ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ; ನೇವಡಾ ರಾಜ್ಯದ ಖಜಾನೆ ಲಾಸ್ ವೇಗಸ್ ಎಂಭ ಭೂಲೋಕದ ಇಂದ್ರನ ಅಮರಾವತಿ:-

Namratha Rao by Namratha Rao
October 16, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

las vegas

ಯಾತ್ರಿಕ -4

Related posts

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ  ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

August 13, 2026
ನೂತನ ಸಚಿವರಿಗೆ ಖಾತೆ ಹಂಚಿಕೆ;  ಯಾವ ಖಾತೆ?

ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾವ ಖಾತೆ?

August 13, 2026

ಥಟ್ಟನೆ ನೆವಾಡಾ ಅಂತ ಕೇಳಿದರೆ ಕೂಡಲೇ ಮನಸ್ಸಿಗೆ ಏನಾದರೂ ಹೊಳೆಯುವ ಸಂಭವ ಕಮ್ಮಿ. ಅದೇ ಲಾಸ್ ವೇಗಸ್ ಅಥವಾ ಬರೀ ವೇಗಸ್ ಅನ್ನಿ? ಕೂಡಲೇ ಕಿವಿ ನೆಟ್ಟಗಾಗುತ್ತದೆ. ವಿಶೇಷವಾಗಿ ಪಡ್ಡೆ ಹುಡುಗರ ಮನಸ್ಸಲ್ಲೇನೋ ಸಂತೋಷ ಉಕ್ಕಿ ಹರಿಯುತ್ತದೆ, ಯಾವುದೋ ಕನಸಿನ ಲೋಕ ಕಣ್ಮುಂದೆ ತೆರೆದುಕೊಳ್ಳುತ್ತದೆ. ಅನೇಕ‌ ಜನ ಅಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂದು ಕನಸು ಕಾಣ್ತಾರೆ. ಲೆಕ್ಕವಿಲ್ಲದಷ್ಟು ಜನರು ಭೇಟಿ ಮಾಡಬೇಕೆಂದುಕೊಂಡಿರುವ ಮಾಯಾಲೋಕವದು.las vegas

ನೋಡಿದಷ್ಟೂ ಮುಗಿಯದ ವೆನಿಸಿನ, ಐಫೆಲ್ ಟವರಿನ, ಪಿರಮಿಡ್ಡಿನ ಹಾಗೂ ಇತರ ಮಾದರಿಯ ವಿಶಾಲವಾದ ಹೋಟೆಲುಗಳು; ಅದರೊಳಗಿನ ವಿಭಿನ್ನವಾದ ಆಕರ್ಷಣೆಗಳು; ಜೂಜಿನ ಅಡ್ಡೆಗಳು ಮತ್ತು ಆ ಅಡ್ಡೆಗಳಲ್ಲಿ ಹರಿಯುತ್ತಿರುವ ಹಣದ ಮತ್ತು ಮದ್ಯದ ಹೊಳೆಗಳು; ಅಮ್ಯೂಸ್‌ಮೆಂಟ್ ಪಾರ್ಕುಗಳು; ಅತ್ಯದ್ಭುತವಾದ ಕಾರಂಜಿಗಳು; ಕಂಡು ಕೇಳರಿಯದ ಬೆಂಕಿಯ ಕಾರಂಜಿ; ಹೇಳಿದರೂ ಮುಗಿಯದಷ್ಟು ವಿಶೇಷತೆಗಳು.las vegas

ಇದೆಲ್ಲಾ ಇರುವುದು ಸರಿಸುಮಾರು ೭ ಕಿಲೋಮೀಟರಿನಷ್ಟು ಉದ್ದದ ಸ್ಟ್ರಿಪ್ ಎನ್ನುವ ಪ್ರದೇಶದಲ್ಲಿ. ಹಗಲು ಹೊತ್ತಿನಲ್ಲಿ ಸೋಮಾರಿಯಂತೆ ಅರೆನಿದ್ರೆಯಲ್ಲಿರುವ ಈ ಪ್ರದೇಶ ಸಂಜೆಯಾಗ್ತಾ ಇದ್ದಂತೆ ಒಂದು ಮಾಯಾಲೋಕವನ್ನೇ ಸೃಷ್ಟಿಸುತ್ತವೆ. ಹಣ ಮತ್ತು ಮದ್ಯ ಅಕ್ಷರಶಃ ಹೊಳೆಯಾಗಿ ಹರಿಯುತ್ತದೆ, ಮಧ್ಯರಾತ್ರಿಯವರೆಗೂ ಈ ಮಾಯಾಲೋಕದ ಸಂಭ್ರಮ ಅವ್ಯಾಹತವಾಗಿ ಮುಂದುವರೆಯುತ್ತವೆ. ಒಂದು ರಾತ್ರಿಯಲ್ಲಿ ಇದನ್ನ ನೋಡಿ ಮುಗಿಸಲು ಖಂಡಿತ ಸಾಧ್ಯವಿಲ್ಲ. ಸಂಪೂರ್ಣವಾಗಿ ನೋಡಿ ಮುಗಿಸಲು ಕನಿಷ್ಟ ೩-೪ ರಾತ್ರಿಗಳು ಬೇಕಾಗುತ್ತವೆ. ಒಂದೊಂದೇ ಹೋಟೆಲುಗಳಿಗೆ ಒಳ ಹೊಕ್ಕರೆ ಸಂಪೂರ್ಣ ನೋಡಿ‌ ಮುಗಿಸಲು ಅರ್ಧ ದಿನ ಬೇಕು. ನಮಗೆ ಸರಿಯಾಗಿ ನೋಡಲು ಸಾಧ್ಯವಾಗಿದ್ದು ಕೇವಲ ಎರಡನ್ನ. ಸೀಸರ್ ಪ್ಯಾಲೆಸ್ ಎಂಬ ಹೋಟೆಲಿನಲ್ಲಿ ಹಗಲೋ ರಾತ್ರಿಯೋ ಅಂತ ಗೊಂದಲವಾಗುವಷ್ಟರ ಮಟ್ಟಿಗಿನ ಭ್ರಮಾಲೋಕ ಸೃಷ್ಟಿಸಿದ್ದಾರೆ. ನಮಗಿರುವ ೭-೮ ಗಂಟೆಗಳ ಅವಕಾಶದಲ್ಲಿ ನಾವು ನೋಡಿದ್ದು ಬಹಳ ಅಂದರೆ ಬಹಳ ಕಮ್ಮಿ. ನಮ್ಮನ್ನ ಬಿಡಿ, ಒಮ್ಮೆ ಪೂರ್ತಿಯಾಗಿ ನೋಡಿದವರೂ ಇದರ ಮೋಡಿಗೆ ಒಳಗಾಗಿ ಮತ್ತೆ ಮತ್ತೆ ಬರಬೇಕೆಂದು ಅಂದುಕೊಳ್ಳುತ್ತಾ ಅಸಮಧಾನದಿಂದಲೇ ಊರು ಬಿಡುತ್ತಾರೆ.

ಆದರೆ ಈ ಪ್ರದೇಶಗಳು ಅತ್ಯಂತ ಬಿಗಿಯಾದ ಕಾನೂನಿನ ನಿಬಂಧನೆಗೆ ಒಳಪಟ್ಟಿವೆ. ಅತಿರೇಕಿಗಳನ್ನ, ಕಾನೂನು ಉಲ್ಲಂಘಿಸುವವರ ಹದ್ದಿನ ಕಣ್ಣಿನಿಂದ ಕಾಯುತ್ತಿರುತ್ತಾರೆ. ಜೂಜಿನ ಅಡ್ಡೆಯೊಳಗೆ ಮಕ್ಕಳ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ದೊಡ್ಡವರ ಜೊತೆ ನಡೆದು ಹೋಗಲು ಕೆಲವೆಡೆ ಸಮಸ್ಯೆಯಿಲ್ಲವಾದರೂ ನಿಂತು ನೋಡುವುದನ್ನ, ಆಡುವುದನ್ನ ಪ್ರತಿಬಂಧಿಸಲಾಗಿದೆ.

ಆದರೆ ಇದೇ ವೇಗಸ್ಸಿಗೆ ಇನ್ನೊಂದು ಮುಖವೂ ಇದೆ. ನಿತ್ಯ ನೂರಾರು ಜನರ ಜೀವನವನ್ನು ಇಲ್ಲಿನ ಜೂಜು ಹಾಳು ಮಾಡುತ್ತವೆ. ಜೂಜಾಡುವಾಗ ಸ್ವಯಂ ನಿಯಂತ್ರಣವಿರಲಿ ಎಂಬರ್ಥದ ಬೋರ್ಡುಗಳು, ಧೂಮಪಾನ ಹಾನಿಕರ ಎಂಬ ಬೋರ್ಡಿನಷ್ಟೇ ಪರಿಣಾಮಕಾರಿ. ಪ್ರತಿಬಾರಿ ಸೋತಾಗಲೂ ಮತ್ತೆ ಗೆಲ್ಲುವ ನಿರೀಕ್ಷೆಯೊಂದಿಗೆ, ಗೆದ್ದಾಗ ಇನ್ನೂ ಹೆಚ್ಚು ಗೆಲ್ಲುವ ದುರಾಸೆಯೊಂದಿಗೆ ಆಡುವ ಜನರಲ್ಲಿ ಗೆದ್ದವರೆಷ್ಟೋ ಸೋತವರೆಷ್ಟೋ !? ಈ ಮಾಯಾನಗರಿಗೆ ಬಲಿಯಾದ ಮಾನವರ ಸಂಖ್ಯೆಗೆಂತೂ ಖಂಡಿತ ಲೆಕ್ಕವಿಲ್ಲ. ಅಷ್ಟಿದ್ದರೂ ಒಂದು ನೆಮ್ಮದಿಯ ಅಂಶವೆಂದರೆ, ಈ ರಾಜ್ಯದ ಉಳಿದ ಕೆಲವೆಡೆ ವೇಶ್ಯಾವಾಟಿಕೆಯನ್ನ ಕಾನೂನುಬದ್ಧಗೊಳಿಸಿದ್ದರೂ ವೇಗಸ್ಸಿನಲ್ಲಿ ಅದಕ್ಕೆ ಅನುಮತಿಯಿಲ್ಲ.

ನೋಡಿ ನೆವಾಡಾ ಬಗ್ಗೆ ಹೇಳುತ್ತಾ ಬರೀ ವೇಗಸ್ಸಿನ ಬಗ್ಗೆ ಪುರಾಣ ಕೊಚ್ಚಲು ಶುರುಮಾಡಿದೆ. ಅಲ್ಲಾ, ಕರ್ನಾಟಕದ ಸುಮಾರು ಒಂದೂವರೆ ಪಟ್ಟು ದೊಡ್ಡದಿರುವ ಈ ನೆವಾಡಾ ರಾಜ್ಯದ ದಕ್ಷಿಣ ತುದಿಯಲ್ಲಿನ ಲಾಸ್ ವೇಗಸ್ ಎಂಬ ನಗರ ಬಿಟ್ಟರೆ ಹೇಳಲು ಇನ್ನೇನಿದೆ? ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ಮುಕ್ಕಾಲು ಭಾಗ ಮರುಭೂಮಿ ಮತ್ತು ಅರೆ ಮರುಭೂಮಿಗಳಿಂದಲೇ ತುಂಬಿದೆ. ಒಂದು ಕಾಲದಲ್ಲಿ ಅತೀ ಕಡಿಮೆ ಜನಸಂಖ್ಯೆ ಹೊಂದಿದ್ದ ಇದು ಕಾಲಾನಂತರದಲ್ಲಿ ವೇಗಸ್ಸಿನ ಕಾರಣದಿಂದ ಜನಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿತು. ಗಣಿಗಾರಿಕೆಯಿಂದ ಗಣನೀಯ ಪ್ರಮಾಣದ ಆದಾಯ ಬರುವುದು ಹೌದಾದರೂ ರಾಜ್ಯದ ಆದಾಯದ ದೊಡ್ಡ ಪಾಲು ಬರುವುದು ಪ್ರವಾಸೋದ್ಯಮದಿಂದ, ಅದರಲ್ಲೂ ವೇಗಸ್ಸಿನಿಂದ. ಹೇಗೆ ಏನು ಎಂದು ಮೇಲೆ ಸಾಕಷ್ಟು ಹೇಳಿದೀನಿ. ಇನ್ನೇನೂ ಹೇಳಲು ಉಳಿದಿಲ್ಲ.

ನಿಮ್ಮಲ್ಲಿ ಯಾರಾದರೂ ವೇಗಸ್ ಸುತ್ತಮುತ್ತಲಿನ ಪ್ರದೇಶಗಳ ಬಿಟ್ಟು ಉಳಿದ ಭಾಗಗಳಿಗೆ ಭೇಟಿಕೊಟ್ಟಿದಿದ್ದರೆ ಅಥವಾ ಮುಂದೆ ಭೇಟಿಕೊಟ್ಟರೆ ದಯವಿಟ್ಟು ನಿಮ್ಮ ಅನುಭವಗಳ ಕುರಿತು ಹಂಚಿಕೊಳ್ಳಿ. ತಿಳಿದುಕೊಳ್ಳಲು ಕುತೂಹಲಿಯಾಗಿದ್ದೇನೆ.

ವಿ.ಸೂ:- ಸ್ಟ್ರಿಪ್ಪಿನ ಶುರುವಿನ ಸ್ವಾಗತ ಫಲಕದ ಚಿತ್ರವಿದು.

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

ಅಮೇರಿಕನ್ ಯಾತ್ರೆ; ಶ್ರೀಮಂತರ ನಾಡಿನ ಬಡ ರಾಜ್ಯ ಅರ್ಕನ್ಸಾ – ಬಿಲ್ ಕ್ಲಿಂಟನ್ ಹುಟ್ಟಿದ ನೆಲ, ವಾಲ್ ಮಾರ್ಟ್ ನ ಕೇಂದ್ರ ಸ್ಥಾನ 

las vegas

 

Tags: americalas vegasSpecial
ShareTweetSendShare
Join us on:

Related Posts

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ  ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

by Shwetha
August 13, 2026
0

ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಎಲ್ಲ ರೀತಿಯ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟವನ್ನು...

ನೂತನ ಸಚಿವರಿಗೆ ಖಾತೆ ಹಂಚಿಕೆ;  ಯಾವ ಖಾತೆ?

ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾವ ಖಾತೆ?

by Shwetha
August 13, 2026
0

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಆಗಸ್ಟ್ 3ರಂದು ಸೇರ್ಪಡೆಯಾಗಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ...

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ: BBMP ಸ್ಪಷ್ಟನೆ

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ: BBMP ಸ್ಪಷ್ಟನೆ

by Shwetha
August 13, 2026
0

ನಟ ಪ್ರಕಾಶ್ ರಾಜ್ ಅವರ ಹೆಸರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇನ್ನೂ ನೋಂದಣಿಯಲ್ಲಿದ್ದು, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅವರ ಹೆಸರನ್ನು ಅಳಿಸಲಾಗಿಲ್ಲ...

ಅಮಿತ್ ಶಾ ಮಾತನಾಡುವಾಗ ಮಧ್ಯೆ ಬಾಯಾಡ್ಸ್ತೀರಾ, ಮಾಧ್ಯಮಗಳು ಇಲಿಗಳು: ಸಂಸತ್ ಹೊರಗೆ ರಾಹುಲ್ ಗಾಂಧಿ ರೋಷಾವೇಷ

ಅಮಿತ್ ಶಾ ಮಾತನಾಡುವಾಗ ಮಧ್ಯೆ ಬಾಯಾಡ್ಸ್ತೀರಾ, ಮಾಧ್ಯಮಗಳು ಇಲಿಗಳು: ಸಂಸತ್ ಹೊರಗೆ ರಾಹುಲ್ ಗಾಂಧಿ ರೋಷಾವೇಷ

by Shwetha
August 13, 2026
0

ನವದೆಹಲಿ: ಸಂಸತ್ ಆವರಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಪತ್ರಕರ್ತರನ್ನು ಇಲಿಗಳಿಗೆ ಹೋಲಿಸಿ...

ಪರಪ್ಪನ ಅಗ್ರಹಾರ ಜೈಲಿನ ಮೇಲಿನ ಸಿಸಿಬಿ ದಾಳಿ ನನ್ನದೇ ಪ್ಲಾನ್: ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಸಿಕ್ಕ ಬೆನ್ನಲ್ಲೇ ರೇಡ್ ಮಾಡಿಸಿದ್ದು ನಾನೇ ಎಂದ ಪ್ರಿಯಾಂಕ್ ಖರ್ಗೆ

ಪರಪ್ಪನ ಅಗ್ರಹಾರ ಜೈಲಿನ ಮೇಲಿನ ಸಿಸಿಬಿ ದಾಳಿ ನನ್ನದೇ ಪ್ಲಾನ್: ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಸಿಕ್ಕ ಬೆನ್ನಲ್ಲೇ ರೇಡ್ ಮಾಡಿಸಿದ್ದು ನಾನೇ ಎಂದ ಪ್ರಿಯಾಂಕ್ ಖರ್ಗೆ

by Shwetha
August 13, 2026
0

ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಕಾರ್ಯಾಚರಣೆ ವೇಳೆ ಜೈಲಿನಲ್ಲಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram