ಬೆಂಗಳೂರು: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, 51.28% ಫಲಿತಾಂಶ ಬಂದಿದೆ. SSLC Supplementary Examination
ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು SSLC Supplementary Examination ಸೆಪ್ಟೆಂಬರ್ 21ರಿಂದ 29 ರವರೆಗೆ 772 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.
ಪರೀಕ್ಷೆಗೆ 2,13,955 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 1,09,719 ಪಾಸ್ ಆಗಿದ್ದು, 51.28% ಫಲಿತಾಂಶ ಬಂದಿದೆ.
ಇದರಲ್ಲಿ ಬಾಲಕರ ಫಲಿತಾಂಶ-ಶೇ.48.56 ರಷ್ಟು ಹಾಗೂ ಬಾಲಕಿಯರ ಫಲಿತಾಂಶ-ಶೇ.55.96 ರಷ್ಟು ಇದೆ.
ಇದನ್ನೂ ಓದಿ : ಕೇವಲ 10 ನಿಮಿಷದಲ್ಲಿ ಪ್ರವಾಹ ವೀಕ್ಷಣೆ ಮಾಡಿದ ಅಶೋಕ್
ನಗರ ಪ್ರದೇಶ- ಶೇ. 48.25%, ಗ್ರಾಮೀಣ ಪ್ರದೇಶ- ಶೇ.54.21% ಫಲಿತಾಂಶ ಬಂದಿದೆ.
ವಿದ್ಯಾರ್ಥಿಗಳು kseeb.kar.nic.in ಅಥವಾ karresults.nic.in ನಲ್ಲಿ ಪರೀಕ್ಷಾ ಫಲಿತಾಂಶ ನೋಡಬಹುದು.
ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿಗಾಗಿ ಅಕ್ಟೋಬರ್ 17 ರಿಂದ 21 ರ ವರೆಗೆ ಅರ್ಜಿ ಸಲ್ಲಿಸಬಹುದು.
ಮರುಎಣಿಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ರಿಂದ 28 ರವರೆಗೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 20-29ರವರೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ : ಶಾಪವಾಯ್ತು ಮುಂಗಾರು.. ಮಳೆ ಹಾನಿ 15 ಸಾವಿರ ಕೋಟಿ ರೂ. : ಮುಂದಿನ ವಾರ ಮತ್ತೊಂದು ರೌದ್ರ ಮಳೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










