vishanth vora
ವೊಡಾಫೋನ್ ಐಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ ವಿಶಾಂತ್ ವೋರಾ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಟೆಲಿಕಾಂ ಕಂಪನಿ ಖಚಿತಪಡಿಸಿದೆ.. ಮೂಲಗಳ ಪ್ರಕಾರ ವಿಶಾಂತ್ ವೋರಾ ಅವರು ಯುಎಸ್ ಗೆ ಹಿಂತಿರುಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
“ವಿಐಎಲ್ ಈಚೆಗೆ ವಿಶ್ವದ ಅತಿ ದೊಡ್ಡ ನೆಟ್ ವರ್ಕ್ ಒಗ್ಗೂಡಿಸುವ ಕಾರ್ಯ ಪೂರ್ಣವಾಗಿದೆ.

ಭವಿಷ್ಯದ 5ಉ ನೆಟ್ ವರ್ಕ್ ಗೆ ಸಿದ್ಧವಾಗಿದೆ. ಎರಡೂ ಒಗ್ಗೂಡಿದ ನಂತರ, ವಿವಿಧ ಥರ್ಡ್ ಪಾರ್ಟಿ ಸಂಸ್ಥೆಗಳ ಪ್ರಕಾರ,
ಈಗ ಅತ್ಯಂತ ವೇಗವಾದ 4ಉ ನೆಟ್ ವರ್ಕ್ ಎನಿಸಿಕೊಂಡಿದೆ,” ಎಂದು ಕಂಪೆನಿ ಹೇಳಿದೆ.
ಅಲ್ಲದೇ ” ವೊರಾ ಅವರು ಈಗ ಯುಎಸ್ ನಲ್ಲಿನ ಮನೆಗೆ ಹಿಂತಿರುಗಲು ನಿರ್ಧರಿಸಿದ್ದಾರೆ. ಅವರ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸುತ್ತೇವೆ,” ಎಂದು ಕಂಪನಿ ತಿಳಿಸಿದೆ.
vishanth vora








