ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar ) ಅವರು ಆರ್ ಆರ್ ನಗರ ಚುನಾವಣೆಯಲ್ಲಿ ಗೆಲ್ಲಲು ಜಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಬಿಜೆಪಿ-ಜೆಡಿಎಸ್ ಆರೋಪಕ್ಕೆ ಟ್ರಬಲ್ ಶೂಟರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಒಕ್ಕಲಿಗರು, ಬೇರೆ ಜಾತಿ, ಇನ್ನೊಂದು ಜಾತಿ ಅಂತ ಹೋಗುವುದಿಲ್ಲ.
ಆದರೆ ನಾನು ಹುಟ್ಟಿನಿಂದ ಒಕ್ಕಲಿಗ, ನನ್ನ ತಂದೆ ತಾಯಿ ಒಕ್ಕಲಿಗರು. ಶಾಲೆಗೆ ಸೇರುವಾಗ ಒಕ್ಕಲಿಗ ಅಂತ ಕೊಟ್ಟಿದ್ದೇನೆ.
ಇದನ್ನೂ ಓದಿ : ‘ಸಂಪತ್ ರಾಜ್ ರನ್ನು ಉಚ್ಚಾಟಿಸಬೇಕು’ ಅಖಂಡ ಹೇಳಿಕೆಗೆ ಡಿಕೆಶಿ ಹೇಳಿದ್ದೇನು?
ನಾನು ಹುಟ್ಟಿನಿಂದ ಒಕ್ಕಲುತನ ಮಾಡುವವನು. ನಾನೊಬ್ಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ನನಗೊಂದು ಜಾತಿ ಇದೆ, ಅದು ಕಾಂಗ್ರೆಸ್ ಜಾತಿ.
ಜಾತಿ ವಿಚಾರದಲ್ಲಿ ಮಾತನಾಡಲು ನಾನು ಹಿಂದೆಯೂ ಹೋಗಿಲ್ಲ ಮುಂದೆಯೂ ಇಷ್ಟವಿಲ್ಲ.
ನಮಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಮುಖ್ಯ, ಅದಕ್ಕಾಗಿ ನಾವು ಬಿಜೆಪಿಯವರ ಮತವನ್ನೂ ಸೆಳೆಯುತ್ತೇವೆ.
ಜೆಡಿಎಸ್ ನ ಮತವನ್ನೂ ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ ಎಂದು ಎದುರಾಳಿಗಳಿಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ : ಗೆಲ್ಲೋಕಾಗೋಲ್ಲ ಅಂತ ಡಿಕೆಶಿ ಪಿಳ್ಳೆನೆಪ ಹುಡುಕಿ ಮಾತಾಡ್ತಿದ್ದಾರೆ : ಸೋಮಶೇಖರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










