Adha sharma
ಉತ್ತರ ಭಾರತದವರಾದರೂ ದಕ್ಷಿಣ ಭಾರತದ ಸಿನಿಮಾರಂಗದಲ್ಲೇ ಹೆಚ್ಚಾಗಿ ಮಿಂಚಿರುವ ಚೆಲುವೆ ಅದಾ ಶರ್ಮಾ ಅವರು ಹೊಸ ಫೋಟೋ ಶೂಟ್ ಮಾಡಿಸಿದ್ದು, ಈ ಫೋಟೋಗಳು ಸದ್ಯ ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಕನ್ನಡದ “ರಣವಿಕ್ರಮ”ದ ಬೆಡಗಿ ಅದಾ ಹೂ ಗಿಡವನ್ನೇ ಉಡುಗೆಯಾಗಿ ಮಾಡಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದು, ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ಇನ್ನೂ ಅದಾಳ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇತ್ತೀಚಿಗೆ ನಟಿಮಣಿಯರ ಫೋಟೋಶೂಟ್ ಅಚ್ಚರಿ ಮೂಡಿಸುತ್ತಿವೆ.
ತರಹೇವಾರಿ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.
ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ನೆಟ್ಟಿಗರಿಂದ ಹಿಗ್ಗಾಮುಗ್ಗ ಟ್ರೋಲ್ ಆದ ಉದಾಹರಣೆಗಳು ಇದೆ.
‘ಜೇಮ್ಸ್’ ಗೆ ನಾಯಕಿ ಫಿಕ್ಸ್: ಮತ್ತೆ ಒಂದಾದ ‘ರಾಜಕುಮಾರ’ ಜೋಡಿ
ಇದೀಗ ಅದಾ ಶರ್ಮಾ ವಿಭಿನ್ನ, ವಿಚಿತ್ರ ರೀತಿಯ ಫೋಟೋಶೂಟ್ ಮಾಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ತಮ್ಮ ಫೋಟೋಶೂಟ್ ವಿಡಿಯೋವನ್ನು ಅದಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಅದಾ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಕಮೆಂಟ್ ಗಳ ಸುರಿಮಳೆ ಸುರಿಸುತ್ತಿದ್ದಾರೆ.
ಇನ್ನೂ ಬಟ್ಟೆಯ ವಿಶೇಷತೆ ಒಂದೆಡೆಯಾದ್ರೆ ತಮ್ಮ ಉದ್ದನೆಯ ನೀಳವಾದ ಕೂದಲಿನಿಂದ ನೆಟ್ಟಗರ ದಿಲ್ ಗೆದ್ದಿದ್ದಾರೆ ಅದಾ.
ಅದು ಬಿಡಿ ಅದಾ ಕೊಟ್ಟ ಕ್ಯಾಪ್ಷನ್ ಅಭಿಮಾನಿಗಳ ತಲೆಗೆ ಉಳಬಿಟ್ಟಿದೆ.
ಸಿನಿಮಾ ನಂಬಿ ತಂದೆ-ತಾಯಿ ಕನಸು, ಜೀವನ ಹಾಳು ಮಾಡಿಕೊಳ್ಳದಿರಿ: ಜಗ್ಗೇಶ್ ಕಿವಿಮಾತು
ಯಾಕಂದ್ರೆ ಅದಾ “ ಫೋಟೋ ಜೊತೆಗೆ ‘ಅದಾ ಶರ್ಮಾಗೆ 100 ವರ್ಷ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ ತಮಿಳು , ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡದಲ್ಲೂ ಮಿಂಚಿರುವ ಅದಾ ಸದ್ಯ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Adha sharma
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








