ಬೆಂಗಳೂರು : ಪ್ರವಾಹ ಹಾಗೂ ರಾಜ್ಯಕ್ಕೆ ಎದುರಾದ ನಷ್ಟಗಳ ಕುರಿತು ಆಂಧ್ರ ಹಾಗೂ ತೆಲಂಗಾಣ ಸಿಎಂಗಳ ಜೊತೆ ಚರ್ಚಿಸುವ ಪ್ರಧಾನಿ ನರೇಂದ್ರ ಮೋದಿ, (Modi ) ಕರ್ನಾಟಕವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy)ಕಿಡಿಕಾರಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್‍ನಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರವಾಹ ವಿಚಾರದಲ್ಲಿ ರಾಜ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ.
ಇದನ್ನೂ ಓದಿ : ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ : `ಎಚ್ಚೆತ್ಕೊಳಿ ಮೋದಿಯವರೇ’
ಇದು ರಾಜ್ಯದ ಜನರಿಗೆ ಮೋದಿ ಮಾಡುತ್ತಿರುವ ಅವಮಾನ ಎಂದು ಗುಡುಗಿದರು.
ರಾಜ್ಯದಿಂದ ಒಟ್ಟು 25 ಸಂಸದರಿದ್ದಾರೆ. ಆದರೂ ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯವರು ರಾಜ್ಯವನ್ನು ಪರಿಗಣಿಸುತ್ತಿರುವ ಪರಿಯನ್ನು ನೋಡಿದರೆ, ನಮ್ಮ ರಾಜ್ಯ ಸಂದಸರು ತಾವು ಜನರಿಗೆ ಏನನ್ನು ಮಾಡುತ್ತಿದ್ದಾರೆಂಬುದರ ಕುರಿತು ತಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡನ್ನ ಹೊಗಳಿದ ಸಿ.ಟಿ.ರವಿಗೆ ಕನ್ನಡಿಗರಿಂದ ತರಾಟೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










