Jaggesh
ಬೆಂಗಳೂರು: ಸಿನಿಮಾ ನಂಬಿ ತಂದೆ-ತಾಯಿ ಕನಸು ಮತ್ತು ನಿಮ್ಮ ಸುಂದರ ಜೀವನವನ್ನ ಹಾಳು ಮಾಡಿಕೊಳ್ಳಬೇಡಿ ಎಂದು ನವರಸ ನಾಯಕ, ಜಗ್ಗೇಶ್ ಅಭಿಮಾನಿಯೊಬ್ಬರಿಗೆ ಸಲಹೆ ನೀಡಿದ್ದಾರೆ.
ಈ ಮೂಲಕ ಇಂದಿನ ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಳ್ಳುವುದು ಬಹಳ ಕಷ್ಟ ಎಂಬುದನ್ನ ಅಭಿಮಾನಿಗೆ ತಿಳಿಸಿದ್ದಾರೆ.
‘ಪೆಟ್ರೋಮ್ಯಾಕ್ಸ್’ ಚಿತ್ರೀಕರಣಕ್ಕೆ ದಿನಾಂಕ ಫಿಕ್ಸ್ ..!
ಅಭಿಮಾನಿಯೋರ್ವ ಜಗ್ಗೇಶ್ ಅವರಿಗೆ ಟ್ವೀಟ್ ಮೂಲಕ ಸಲಹೆ ಕೇಳಿದ್ದರು.
‘ನಿರ್ದೇಶಕ ಆಗಬೇಕು ಎನ್ನುವುದು ನನ್ನ ಕನಸು. ಎರಡನೇ ವರ್ಷದ ಡಿಪ್ಲೋಮಾ ಮಾಡುತ್ತಿದ್ದೇನೆ.
ಮುಂದೆ ಇಂಜಿನೀಯರಿಂಗ್ ಮಾಡೋದಾ ಅಥವಾ ಸಿನಿಮಾ ಉದ್ಯಮಕ್ಕೆ ಬರೋದಾ’ ಎಂದು ಅಭಿಮಾನಿಯೊಬ್ಬರು ಜಗ್ಗೇಶ್ ಅವರಿಗೆ ಟ್ವೀಟ್ ಮೂಲಕ ಸಲಹೆ ಕೇಳಿದ್ದರು.
“ಕೆಜಿಎಫ್” ಶೂಟಿಂಗ್ ಅಖಾಡಕ್ಕೆ ಎಂಟ್ರಿ ಆಗ್ತಿದ್ದಾರೆ ‘ಅಧೀರ’ : ಸಂಜು ಬಾಬ ಹೇಳಿದ್ದೇನು..?
ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಜಗ್ಗೇಶ್ ಇಂದಿನ ಸಿನಿ ಅಂಗಳದ ಕಷ್ಟಕರ ಜೀವನವನ್ನ ತಿಳಿಸಿದ್ದಾರೆ.
ಅಲ್ಲದೇ “ಇಂದಿನ ಸಿನಿಮಾ ನಂಬಿ ತಂದೆ-ತಾಯಿ ಕನಸು ಮತ್ತು ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ.
ನೀವೆಲ್ಲಾ ಅಂದುಕೊಂಡಷ್ಟು ಸುಲಭವಿಲ್ಲಾ ಇಂದಿನ ಸಿನಿಮಾ. ಬೇಕಾದರೆ ಸಂತೋಷಕ್ಕೆ ಹವ್ಯಾಸವಾಗಿ ಬಳಸಿ ವೃತ್ತಿಯಾಗಿ ಅಲ್ಲ.
ಬೆರಳೆಣಿಸುವ ಕೆಲವರ ಬಿಟ್ಟು ಶೇ.98ರಷ್ಟು ಸಿನಿಮಾ ಜನ ಸಂಕಷ್ಟದಲ್ಲಿದ್ದಾರೆ” ಎಂದು ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
Jaggesh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








