ಬೆಂಗಳೂರು : ಕೊರೊನಾ ಕಾಟದ ಮಧ್ಯೆ ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಹೆಮ್ಮಾರಿ ಕೊರೊನಾಗೆ ತತ್ತರಿಸಿದ್ದ ರಾಜ್ಯಕ್ಕೆ ವರದಾನ ಆಗಬೇಕಿದ್ದ ಮುಂಗಾರು ಶಾಪವಾಗಿದೆ . (rain damage) ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಗೆ ರಾಜ್ಯದಲ್ಲಿ ಸುಮಾರು 15 ಸಾವಿರ ಕೋಟಿ ರು, ಮೌಲ್ಯದ ಬೆಳೆ, ಜಾನುವಾರ,ಕಟ್ಟಡಗಳು, ರಸ್ತೆ, ಆಸ್ತಿಪಾಸ್ತಿ ನಷ್ಟವಾಗಿದೆ.
ಅದರಲ್ಲೂ ರಣರೌದ್ರ ಮಳೆಗೆ ಸುಮಾರು 11 ಲಕ್ಷ ಕೋಟಿ ಹೆಕ್ಟೇರ್ ಪ್ರದೇಶದ ಬೆಳೆ ಸರ್ವ ನಾಶವಾಗಿದೆ ( rain damage).
ಮತ್ತಷ್ಟು ಹದಗೆಟ್ಟ ಕರ್ನಾಟಕದ ಪ್ರವಾಹ ಪರಿಸ್ಥಿತಿ
ಮುಂದಿನ ವಾರ ರೌದ್ರ ಮಳೆ
ರಣ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಈ ಮಧ್ಯೆ ಮುಂದಿನ ವಾರ ಮತ್ತೊಂದು ರೌದ್ರ ಮಳೆ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್ 21 ರಿಂದ ರಾಜ್ಯದಲ್ಲಿ ಮತ್ತೆ ವರುಣ ಆರ್ಭಟಿಸಲಿದ್ದಾನೆ.
ಪರಿಹಾರ ಸಿಗುತ್ತಿಲ್ಲ… ನಷ್ಟ ನಿಲ್ಲುತ್ತಿಲ್ಲ
ಕರ್ನಾಟಕ – ಆರ್ ಟಿ-ಪಿಸಿಆರ್ ನಲ್ಲಿ ನೆಗೆಟಿವ್ ವರದಿ ಬಂದವರಿಗೆ ಹೊಸ ಪ್ರೋಟೋಕಾಲ್
ಕಳೆದ ವರ್ಷ ಕೂಡ ರಾಜ್ಯದಲ್ಲಿ ಹಿಂಗಾರು ಅಬ್ಬರಕ್ಕೆ ಉತ್ತರ ಕರ್ನಾಟಕ ಸಂಪೂರ್ಣ ಮುಳುಗಿ ಹೋಗಿತ್ತು. ಅದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಇದೀಗ ಮತ್ತೆ ವರಣ ಆರ್ಭಟಿಸಿದ್ದಾನೆ. ಇದರಿಂದ ನಷ್ಟ ಹೆಚ್ಚಾಗುತ್ತಲೇ ಇದೆ. ಇನ್ನು ಕಳೆದ ವರ್ಷ ಬಿಡುಗಡೆಯಾಗಿದ್ದ ಪರಿಹಾರ ಕೂಡ ಇನ್ನೂ ಪಲಾನುಭವಿಗಳ ಕೈ ಸೇರಿಲ್ಲ.
ಮತ್ತೆ ಮಳೆ ಯಾಕೆ..?
ಈಗಾಗಲೇ ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮಳೆ ಇಂದಿಗೆ ದುರ್ಬಲವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯು ಭಾರ ಕುಸಿತ ಉಂಟಾಗಿದ್ದು, ಸದ್ಯ ಅದಿನ್ನೂ ಕೇಂದ್ರ ಭಾಗದಲ್ಲೇ ಇದೆ.
ಇನ್ನೆರಡೆಉ ದಿನಗಳಲ್ಲಿ ಅದು ಮಹಾರಾಷ್ಟ್ರ ಮತ್ತು ತೆಲಂಗಾಣ ಹಾಗೂ ಆಂಧ್ರಪ್ರದೇಶ ಭಾಗಕ್ಕೆ ಚಲಿಸಲಿದ್ದು, ಆನಂತರದಲ್ಲಿ ಅದರ ಪ್ರಬಲತೆ ತಿಳಿಯುತ್ತದೆ.
ಈ ಮಾರುತಗಳು ಪ್ರಬಲವಾಗಿದ್ರೇ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಭಾಗದಲ್ಲಿ ಮತ್ತೆ ಅಬ್ಬರದ ಮಳೆಯಾಗಲಿದೆ. ಅಕ್ಟೋಬರ್ 21 ಹಾಗೂ 22 ಮತ್ತು 23 ರಂದು ರಾಜ್ಯದ ಉತ್ತರದಲ್ಲೂ ವರಣನ ಅಪಾಯ ಎದುರಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










