ADVERTISEMENT

ಇಂದು ಚಿರು ನಮ್ಮೊಂದಿಗೆ ಇದ್ದಿದ್ರೆ 35 ವರ್ಷ ತುಂಬುತ್ತಿತ್ತು

ಬೆಂಗಳೂರು : ವಿಧಿ ನೀ ಎಷ್ಟು ಕ್ರೂರಿ.. ಈ ಸಾವು ನ್ಯಾಯವಾ..? ಛೇ ಇದೆಂಥಾ ಸಾವು..! ಈ ರೀತಿ ಆಗಲೇ ಬಾರದಿತ್ತು..! ಇವು ಚಂದನವನದ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನದ ಸುದ್ದಿ ಕೇಳಿದ ಪ್ರತಿ ಒಬ್ಬರ ಅಂತರಾಳದ ಮಾತುಗಳು.. ಅಂದು ವಿಧಿಯಾಟಕ್ಕೆ ತಲೆಬಾಗಿ ಚಿರು ಚಿರ ನಿದ್ರೆಗೆ ಜಾರಿದ್ದರು. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿತ್ತು. ಅತಿ ಚಿಕ್ಕ ವಯಸ್ಸಿನ ನಟ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಆಘಾತ ನೀಡಿತ್ತು.

chiru sarja birthday

Related posts

ಇಂದು ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮೊಂದಿಗೆ ಇದ್ದಿದ್ರೆ 35ವರ್ಷ ತುಂಬುತ್ತಿತ್ತು. ಆದ್ರೆ ಇವತ್ತು ಚಿರು ಸರ್ಜಾ ನಮ್ಮೊಂದಿಗಿಲ್ಲ. ಇಂದು ಚಿರು ಸರ್ಜಾರ ಜನ್ಮದಿನ. ಪ್ರತಿವರ್ಷ ಚಿರು ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಇಂದು ಚಿರು ಕಟೌಟ್ ಮುಂದೆ ಕೇಕ್ ಕಟ್ ಮಾಡಿ, ಅರ್ಥ ಪೂರ್ಣವಾಗಿ ಬರ್ತ್ ಡೇ ಸೆಲಬ್ರೇಟ್ ಮಾಡಲಾಗಿದೆ.

ನನ್ನ ಜಗತ್ತಿಗೆ ಹ್ಯಾಪಿ ಬರ್ತ್ ಡೇ

ತುಂಬು ಗರ್ಭೀಣಿಯಾಗಿರುವ ಮೇಘನಾ ರಾಜ್ ತಮ್ಮ ಪ್ರೀತಿಯ ಯಜಮಾನರಿಗೆ ಇನ್ಸ್ ಸ್ಟಾ ದಲ್ಲಿ ಬರ್ತ್ ಡೇ ವಿಶ್ ಮಾಡಿದ್ದಾರೆ. ಚಿರು ಅವರ ಮುದ್ದಾದ ಫೋಟೋವೊಂದನ್ನು ಪೋಸ್ಟ್ ಮಾಡಿ, ನನ್ನ ಜಗತ್ತಿಗೆ ಹ್ಯಾಪಿ ಬರ್ತ್ ಡೇ, ಚಿರು ಐ ಲವ್ ಯೂ, ಶಾಶ್ವತವಾಗಿ, ಯಾವಾಗಲೂ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CGbiUHbHONL/?utm_source=ig_web_button_share_sheet

ಇಂದೇ ಜ್ಯೂ. ಚಿರು ಆಗಮನ
ನಿನ್ನೆ ಬೆಳಗ್ಗೆ ಸರ್ಜಾ ಫ್ಯಾಮಿಲಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಚಿರು ಬರ್ತ್ ಡೇ ಗೆ ವಿಶ್ ಮಾಡುವುದರ ಜೊತೆಗೆ ಜೂನಿಯರ್ ಚಿರುಗೂ ಸ್ವಾಗತ ಕೋರಿದ್ದಾರೆ. ತುಂಬು ಗರ್ಭಿಣಿಯಾದ ಮೇಘನಾಗೆ ಇಂದು ವೈದ್ಯರು ಡೆಲಿವರಿ ಡೇಟ್ ಕೊಟ್ಟಿರುವ ಕಾರಣ, ಅವರು ಇಂದು ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಮೂಲಗಳು ತಿಳಿಸಿವೆ.

chiru sarja birthday
ಚಿರು ಕುಡಿಯನ್ನು ಬರಮಾಡಿಕೊಳ್ಳಲು ಸರ್ಜಾ ಫ್ಯಾಮಿಲಿ ಕಾತುರದಿಂದ ಎದುರು ನೋಡ್ತಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Join us on: