godra
ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾವಾಗಿದ್ದ ಗಾದ್ರಾ ಸಿನಿಮಾದ ಶೂಟಿಂಗ್ ಈಗಾಗಲೇ ಮುಕ್ತಾಯಗೊಂಡಿದ್ದು, ಚಿತ್ರ ತೆರೆಗಪ್ಪಳಿಸಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಸತೀಶ್ ನಿನಾಸಂ ಹಾಗೂ ಶ್ರದ್ಧಾ ಶ್ರೀನಾಥ್ ನಟನೆಯ ಈ ಚಿತ್ರಕ್ಕೆ ವಿಘ್ನ ಎದುರಾಗಿದೆ. ಹೌದು ಚಿತ್ರದ ಬಗ್ಗೆ ಕುತೂಹಲ ಮೂಡಿಸಿರುವ “ಗೋದ್ರಾ” ಶೀರ್ಷಿಕೆಯನ್ನೇ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎನ್ನಲಾಗಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಾಯಿತ ಟೈಟಲ್ ಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟ ಪಡಿಸಿದೆ. ಸೆನ್ಸಾರ್ ಮಂಡಳಿ ಸೂಚನೆಯ ಬಳಿಕ ಚಿತ್ರತಂಡಕ್ಕೆ ಗೊಂದಲ ಉಂಟಾಗಿದೆ. ಕಥೆಗೆ ಸೂಕ್ತ ಎಂದು ಚಿತ್ರಕ್ಕೆ ಹೆಸರಿಟ್ಟಿರುವ ಚಿತ್ರತಂಡ ಈಗ ಟೈಟಲ್ ಬದಲಾಯಿಸುವ ಬಗ್ಗೆ ಸಂಕಷ್ಟಕ್ಕೆ ಸಿಲುಕಿದೆ.
ಭಾವುಕರಾಗಿ ಪ್ರೀತಿಯ ಪತಿ ‘ಚಿರು’ಗೆ ಹುಟ್ಟುಹಬ್ಬದ ಶುಭಕೋರಿದ ಮೇಘನಾ..!
‘ಗೋದ್ರಾ’ ಚಿತ್ರವನ್ನು ಕೆ.ಎಸ್.ನಂದೀಶ್ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸತೀಶ್ ನೀನಾಸಂ, ಶ್ರದ್ಧಾ ಜೊತೆ ವಸಿಷ್ಠಸಿಂಹ ಮತ್ತು ರಕ್ಷಾ ಸೋಮಶೇಖರ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಟೈಟಲ್ ಕೇಳುತ್ತಿದ್ದಂv ಗುಜರಾತ್ ನ “ಗೋಧ್ರಾ” ಹತ್ಯಾಕಾಂಡ ಪ್ರಕರಣ ನೆನಪಾಗುತ್ತೆ. ಆದ್ರೆ ಆ ಪ್ರಕರಣಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಸ್ಪಷ್ಟೀಕರಿಸಿದೆ. ‘ಗೋಧ್ರಾ ಎಂಬುದು ಒಂದು ಊರಿನ ಹೆಸರು, ಅಷ್ಟೇ ಎಂದು ಸ್ಪಷ್ಟನೆ ನೀಡಿದ್ರು ಸೆನ್ಸಾರ್ ಮಂಡಳಿಯಿಂದ ಚಿತ್ರ ರಿಲೀಸ್ ಗೆ ತೊಡಕು ಎದುರಾಗಿದೆ.
godra
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








