sanjay dutt
ಇಡೀ ಭಾರತೀಯ ಸಿನಿಮಾರಂಗವೇ ಜಾತಕಪಕ್ಷಿಯಂತೆ ಕಾದುಕುಳಿತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಕಳೆದ ತಿಂಗಳಿನಿಂದ ಮತ್ತೆ ಆರಂಭವಾಗಿದೆ.
ಆದ್ರೆ ಚಿತ್ರದಲ್ಲಿ ಕುತೂಹಲಕರಿ ಪಾತ್ರದಲ್ಲಿ ಅಧೀರನಾಗಿ ಮಿಂಚುತ್ತಿದ್ದ ಸಂಜು ಬಾಬ ಸದ್ಯ ಅನಾರೋಗ್ಯದಿಂದಾಗಿ ಬ್ರೇಕ್ ತೆಗೆದುಕೊಂಡಿದ್ರು.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸಂಜಯ್ ದತ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. 
ವಿದೇಶಕ್ಕೆ ಸಹ ಹೋಗಿ ಬಂದಿದ್ದಾರೆ. ಇತ್ತೀಚಿಗೆ ಅವರ ಫೋಟೋಗಳನ್ನು ನೋಡಿದ್ರೆ ದೈಹಿಕವಾಗಿ ದತ್ ಬಳಲಿದ್ದಾರೆ ಎನ್ನುವುದು ಗೊತ್ತಾಗುತ್ತೆ.
ಗಣಿನಾಡಲ್ಲಿ ಪವರ್ ಸ್ಟಾರ್ : ಮುಗಿಬಿದ್ದ ಅಭಿಮಾನಿಗಳು
ಹೀಗಿರೋವಾಗ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕಥೆ ಈನಾಗಲಿದೆ. ದತ್ ಬರೋವರೆಗೂ ಶೂಟಿಂಗ್ ಮಾಡ್ತಾರಾ ಇಲ್ವಾ ಪ್ರಶ್ನೆ ಸಿನಿಪ್ರಿಯರದ್ದು.

ಇದೀಗ ಈ ಎಲ್ಲ ಅನುಮಾನಗಳು ಪ್ರಶ್ನಮೆಗಳಿಗೆ ಖುದ್ದು, ಸಂಜುಬಾಬಾ ತೆರೆಎಳೆದಿದ್ದಾರೆ.
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡಿರುವ ಸಂಜಯ್ ದತ್ ಚಿತ್ರೀಕರಣಕ್ಕೆ ಮರಳಲು ಸಜ್ಜಾಗಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಖುದ್ದು ಸಂಜಯ್ ದತ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಅಷ್ಟೇ ಅಲ್ಲ ಅಧೀರನ ಪಾತ್ರಕ್ಕಾಗಿ ದತ್ ಪೂರ್ವ ತಯಾರಿ ಸಹ ನಡೆಸಿದ್ದಾರೆ.
ದೈಹಿಕವಾಗಿ ಫಿಟ್ ಆಗುವುದರ ಜೊತೆಗೆ ಹೇರ್ ಸ್ಟೈಲ್ ಹಾಗೂ ಗಡ್ಡವನ್ನು ಸಹ ಚಿತ್ರಕ್ಕಾಗಿ ಬಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಅವರೇ ವಿಡಿಯೋದಲ್ಲಿ ಹೇಳಿದ್ದಾರೆ.
ಒಟ್ಟಾರೆ ಸಂಜಯ್ ದತ್ ಅವರು ಇದೀಗ ಆರೋಗ್ಯವಾಗಿದ್ದು, ಮತ್ತೆ ಮುಂದಿನ ತಿಂಗಳಿನಿಂದ ಕೆಜಿಎಫ್ ಚಾಪ್ಟರ್ -2 ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ.
sanjay dutt
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








