ಬೆಂಗಳೂರು : ತಮಿಳು ನಾಡನ್ನು ಹೊಗಳಿ ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T. Ravi), ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ : ಮತ್ತೆ ಡಿಸಿಎಂ ಆಗೋ ಆಸೆ ಹೊರಹಾಕಿದ ಶ್ರೀ ರಾಮುಲು
ಸಿ.ಟಿ ರವಿ (C.T. Ravi), ಸದ್ಗುಣ ಹಾದಿಯಲ್ಲಿ ನಿಂತ ರಾಜರು, ಸತ್ಯ ಹುಡುಕಿದ ಋಷಿಮುನಿಗಳು, ತಮಿಳು ಸಂಗಮದ ಸಾಕ್ಷಿಗಳು ಮತ್ತು ಸದಾ ಒಳ್ಳೆಯದಕ್ಕೆ ನಿಲ್ಲುವ ಜನರು ಸಂಗಮಕ್ಕೆ ಸಾಕ್ಷಿಯಾಗಿದೆ ತಮಿಳುನಾಡಿನ ನೆಲ. ಇಂತಹ ಉತ್ತಮ ಮತ್ತು ಪ್ರಸಿದ್ಧ ಭೂಮಿ ಒಳ್ಳೆಯದನ್ನು ಬೆಂಬಲಿಸುವ ಜನರೊಂದಿಗೆ ದೀಘಕಾಲ ಬದುಕಬೇಕು. ನಿಮ್ಮೆರೆಲ್ಲರಿಗೂ ಅಭಿನಂದನೆಗಳು ಎಂದು ತಮಿಳುಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಗೆ ಕನ್ನಡಿಗರು ಗರಂ ಆಗಿದ್ದು, ಕಮೆಂಟ್ ಗಳ ಮೂಲಕ ಸಿ.ಟಿ.ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಇದು ಏನು ಸ್ವಾಮಿ ಯಾವ ಭಾಷೆ ಇದು. ನೀವೆಲ್ಲ ಕನ್ನಡದರ..?
ಕೆಳಗೆ ನೋಡಿ ಒಂದು ಅಕ್ಷರಣದರು ಬೇರೆ ಭಾಷೆ ಇದೆಯಾ..?
ಅವರಿಗೆ ಅಷ್ಟು ಅಭಿಮಾನ ಇದಬೇಕಾದರೆ ನಿಮಗೆ ಯಾಕೆ ಇಲ್ಲ.
ನೀವೆಲ್ಲ ನಿಜವಾಗಲೂ ಕನ್ನಡದವರೇನಾ..?
ಉದ್ಧಾರ ಆಯಿತು ನಮ್ಮ ಕನ್ನಡ, ನಿಜವಾಗಲೂ ಬಿಜೆಪಿ ವೋಟ್ ಹಾಕಬೇಕು..? ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ : ನಾನು ಹುಟ್ಟಿನಿಂದ ಒಕ್ಕಲಿಗ : ಡಿ.ಕೆ.ಶಿವಕುಮಾರ್ ಖಡಕ್ ಉತ್ತರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








