್ಲಿ ಮಿಂಚಿ ಅಪಾರ ಅಭಿಮಾನಿಗಳನ್ನ ಗಳಿಸಿ ಸಿನಿಜಗತ್ತನಿಂದ ದೂರಾಗಿದ್ದ ಶಾಸ್ತ್ರಿ ಚೆಲುವೆ ತಮ್ಮ ಜೀವನದ ಮತ್ತೊಂದು ಕನಸನ್ನ ನನಸು ಮಾಡಿಕೊಂಡಿದ್ದಾರೆ.
ಛಲ , ದೃಢ ನಿರ್ದಾರವಿದ್ದರೆ ಏನಾನ್ನೂ ಬೇಕಾದರೂ ಸಾಧಿಸಬುದುದೆಂಬುದನ್ನ ತೋರಿಸಿಕೊಟ್ಟಿದ್ದಾರೆ.
manya







